Wednesday, June 15, 2011

ಕಾಲ್ ಸೆಂಟರ್ ಗಳ ಮೇಲೆ ಒಂದು ಇಂಗ್ಲೀಷ್ ಪುಸ್ತಕವೂ ಮತ್ತದರಲ್ಲಿ ಕನ್ನಡಿಗರ ಪಾಡು.


ಮೊನ್ನೆ, ಅಪರೂಪಕ್ಕೆ ಒಂದು ಇಂಗ್ಲೀಷ್ ಪುಸ್ತಕ ಒಂದನ್ನು ಓದಲಿಕ್ಕೆ ಕೈಗೆತ್ತು ಕೊಂಡಿದ್ದೆ. ಕ್ರಾಸ್ ವರ್ಡ್ ಪುಸ್ತಕ ಮಳಿಗೆಗೆ ಹೋದಾಗ ಕಂಡ “ಬ್ಯಾಂಗ್ಳೂರ್ ಕಾಲಿಂಗ್” ಅನ್ನುವ ಪುಸ್ತಕ ಕುತೂಹಲ ಮೂಡಿಸಿತ್ತು. ಕಾಲ್ ಸೆಂಟರ್ ಗಳ ಕಥೆಗಳನ್ನು ಬಹಳಷ್ಟು ಕೇಳಿದ್ದ ನನಗೆ, ಈ ಪುಸ್ತಕದಲ್ಲಿ ಇನ್ನಷ್ಟು ಒಳನೋಟಗಳೇನಾದರೂ ಇದೆಯೇನೋ ನೋಡುವ ಅನ್ನಿಸಿ ಓದಲು ಕೊಂಡೆ. “ಕಾಲ್ ಅಸ್” ಎನ್ನುವ ಒಂದು ಕಾಲ್ಪನಿಕ ಕಾಲ್ ಸೆಂಟರ್ ನ ಹಲವು ಪ್ರಮುಖ ಪಾತ್ರಗಳ ವಿವರಣೆ ಕೊಡುತ್ತಾ, ಒಂದು ಅಲ್ಲಿ ನಡೆದ ಅಥವ ನಡೆಯುವ ಒಟ್ಟು ಕಥೆಯನ್ನು ಕಟ್ಟಿಕೊಡುವ ಪ್ರಯತ್ನ ಲೇಖಕಿಯದು. ಲೇಖಕಿಯ ಹೆಸರು ಬ್ರಿಂದಾ ಎಸ್. ನಾರಯಣ್. ಈಕೆ ಎಲ್ಲಿಯವಳು ಎಂಬುದನ್ನು ತಿಳಿಯಲು ಪ್ರಯತ್ನ ಪಟ್ಟೆ, ಆಕೆ ಅಮೆರೆಕಾದಲ್ಲಿ ಓದಿ, ಇಲ್ಲಿನ ಕಾರ್ಪರೇಟ್ ಸೆಕ್ಟರ್ನಲ್ಲಿ ಕೆಲಸ ಮಾಡಿದ್ದನ್ನು ಹೇಳಿಕೊಳ್ಳುವ ಈಕೆ, ತನ್ನ ಹುಟ್ಟು ಮತ್ತು ಸಂಕ್ಕೃತಿಯ ಬಗ್ಗೆ ಹೇಳಿಕೊಳ್ಳುವುದಿಲ್ಲವಾದ್ದರಿಂದ ಒಂದು ನಮೂನೆಯ “ಓಪನ್ ಮಾರ್ಕೆಟ್ಟಿನ” ಕಂದಮ್ಮ ಎನಿಸುತ್ತದೆ.
ನಿಜವಾಗಿಯೂ...ಪುಸ್ತಕದಲ್ಲಿ ಏನೂ ಇಲ್ಲ. ನಮ್ಮ ವೈದೇಹಿಯವರ ಯಾವುದೇ ಸಣ್ಣಕಥೆಗೂ ಈ ಇಡೀ ಪುಸ್ತಕ ಸಮವಲ್ಲ. ಎಷ್ಟೇ ಓದಿದರೂ ಹೊಸದೂ ಎನ್ನಿಸುವುದೇನೂ ಗೋಚರಿಸುವುದಿಲ್ಲ. ಬೆಂಗಳೂರಿನ ಹೊಲಸು ಹಳಸನ್ನೆಲ್ಲಾ ಬಹಳ ವಿವರಣಾತ್ಮಕವಾಗಿ ಬರೆದಿರುವ ಈಕೆ, ಇದೇ ಇಂಗ್ಳೀಷು ಓದುಗರಿಗೆ ಅತ್ಮೀಯವಾಗಬಹುದು ಎಂಬ ಬ್ರಮೆಯಲ್ಲಿ ಇದ್ದ ಹಾಗಿದೆ. “ಸ್ಲಂ ಡಾಗ್ ಮಿಲೆನಿಯರ್” ಅಥವ “ವೈಟ್ ಟೈಗರ್” ನಂತಹ ಕೃತಿಗಳಂತೆ, ನಮ್ಮ ದೇಶದ ಕಸ ತೆಗೆದು ರಸ ಮಾಡಿಕೊಳ್ಳುವ ಪ್ರಯತ್ನವಿದು ಎನ್ನಿಸುವಷ್ಟರ ಮಟ್ಟಿಗೆ ನೀರಸವಾಗಿದೆ.
ಇದೆಲ್ಲಾ ಹೇಗಾದರೂ ಹಾಳು ಬಿದ್ದು ಹೋಗಲಿ. ಆದರೆ ಈಕೆ ಸೃಷ್ಟಿಸಿರುವ ಪಾತ್ರಗಳಬಗ್ಗೆ ಹೇಳಲು ಬೇಸರವಾಗುತ್ತದೆ. ಎಲ್ಲಿಂದಲೋ ಬರುವ ಇವರು, ಇಲ್ಲಿನ ಜನ ಮತ್ತು ಸಂಸ್ಕೃತಿಯನ್ನು ಗ್ರಹಿಸುವ ಮತ್ತು ಚಿತ್ರಿಸುವ ರೀತಿ ತುಂಬಾ ಪೂರ್ವಾಗ್ರಹ ಪೀಡಿತವಾದದ್ದು ಅನ್ನಿಸುತ್ತದೆ. ಈ ಪುಸ್ತಕದಲ್ಲಿ ಇರುವ ಕ್ಯಾರೆಕ್ಟರ್ ಗಳು ಮತ್ತು ಈಕೆ ಅವುಗಳನ್ನು ರೂಪಿಸಿರುವ ರೀತಿ ನೋಡಿ.
ಕಂಪನಿ ಮಾಲಿಕ : ಉತ್ತರ ಭಾರತೀಯ
ಟ್ಯಾಕ್ಸಿ ಡ್ರೈವರ್ : ಅಯ್ಯಪ್ಪ ಸ್ವಾಮಿಯ ಹಾಡುಕೇಳುವ, ಗಂಡು ಸಂತಾನ ಬಯಸುವ ತೆಲಗು ಭಾಷಿಕ.
ಕಾಲ್ ಸೆಂಟರ್ ಹುಡುಗ : ರಾಕ್ ಮ್ಯುಸಿಕ್ ಇಷ್ಟ ಪಡುವ, ಡ್ರಗ್ ಆಡಿಕ್ಟ್, ಆಂಗ್ಲೋ ಇಂಡಿಯನ್.
ಕಾಲ್ ಸೆಂಟರ್ ಹುಡುಗಿ : ತಳುಕು ಬಳುಕಿಗೆ ಮಾರು ಹೋಗುವ ಮಳಯಾಳಿ ಹುಡುಗಿ.
ಇನ್ನೋಂದು ಕಂಪನಿ ಮಾಲೀಕ : ಬಂಗಾಲಿ.
ಟ್ಯಾಕ್ಸಿ ಕಂಪನಿ ಮಾಲೀಕ : ತಮಿಳೀಗ
ಕೊನೆಗೆ........
ಟಾಯ್ಲೆಟ್ ಕ್ಲೀನ್ ಮಾಡುವ ಹುಡುಗಿ : ಕನ್ನಡದ ಹುಡುಗಿ, ಅವಳಿಗೆ ಕದಿಯುವ ಚಾಳಿಯನ್ನೂ ಲಗತ್ತಿಸಿಲಾಗಿದೆ.
ಹಾಗೆ ನೋಡಿದರೆ ಇದು ಇವತ್ತಿನ ಸತ್ಯವೂ ಇರಬಹುದು. ತನ್ನ ನೆಲ, ಸಂಸ್ಕೃತಿ, ಬೆಳೆಯುವ ಮಕ್ಕಳು, ಎಲ್ಲರನ್ನೂ ಈ ಐಟಿ ಇಂಡಷ್ಟ್ರೀಗೆ ಧಾರೆ ಎರೆದ ಕನ್ನಡಿಗ, ಇವತ್ತು ಅವರ ಟಾಯಲೆಟ್ ಕ್ಲೀನ್ ಮಾಡುತ್ತಿರುವುದು ಒಂದು ರೀತಿಯಲ್ಲಿ ನಿಜವೇ ಇರಬಹುದೇನೋ. ಓದಿ ಬೇಸರವಾಯಿತು.
ಎಲ್ಲೋ ಅಮೆರಿಕೆಯಲ್ಲೋ,,ಯುರೋಪಿನಲ್ಲೋ ಈ ಪುಸ್ತಕವನ್ನು ಓದುವ ಬಿಳಿಯನಿಗೆ. ಕನ್ನಡತಿ ಟಾಯ್ಲೆ ಟ್ ಕ್ಲೀನ್ ಮಾಡುವ ಹುಡುಗಿ ಅನ್ನಿಸಿದರೆ ಏನೋ ಮಾಡಲು ಸಾದ್ಯವಿಲ್ಲ.
ಹಮ್...ಹೇಗಿದೆ ನೋಡಿ ಕನ್ನಡದವರಪಾಡು....ಎಲ್ಲಿಂದಲೋ ಬಂದವರ ಕಣ್ಣಲ್ಲಿ.
Brinda i am sorry..you suck big time as your book 

3 comments:

ವಿ.ರಾ.ಹೆ. said...

ಇಂತವರನ್ನು 'ಓಪನ್ ಮಾರ್ಕೆಟ್ ಕಂದಮ್ಮ' ಎಂದು ಕರೆದಿರುವುದು ಸರಿಯಾಗಿದೆ. ಯಾವುದೋ ನಗರದಲ್ಲಿ ಹುಟ್ಟಿ ಬೆಳೆದು ಭಾರತದ ಇತರ ಪ್ರದೇಶಗಳ, ಜನ, ಸಂಸ್ಕೃತಿಗಳ ಪರಿಚಯವಿಲ್ಲದೇ ಬೆಳೆದಿರುವವರು ಇವರು ಅನ್ನಿಸುತ್ತದೆ. ಡ್ರೈವರ್ ಆಗಲೀ ಟಾಯ್ಲೆಟ್ ಕ್ಲೀನ್ ಮಾಡುವವರಾಗಲೀ ಕೀಳೇನಲ್ಲ, ಆದರೆ ಇದು ದಕ್ಷಿಣ ಭಾರತೀಯರ ಬಗ್ಗೆ, ಕನ್ನಡಿಗರ ಬಗ್ಗೆ ಲೇಖಕಿಯ ಮನೋಭಾವ ತೋರಿಸುತ್ತದೆ. ನಿಮ್ಮ ಫೀಡ್ ಬ್ಯಾಕ್ ಲೇಖಕಿಗೂ ತಲುಪಿಸಿ.

Mahen said...

ಹೌದು ಯಾವುದೇ ಕೆಲಸ ಕೀಳಲ್ಲ.ಆದರೆ ಇಲ್ಲಿ ವಿಷಯ ಅದಲ್ಲ, ಈಕೆಗಿರುವ ಉಡಾಫೆ ಮನೋಭಾವ ನನಗೆ ಸರಿ ಅನ್ನಿಸಲಿಲ್ಲ. ನಿಜ ಹೇಳಬೇಕೆಂದರೆ, ಒಂದು ಪಂಗಡ ಅಥವ ಭಾಷೆಯ ಮೇಲೆ ಅವರಿಗಿರುವ ಭಾವನೆಗಳು ಅವರರವರ ಬರವಣಿಗೆಯಲ್ಲಿ ಕಾಣುತ್ತದೆ. ಅವಳ ಬರಹದಲ್ಲಿರುವ ಕನ್ನಡತಿ ಉತ್ತಮಳಾಗಿಯೇ ರೂಪು ಗೊಳ್ಳಬಹುದಿತ್ತು, ಆದರೆ, ಎಲ್ಲೋ ಅವಳ ಮನೆಯ ಕೆಲಸದ ಕನ್ನಡದವಳ ಒಂದು ತಪ್ಪು ಚಿತ್ರ ಅವಳಿಗೆ ಕನ್ನಡಿಗರೆಲ್ಲರನ್ನು ಒಂದು ಗುಂಪಿಗೆ ಸೇರಿಸುವ ಮನೋಭಾವವನ್ನು ರೂಪಿಸಿರಬೇಕು. ಅದರಿಂದ ಹೊರಬರದವರು ಲೇಖಕರಾದರೆ ಇದೇ ಪರಿಸ್ಥಿತಿ.

Rishikesh Bahadur Desai said...

ಕನ್ನಡಿಗರಿಗೆ ಈ ಪರಿಸ್ಥಿತಿ ಬಂದಿರುವುದು ಯಾಕ? ನಾವು ಈ ಕನ್ನಡ ಓರಾಟಗಾರರ ಮಾತು ಕೇಳಿಕೊಂಡು ನಮ್ಮ ಮಕ್ಕಳಿಗೆ ಇಂಗ್ಲೀಷ್ ಕಲಿಸುವುದು ಬಿಟ್ಟಿದ್ದಕ್ಕೆ. ಕನ್ನಡ ಕನ್ನಡ ಎಂದು ಎದೆ ಬಡಿದುಕೊಂಡವರು ಎಮ್ಮೆಲ್ಲೆಗಳಾದರು, ಯುನಿವರ್ಸಿಟಿಗಳಲ್ಲಿ ವಿಸಿಗಳಾದರು. ನಮ್ಮ ಹುಡುಗ, ಹುಡುಗಿಯರು ಸಂಡಾಸ ತೊಳೆಯಲು ಉಳಿದರು.
ಇಂದು ಬೆಂಗಳೂರಿನಲ್ಲಿ ಕನ್ನಡಿಗರಿಗೆ ಸೆಕ್ಯೂರಿಟಿ, ಟೆಲಿಫೋನ್ ಆಪರೇಟರ್ ಕೆಲಸ ಸಹ ಸಿಗುವುದಿಲ್ಲ.ತಮಿಳುನಾಡು, ಕೇರಳದ ಹುಡುಗರಿಗೆ ಸಿಗುತ್ತದೆ. ಏಕೆಂದರೆ ಅಲ್ಲಿನ ಸರಕಾರಗಳು 1950ರಿಂದಲೇ ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಕಲಿಸುತ್ತಿವೆ. ನಾವು ಇನ್ನಾದರೂ ಬದಲಾಗದಿದ್ದರೆ ನಮ್ಮನ್ನು ಆ ಮಹಾತಾಯಿ ಭುವನೇಶ್ವರಿಯೂ ಉಳಿಸಲಾರಳು!!

Related Posts with Thumbnails