Tuesday, March 30, 2010

ಬೇಗಾನಿ ಶಾದಿಮೇ ಅಬ್ದುಲ್ಲಾ ದೀವಾನ....



ಅವರ್ನ್ ಬಿಟ್ಟ್...ಇವರ್ನ್ ಬಿಟ್ಟ್...ಇನ್ನ್ಯಾರು ಅಂತ, ಸಾನ್ಯ ಮಿರ್ಜಾ ಮದ್ವೆ ಆಗ್ತಾ ಇದ್ರೆ..ದೇಶದಲ್ಲಿರೋ ಟೀವಿ ಚಾನಲ್ ಗಳಿಗೆಲ್ಲಾ ಏನೋ ಸಂಬ್ರಮ. ಅವಳು ಯಾರನ್ನೋ ಮದುವೆ ಆಗ್ಬೇಕಿತ್ತು ಆಗ್ತಾಳೆ, ಒಂದಷ್ಟು ದಿನ ಇರ್ತಾಳೆ, ಪಾಕಿಸ್ತಾನದ ಸಂಪ್ರದಾಯಿಕ ಸಮಾಜದಲ್ಲಿ ಉಸಿರುಗಟ್ಟಿ "ಲಾಸ್ಟ್ ಸರ್ವ್" ಮಾಡಿ ಬರ್ತಾಳೆ. ಅದಕ್ಕ್ಯಾಕೆ ನಮ್ಮ ಚಾನಲ್ ಗಳೆಲ್ಲಾ "ಬೇಗಾನಿ ಶಾದಿಮೇ ಅಬ್ದುಲ್ಲಾ ದೀವಾನ" ತರಹ ಆಡ್ತಾ ಇದ್ದಾರೋ ಗೊತ್ತಿಲ್ಲ.

"ಟಿ-ಟ್ವೆಂಟಿ ವರ್ಲ್ಡ್ ಕಪ್ ಸೋತಿದ್ದಕ್ಕೆ ಸಮಸ್ತ ಮುಸ್ಲಿಂ ಜನಾಂಗದ ಕ್ಷೇಮೆ ಕೇಳ್ತೇನೆ" ಅಂತ ಹೇಳಿಕೆ ಕೊಟ್ಟ ಫನ್ಡಮೆಂಟಲ್ ಮುಸಲ್ಮಾನ ಶೋಯಬ್ ಮಲ್ಲಿಕ್. ಆಕೆಯದೇ ಸಮಾಜ ಹೇರಲು ಇಚ್ಚಿಸಿದ ಎಲ್ಲಾ ಕಟ್ಟು ಪಾಡುಗಳನ್ನು ಬದಿಗಿಟ್ಟು,ಟಿ-ಶರ್ಟ್,ಶಾರ್ಟ್ಸ್ ಹಾಕಿ ಟೆನಿಸ ಆಡಿ, ಮುಕ್ತ ಭಾರತದ ಹೆಣ್ಣು ಮಕ್ಕಳ ಪ್ರತಿನಿದಿ ಎನ್ನಿಸಿದ ಸಾನಿಯ, ಅದು ಹೇಗೆ ಇದು ಜೋಡಿ ಆಯಿತು? ಗೊತ್ತಗುತಿಲ್ಲ. ಧರ್ಮದ ಸೆಳೆತ ಇದ್ರೆ..ದೇಶದ ಬೌಂಡ್ರಿ ಲೈನೆಲ್ಲಾ ಅಳಿಸೊಗುತ್ತೆ ಅನ್ಸುತ್ತೆ. ಮುಂಬೈನ ಹೋಟೇಲು ಧಾಳಿಯಲ್ಲಿ ಹೋರಾಡಿ,ಕುಮಾರನಾಗೇ ಸತ್ತ, ಕಾಮಾಂಡೊ ಸಂದೀಪ್ ಉನ್ನಿ ಕೃಷ್ಣನ್ ಮೇಲೆಲ್ಲೋ ನಿಟ್ಟುಸಿರು ಬಿಟ್ಟಿರಬೇಕು.
ಅಹಾ! ಭಾರತಕ್ಕೆ ಇನ್ನೊಂದು ಗರಿ, ದಾಳಿ ಮಾಡಿದ ರಾಷ್ಟ್ರಕ್ಕೇ ಹೆಣ್ಣು ಕೊಟ್ಟ ಸಂಭ್ರಮ. ಲೈನ್ ಆಫ್ ಕಂಟ್ರೋಲ್ ನಲ್ಲಿ ನಿಂತ ಯೋಧರಿಗೆ ಮದ್ವೆ ಸ್ವೀಟು ಅಂತ, ಕಾರಾಚಿ ಬಿಸ್ಕಟ್ ಕಳ್ಸಮ್ಮಾ ಅಂತ ಕೇಳ್ಬೇಕು ಸಾನಿಯಾಗೆ.
ಅದೆಲ್ಲಾ ಹಾಳಾಗಿ ಹೋಗ್ಲಿ, ನಿಜ ಹೇಳ್ಬೇಕು ಅಂದ್ರೆ ಇದೊಂತರಹ "ಪ್ರತಿಭಾ" ಪಾಲಾಯನನೇ. ನಮ್ಮ ಇರ್ಫಾನ್ ಪಠಾಣು, ಮುನಾಫ್ ಪಟೇಲು ಗಳು ಇವಳನ್ನ ಇಲ್ಲೆ ಉಳಿಸಿಕೊಳ್ಳಕ್ಕೆ ಆಗಲಿಲ್ಲವಲ್ಲಾ..ಛೆ....ಛೆ..

ಪ್ಯಾಂಟು ಶರ್ಟು ಹಾಕೊಂಡು ಹೋದ ನಮ್ಮ ಹುಡುಗಿ, ಬುರ್ಕಾ ಹಾಕೊಂಡು ಬರ್ದೇ ಇದ್ರೆ ಅಷ್ಟೇ ಸಾಕು.

ಇನ್ಷಾ ಅಲ್ಲ್ಹಾ.

No comments:

Related Posts with Thumbnails