Thursday, May 19, 2011

ಮತ್ತೊಂದಷ್ಟು ರಾಷ್ಟ್ರೀಯ ಪ್ರಶಸ್ಥಿಗಳು ಬಂದವು ಕನ್ನಡ ಚಿತ್ರಗಳಿಗೆ. ಮತ್ತಷ್ಟು ಕಾಡ ಬೆಳದಿಂಗಳು


ಪ್ರಶಸ್ಥಿಗಳ ಹೆಸರಿನೊಂದಿಗೆ ಮತ್ತವೇ ಕೆಲವು ಮುಖಗಳು ಟೀವಿಯಲ್ಲಿ ಕಾಣಿಸಿಕೊಂಡಿವೆ. ಚಿತ್ರಗಳು ಯಾವಾಗ...ಯಾರಿಗಾಗಿ..ಯಾರಿಂದ ತಯಾರಾಗುತ್ತವೆ ಎನ್ನುವುದೇ ಒಂದು ನಿಗೂಢ. ಅನ್ಯ ಭಾಷಿಕರಲ್ಲಿ ತರಹದ ಸುದ್ದಿ ಹಂಚಿಕೊಂಡು, ನಮ್ಮ ಕನ್ನಡ ಚಿತ್ರರಂಗದ ಸಾಧನೆಯನ್ನು ಹೇಳಿಕೊಳ್ಳುವುವ ಎಂದರೆಅವರಿಗೆ ಚಿತ್ರಗಳ ಹೆಸರಾಗಲಿ, ನಿರ್ದೇಶಕರ ಅರಿವಾಗಲಿ ಇರುವುದೇ ಇಲ್ಲ. ಹಾಗಾಗಿ ಇದು ಹಲ್ಲಿದ್ದೂ ಕಲ್ಲು ಸಿಕ್ಕಂಗೆ. ಇವುಗಳನ್ನು "ಕ್ಯಾಟಗರಿ" ಸಿನೆಮಾಗಳು ಎನ್ನಬಹುದೇನೋ. ಕೇಂದ್ರ ದವರು ಹಲವು ಕ್ಯಾಟಗರಿಯಲ್ಲಿ ಪ್ರಶಸ್ಥಿ ಕೊಡುತ್ತಾರೆ. ಭಾಷಾವಾರು, ಮಕ್ಕಳವಾರು, ಜಾನುವಾರು, ಜಾತಿವಾರು, ಜಾತ್ಯಾತೀತವಾರು ಹೀಗೆ. ಯಾವುದೋ ಒಂದು ಕ್ಯಾಟಗರಿ ಯನ್ನು ಟಾರ್ಗೆಟ್ ಮಾಡಿ, ತಿಳಿದ ಕಸುಬನ್ನು, ಕಾಸೂ ಉಳಿಸಿ, ಎರಡೋ ಮೂರೋ ಲೈಟ್ ನಲ್ಲಿ, ಶೂಟ್ ಮಾಡಿ, ಒಂದು ಸಬ್ ಟೈಟಲ್ಲನ್ನು ಫಿಟ್ ಮಾಡಿ, ದೆಲ್ಲಿಗೆ ಕಳಿಸಿದ್ರೆ ಆಯಿತು. ಪ್ರಶಸ್ಥಿ ಬಂತು ಅಂತಲೇ ಲೆಖ್ಖ್ಹ. ಇದು ಬುದ್ಧಿವಂತ ಲಾಬಿ, ಗಡ್ಡ,ಖಾದಿ,ಶುದ್ಧ ಕನ್ನಡ, ಮುರುಕು ಹಿಂದಿ,ದೆಲ್ಲಿಯಲ್ಲಿ ಒಂದಷ್ಟು ಜನರ ಪರಿಚಯ ಇರಬೇಕಾದ್ದ್ದು ಕಡ್ಡಾಯ. ಸಿನೇಮಾದ ವಿಷಯ ವಸ್ತು, ಒಂದೋ ಬ್ರಾಮ್ರನ್ನ್ ಬೈದಿರಬೇಕು..ಅಥವ ಮರ ಕಡಿಬೇಡಿ ಅಂತ ಮಕ್ಕಳ ಕೈಲಿ ಹೇಳಿಸಿರಬೇಕು. ಕ್ಯಾಟಗರಿಗಳಿಗೆ ಇದು ಬಹಳ ಮುಖ್ಯ. ಪಶಸ್ಠಿ ಬಂದಾದ ಮೇಲೆ, ಒಂದು ದಿನ, ಸರ್ಟಿಫಿಕೇಟನ್ನು ಒಂದು ಫೈಲಿನಲ್ಲಿ ಹಾಕಿ, ವಿಧಾನ ಸೌದಕ್ಕೆ ಹೋಗಿ, ಯಾರದಾದರೂ ಪಾದ ಕಮಲಕ್ಕೆ ಇಟ್ಟು ಬಂದರೆ, ಬೆಂಗಳೂರಿನ ಯಾವುದೋ ಮೂಲೆಯ, ಯಾವುದೋ ಬಡ ರೈತರಿಂದ, ಬಿ ಡಿ ದವರು ವಷ ಪಡಿಸಿಕೊಂಡ ಒಂದು ಜಾಗದ ಸೈಟು, ಜಿ ಕ್ಯಾಟಗೋರಿಯಲ್ಲಿ ಉಚಿತ. :) ಇದು ಕ್ಯಾಟೋಗರಿಯ ಕಥೆ. ಪ್ರಶಸ್ಥಿ ಬಂದ ಇಂತ ಚಿತ್ರಗಳಿಗೆ ಯಾವುದೇ ಸೌಲತ್ತು ಗಳನ್ನೂ, ಎಷ್ಟೂ ಅವಲತ್ತು ಕೊಂಡರೂ ಕೊಡಲಾಗದು, ಎಂದೇನಾದರೂ ಸರ್ಕಾರ ಹೇಳಿದರೆ, ಅವತ್ತಿನಿಂದ ಇಂಥಹ ಚಿತ್ರಗಳು ಬಂದ್. ಚಿತ್ರಗಳಿಗಾಗಿಯೇ, ಅದು ತರುವ ನಶೆಗಾಗಿಯೇ ಚಿತ್ರಗಳನ್ನು ಮಾಡಿ ನವೆದು ಹೋದ...ಪುಟ್ಟಣ್ಣ,ದೇಸಾಯಿ..ಎಲ್ಲಿ? ಹೋದಿರಪ್ಪ ಪುಣ್ಯತ್ಮರಾ.....ಸತ್ಯವೇ ನಮ್ಮ ತಾಯಿ ತಂದೆ ಸತ್ಯೆವೆ ನಮ್ಮ ಚಿಕ್ಕಮ್ಮ ದೊಡ್ಡಮ್ಮ ಎಂದು ಹೇಳಿಕೊಂಡು, ಬುದ್ದಿ ಜೀವಿಗಳು ಇಂಥಹ ಚಿತ್ರ ಮಾಡಿ ಕನ್ನಡ ಚಿತ್ರ ಪರದೆ ಮೇಲೆ ಕಕ್ಕ ಮಾಡ್ತಾ ಇರೋದನ್ನ ನೋಡಿದ್ರೆ ...ಬೇಸರ ಅಗುತ್ತೆ

4 comments:

Vijay said...

ಅದು ಅಷ್ಟು ಸುಲಭ ಆಗಿದ್ರೆ ನೀವೊಂದು ಸಿನೆಮಾ ತೆಗೆದು ಪ್ರಶಸ್ತಿ ತಗೊಂಡು ತೋರ್ಸಿ ನೋಡೋಣ ಅಥವಾ ಈಗ ಬರುತ್ತಿರುವ ಚಿತ್ರಗಳಿಗಿಂತ ಬೇರೆ ತರಹದ ಸಿನೆಮಾ ಮಾಡಿ ತೋರಿಸಿ. ಆಮೇಲೆ ಮಾತಾಡಬಹುದು.

Mahen said...

swamy..nanobba kannada prekshaka aagi mathad tha iddini aste....
obba prekshakanige aa adikara idde irutthe.
yavudo car sariyagi madilla antha comment madidre..."oh! Neevond car madi thorsi" and hage aithu.

intha vishyakke para viroda vichara galu idde iruthe. hingandu..mathe adbedi andre hege.

Anonymous said...

ಸ್ವಾಮೀ ನಿಮ್ಮ ಅವಜ್ಞೆ ಕಂಡು ದುಖ ಆಗ್ತಿದೆ.. ಅಷ್ಟಕ್ಕೂ ನಿಮ್ಮ ಅಳಲು ಈ ಚಿತ್ರಗಳು ನೀವು ನೋಡುವ ಐನಾಕ್ಷ್ ಅಥವಾ ಇನ್ಯಾವುದೇ ದೊಡ್ಡ ಚಿತ್ರಮಂದಿರದಲ್ಲಿ ಬಂದು ಹಣಗಳಿಕೆಯಲ್ಲಿ ಪೈಪೋಟಿಗೆ ಇಲಿಯೋದಿಲ್ಲಾ ಅಂತಮಾತ್ರ.. ಹೊರತೂ ಈ ಚಿತ್ರಗಳು, ಅವುಗಳ ಆಶಯಗಳು, ಅವುಗಳ ನಿರೂಪಣೆ ಸುಳ್ಳು, ಲೊಳಲೊಟ್ಟೆ, ಓಳು ಅಂತಲ್ಲ.. ನಿಮಗೆ ಒಂದು ಚಿತ್ರ ಮಾರಾಟ ಮಾಡದು ಅಷ್ಟು ಸುಲಭ ಅಲ್ಲ ಅನ್ತ ಗೊತ್ತಿಲ್ಲ.. ಮಾರಾಟ ಆದ ಚಿತ್ರಗಲೇನು ಅದ್ಬುತ ಸಂಪನ್ನ ಚಿತ್ರಗಳಲ್ಲ. ಚಿತ್ರದ ರೀಚ್, ಗಳಿಕೆ ಇವುಗಳು ಒಂದು ಚಿತ್ರದ ಗುಣಮಟ್ಟ ನಿರ್ಧಾರ ಮಾಡದಿಲ್ಲ. ಹೇಗಾದರೂ ಮಾಡಿ, ಎಲ್ಲಿಯಾದರೂ ಹುಡುಕಿ, ಒಮ್ಮೆ ಪುಟ್ಟಕ್ಕನ ಹೈವೇ ನೋಡಿ ಆಮೇಲೆ ಮಾತಾಡಿ. ನೀವು ಯಾಕೆ ಈ ಸಿನಿಮಾದ ವಿತರಣೆ ಪ್ರಯತ್ನಿಸಿ ನೋಡಬಾರದು? ನಿಮಗೆ ಜ್ಞಾನೋದಯ ಆದೀತು.. ಸಿನಿಕತೆಯಿಂದ ಹೊರಬನ್ನಿ.

Mahen said...

ಸ್ವಾಮಿ ಅನಾನಿಮಸ್ಸು
ನನ್ನ ಅವಜ್ಞೆ ಬಗ್ಗೆ ದುಃಖ ಪಟ್ಟು ಇಲ್ಲೀ ತನಕ ಬಂದು ಬುದ್ದಿ ಹೇಳಿದ್ದಕ್ಕೆ ಧನ್ಯವಾದ. ಬಂದವರು ಬಂದ್ರಿ ಹೆಸರು ಹೇಳಿದ್ರೆ ಅಂಥಹದ್ದೇನಾಗ್ತಿತ್ತು. ನಾನೂ ಮಾತಾಡಿದ್ದು ಕನ್ನಡದಬಗ್ಗೆ, ನೀವೂ ಮಾತಾಡಿದ್ದು ಕನ್ನಡದ ಬಗ್ಗೆ. ಎರಡೂಬದಿ ಇರುವುದು ಕಾಳಜಿಯೇ...ನಿಮ್ಮ ರೂಪ ಬೇರೆ ನನ್ನ ವಾದ ಬೇರೆ ಅಷ್ಟೇ. ಅದಕ್ಕೆ ಮುಖ ಮುನಿಸ್ಸು ಯಾಕೆ? ಗೊತ್ತಾಗಲಿಲ್ಲ.
ಸರ್, ನೀವು ನನ್ನ ಬರಹ ಓದಿದರೆ ನಾನೆಲ್ಲೂ ಒಂದು ಚಿತ್ರ ಉತ್ತಮವಾಗಿ ಮಾರಟವಾದರೆ ಮಾತ್ರ ಸಾರ್ಥಕ ಎಂದು ಹೇಳಿಲ್ಲ. ಅಥವ ಇಂಥಹ ರೂಪದಲ್ಲಿ ಬರುವ ಎಲ್ಲಾ ಚಿತ್ರಗಳೂ ಮತ್ತದರ ಉದ್ದೇಶ ಕೆಟ್ಟದೂ ಅಂತಲೂ ಹೇಳಿಲ್ಲ. ನನ್ನ ಅನಿಸಿಕೆ ಇಷ್ಟೇ, ಕಲೆ ಎಂದರೆ, ನಮಗೆ ದಕ್ಕಿರುವ ಮಾದ್ಯಮದಲ್ಲಿ, ನಮಗೆ ಹೇಳಲೇ ಬೇಕು ಅನ್ನಿಸಿದ್ದನ್ನು ನಿಸಂಕೋಚವಾಗಿ ಹೇಳುವುದು. ಆದರೆ, ಭಾರತೀಯ ಚಲನಚಿತ್ರ ಅವಾರ್ಡುಗಳ ಸರ್ಕೀಟ್ ನಲ್ಲಿ ಹೀಗೆ ಆಗುವುದೇ ಇಲ್ಲ. ಅವಾರ್ಡುಗಳ ಕ್ಯಾಟಗೈರಿಗಳಿಗಾಗಿ ಕಥೆ ಹುಡುಕಿ, ಸಬ್ ಮಿಷನ್ ಡೆಡ್ಲೈನ್ ನ ಒಳಗೆ ಚಿತ್ರ ಸುತ್ತಿ, ಚಿತ್ರ ಹೊರಬರುವ ಮೊದಲೆ, ಅವಾರ್ಡು ಅನ್ನುವ ಕಿರೀಟ ಏರಿಸಿಕೊಳ್ಳುವ ಕುಯುಕ್ತಿಗಳಿವೆಯಲ್ಲ ಅದು ಬೇಸರ ತರಿಸುವ ವಿಷ್ಯ.
ನೀವೇ ಹೇಳಿದಹಾಗೆ, ಚಿತ್ರ ಮಾರಾಟ ಮಾಡುವುದು ಅಷ್ಟು ಸುಲಭ ಅಲ್ಲ. ಚಿತ್ರಮಂದಿರಗಳೇ ಸಿಕ್ಕುವುದಿಲ್ಲ. ಇಂಥಹ ಪರಿಸ್ಥಿತಿ ಗಳಲ್ಲಿ, ಅಷ್ಟೆಲ್ಲಾ ಕರ್ಚು ಮಾಡಿ ಸಿನೆಮಾ ಮಾಡುವ ಹುಮ್ಮಸಿಗೆ ಉತ್ತೇಜನ ಯಾವುದು ಸ್ವಾಮಿ? ಟೈಮಿಗೆ ಸರಿಯಾಗಿ ಮಾಡಿಕೊಟ್ಟರೆ ದೊರೆಯುವ ಪ್ರಶಸ್ಥಿ ಮತ್ತು ಸಬ್ಸಿಡಿ ಇತ್ಯಾದಿಗಳ ಆಸೆ ತಾನೆ? ಇವರುಗಳು ಮಾಡಿದ ಸಿನೇಮಾಗಳು ತಿಯೇಟರಿಗೆ ಟೈಮಿಗೆ ಸರಿಯಾಗಿ ಬರದಿದ್ದರೂ ಸರಿ, ಅವಾರ್ಡು ಕಮಿಟಿಯ ಡೆಡ್ಲೈನ್ ಮಿಸ್ ಮಾಡುವುದಿಲ್ಲವಲ್ಲ ಅದು ಹೇಗೆ? ಮೊನ್ನೆ ಒಬ್ಬ ನಿರ್ದೇಶಕರು ಒಂದು ಮಾತು ಹೇಳಿದರು. ಅದು ಎಷ್ಟು ಸಮಂಜಸ ಅನ್ನಿಸಿತು ಗೊತ್ತ? ಪ್ರಶಸ್ಥಿ ಬಂದ ಚಿತ್ರಗಲ ನಿರ್ದೇಶಕರ ಯಾವಾಗಿನ ಕಂಪ್ಲೆಂಟು, ಅವರ ಚಿತ್ರಗಳಿಗೆ ಚಿತ್ರಮಂದಿರವೇ ಸಿಕ್ಕುವುದಿಲ್ಲ ಎಂದಲ್ಲವೇ? ಹಾಗಿದ್ದರೆ, ಜಯನಗರದ “ಪುಟ್ಟಣ್ಣ” ಚಿತ್ರಮಂದಿರ ಕೊಳೆತು ಹೋಗುತಿದೆಯಲ್ಲ, ಇಂಥ ನಿರ್ದೇಶಕ ಮಾಹಾಶಯರೆಲ್ಲಾ ಸೇರಿ, ಸರಕಾರಕ್ಕೆ “ಈ ಸರಿ ನಮಗೆ ಯಾವುದೇ ಪ್ರಶಸ್ಥಿ, ಸೈಟು ಮಣ್ಣು ಮಸಿ ಬೇಡಾ, ನಮ್ಮ ಚಿತ್ರ ಪ್ರದರ್ಶನ ಮಾಡಲು ಪುಟ್ಟಣ್ಣ ಚಿತ್ರಮಂದಿರ ಪುಗಸಟ್ಟೇ ಕೊಡಿ. ಅಲ್ಲಿ ಅದನ್ನು ಓಡಿಸಿ, ಅದರಿಂದ ಬರುವ ಹಣ ನಮ್ಮ ಲಾಭ” ಎಂದು ಹೇಳಲಾಗದ? ಐವತ್ತು ದಿನ ಬರೀ ಐವತ್ತು ದಿನ ಓಡಿಸಲಿ ಸಾಕು..
ಈಗ ನೀವೇ ನೋಡಿ, ಚಿತ್ರಗಳು ಚಿತ್ರಮಂದಿರಕ್ಕೇ ಬಂದಿಲ್ಲ. ಯಾವುದೇ ಜನ ನೋಡಿಲ್ಲ....ಜನಗಳ ಅಭಿಪ್ರಾಯಗೊತ್ತಿಲ್ಲ...ಚಿತ್ರ ಉತ್ತಮ ಅಂತ ಆವಾರ್ಡು ಬಂದಾಯಿತು. ಇದು ಹೇಗೆ ಅಂದರೆ...ಯಾವುದೋ ಟೋರ್ನಮೆಂಟಿಗೆ ಹೊರಟ ಕ್ರೀಡಾ ಪಟುವಿಗೆ,ಹೊರಡುವ ಮೊದಲೇ ಟ್ರೋಫಿಕೊಟ್ಟು ಸನ್ಮಾನಿಸಿ...ಸಂಬ್ರಮ ಪಟ್ಟಹಾಗೆ.
ಸಚಿನ್ ತೆಂಡುಲ್ ಕರಗೆ ಹುಟ್ಟುವಾಗಲೇ ಭಾರತ ರತ್ನ ಕೊಟ್ಟು..ಹೋಗು ಈಗ ಆಡು ಕ್ರಿಕೆಟ್ಟು ಅಂದ ಹಾಗಾಯಿತು.
ಇದು ನನ್ನ ಪ್ರೆಶ್ನೆಗಳು ಅಷ್ಟೇ.
ನಾನು ಇಂತಹ ಚಿತ್ರಗಳು ನೋಡಿಲ್ಲ ಅಂತಲ್ಲ. ಇದ್ದ ಕೆಲಸ ಬಿಟ್ಟು, ಸಮಯ ಮಾಡಿಕೊಂಡು, ಅವಾರ್ಡು ಬಂದಿದೆಯಲ್ಲಾ ಎಂದು “ಗುಬ್ಬಚ್ಚಿಗಳು” ಎನ್ನುವ ಚಿತ್ರ ನೋಡಲು ಹೋಗಿದ್ದೆ. ಮಕ್ಕಳ ವಿಭಾಗದಲ್ಲಿ ಅವಾರ್ಡು ಗಳಿಸಿದ್ದ ಆ ಚಿತ್ರ, ನನ್ನ ಜೊತೆಯಲ್ಲಿದ್ದ ನನ್ನ ಮಗಳಿಗೆ ಬಿಡಿ..ಅಲ್ಲಿದ್ದ ಉದ್ದುದ್ದ ಗಡ್ಡ ಬಿಟ್ಟಾ ದೊಡ್ಡ ದೊಡ್ಡವರಿಗೇ ಅರ್ಥ ಆಗಾಲಿಲ್ಲ ಆ ಚಿತ್ರ. ಆಗಲಿಂದ ಇಂತಹವರ ಬಗ್ಗೆ ನನ್ನ ಒಂದು ಪ್ರೆಶ್ನಾರ್ಥಕ ದೃಷ್ಟಿ ಇದ್ದೆ ಇರುತ್ತೆ.
ಒಂದು ಉದಾಹರಣೆ ಹೇಳುತ್ತೇನೆ, ತಾರೆ ಜ಼ಮೀನ್ ಪರ್ ಈ ಚಿತ್ರ ಯಾವ ಪ್ರಶಸ್ಥಿಗೂ ಮೊದಲೇ ಅರ್ಜಿ ಗುಜಾರಾಯಿಸಿ ಬಂದಿರಲಿಲ್ಲ. ಹೇಳಬೇಕಾದ ವಿಷಯವನ್ನು ಆ ಚಿತ್ರ ಕೂಡ ಹೇಳಿತು. ನನಗೆ ಕುಷಿಯಾಗುವ ವಿಷಯವೆಂದರೆ, ಆ ಚಿತ್ರ ಮಾಡಿದವರಲ್ಲಿ ಒಂದು ಒಳ್ಳೆ ಚಿತ್ರ ಮಾಡುವ ಕಾಳಜಿ ಇತ್ತು..ಅದು..ಇಲ್ಲಿ ಬಹಳಷ್ಟು ಸರಿ ಕಾಣಸಿಗುವುದಿಲ್ಲ. ಇದು ದುರಾದೃಷ್ಟ.

Related Posts with Thumbnails