Tuesday, April 27, 2010

ಎಷೆಲ್ಲಾ ಬೈದ್ರೂ..ನನ್ನ ಮಗಳಲ್ವ...ಯಾವುದೋ ಕಿನ್ನರಳೇ ಇರಬೇಕು..

ನನ್ನ ಮಗಳು...ಹೊಟ್ಟೇಲಿದ್ದಾಗಲಿಂದಲೂ ಅವರಮ್ಮ ಅವಳಿಗೆ ಕಥೆಗಳ ಹುಚ್ಚು ಹಿಡಿಸಿದ್ದಾಳೆ. ರಾತ್ರಿ ಮಲಗುವಾಗಲಂತೂ ಕೈಯಲ್ಲಿ ಯಾವುದೋ ಲೋಕದ ಸುಂದರಿಯ ಚಿತ್ರಗಳ ಪುಸ್ತಕ ಹಿಡಿದೇ ಮಲಗುವ ಅಬ್ಯಾಸ.


ಹೀಗಾಗಿ, ಅವಳಿಗೆ ಅವಳೇ ಒಬ್ಬ "ಪ್ರಿನ್ಸಸ್" ಅನ್ನುವ ಗುಂಗು.

"ಏ...ಅದು ಇಂಗ್ಲೀಷ್ ರಾಜಕುಮಾರಿ ಕಣೆ..ನಮಗೂ ಅವರಿಗೂ ಸಂಬಂಧವಿಲ್ಲಾ.."

ಅಂದಿದ್ದಾಯಿತು...

"ಹಿಂಗೆ...ನೀನು ಪ್ರಿನ್ಸೆಸ್ಸೂ...ಫೈರಿ ಅಂತಾ ಇದ್ರೆ..ಜನ ನಾಟಕದವಳೂ ಅಂತ ನಗ್ತಾರೆ"

ಅಂತ ಹೆದರಿಸಿದ್ದಾಯಿತು.



"ನಿನಿಗೆ ನಾನು ಪ್ರಿನ್ಸೆಸ್ ಆದ್ರೆ ಹೊಟ್ಟೇ ಕಿಚ್ಚು" ಅಂತ ತಿರುಗಿ ಬೈತಾಳೆ.



ಏನಂದ್ರೂ ಇಲ್ಲ. ಮೊನ್ನೆ ಹೋಗಿ ನಲವತ್ತು ರೂಪಾಯಿಯ ಒಂದು ಸಣ್ಣ, ಬ್ಯುಟೀ ಕ್ವೀನ್ ಗಳ ಕಿರೀಟ ಕೊಂಡು ಬಂದು, ಅದನ್ನ ಹಾಕಿ ಕೊಂಡೇ ಕೂತಿರ್ತಾಳೆ. ಯಾವುದೋ ಲೋಕದಲ್ಲಿ ಕಳೆದು ಹೋಗಿರ್ತಾಳೆ..

"ಸ್ವಲ್ಪ ದಿನ ಹಂಗಿರ್ತಾಳೆ ಬಿಡ್ರಿ, ಎಲ್ಲಾ ಹೆಣ್ಣು ಮಕ್ಕಳೂ ಹಂಗೆ. ನಾನೂ ಹಂಗಿದ್ದೆ"

ಅಂತ ನನ್ನ ಹೆಂಡತಿ ಸಮಾಧಾನ..

ಮೊನ್ನೆ..

"ಪಪ್ಪ ನನ್ನನ್ನ ಪ್ರಿನ್ಸಸ್ ತರಹ ಶೂಟ್ ಮಾಡಿಕೊಡು" ಅಂತ ಹೆಗಲು ಬಿದ್ದಳು.

ಇನ್ನೇನು, ಅದೂ ಒಂದು ಮುಗಿದು ಹೋಗಲಿ ಅಂತ...

ಮಾಡಿದೆ :)

ಎಷೆಲ್ಲಾ ಬೈದ್ರೂ..ನನ್ನ ಮಗಳಲ್ವ...ಯಾವುದೋ ಕಿನ್ನರಳೇ ಇರಬೇಕು..:)

5 comments:

ಸುಪ್ತವರ್ಣ said...

ಹ್ಹ ! ನಿಮ್ಮ ಕ್ಯಾಮೆರಾಗೆ ಸಿಕ್ಕ ಮೇಲೆ ಕೇಳ್ಬೇಕಾ? ಕಿನ್ನರಿಯನ್ನು ಸೃಷ್ಟಿಸಿಯೇ ಬಿಡುತ್ತೀರಿ ನೀವು!

ಸಂದೀಪ್ ಕಾಮತ್ said...

ಕಿರೀಟ ಹಾಕಿದ್ರಂತೂ ಪಕ್ಕಾ ಪ್ರಿನ್ಸೆಸ್ !

~mE said...

yestu chanda maglu, avla neen pricess alla anthiralla..Nim taste solpa vichitra :)
tumba channagide picture :) Nan hatra ond kereta iday..courier madla :)

Mahen said...

ಸುಪ್ತವರ್ಣ ಥ್ಯಾಂಕ್ಸ್. ಮಕ್ಕಳೇ ಹಾಗೆ ಹೇಗಿದ್ದರೂ ಮುದ್ದಾಗಿರ್ತಾರೆ.

ಸಂದೀಪ್ ಹ ಹ ಹ. ಹೆತ್ತವರಿಗೆ ಎಲ್ಲಾನೂ ಮುದ್ದು.

ರೀ..ಮಕ್ಕಳನ್ನ ಹಾಳು ಮಾಡ್ತೀರ ನೀವು. ಮೊದಲೇ ಅವಳು ಅರ್ಧ ಪ್ರಿನ್ಸೆಸ್ಸು, ಅದರಮೇಲೆ ಇನ್ನೋಂದು ಕಿರೀಟನ? ಸರಿ ಸರಿ...ಒದ್ತಾಳೋ ಇಲ್ಲವೋ ಅಂತ ನಾನು ತಲೆ ಕೆಡಿಸಿ ಕೊಳ್ತಾ ಇದ್ರೆ...ನೀವೊಬ್ರು

~mE said...

lol odthale odthale yella madthale..neev sumne tale kediskolbaydi :)

Related Posts with Thumbnails