Tuesday, March 8, 2011

ಬೇರೆ ಯವರ ಮುಂದೆ ಅಪ್ಪಿ ತಪ್ಪೀನೂ ಅವಳನ್ನ ಬೈ ಬಾರದು.

ಇವತ್ತು ಮಹಿಳಾದಿನ. ಹೆಂಡಿತಿಗೆ ಕುಷಿ ಮಾಡಲಿಕ್ಕೆ ಏನೂ ಪ್ಲಾನ್ ಇಲ್ಲ್ವ ಅಂತ ಯಾರೋ ಕೇಳಿದ್ರು. ನಿಜ ಹೇಳಿದ್ರೆ ಇವತ್ತು ಒಂದು ದಿನ ಅವರಿಗೆ ಕುಷಿಮಾಡೋ ಪ್ಲಾನ್ ಇಟ್ರೆ ಅದು ಬಹಳ ಸಂಕುಚಿತವಾದ ಸಣ್ಣ ಪ್ಲಾನ್ ಆಗುತ್ತೆ.ಹಾಗೆ ನೋಡಿದ್ರೆ ನನ್ನ ಹೆಂಡತಿಗೆ ಅಥವ ಆ ಲೆಕ್ಕಕ್ಕೆ ಎಲ್ಲಾ ಹೆಣ್ಣು ಮಕ್ಕಳಿಗೆ ಕುಷಿ ಮಾಡೋದು ಅಷ್ಟೇನೂ ಕಷ್ಟ ಇಲ್ಲ. 
೧.ವಿಷಯ ಏನೇ ಇದ್ರು, ಅವರು ಮಾತಾಡೋವಾಗ ಕೇಳಿಸ್ಕೋಬೇಕು. ಅದು ಎಷ್ಟು ಹೊತ್ತೇ ಆದ್ರೂ ಸರಿ. ಒಮ್ಮೊಮ್ಮೊ ಅವಳು ಪಕ್ಕದ ಅಂಗಡಿ ಇಂದ ಮೊಸರು ತಂದಿದ್ದನ್ನ ಅರ್ಧ ಘಂಟೆ ಕತೆ ಕಟ್ಟಿ ಹೇಳ್ತಾಳೆ. ಹೋಗುವಾಗ ಎಷ್ಟು ಬಿಸಿಲಿತ್ತೂ,ಅನ್ನೋದರಿಂದ ಹಿಡಿದು,ಅಂಗಡಿಯವನು ಒಂದು ರೂಪಾಯಿ ಕಾಯ್ನ್ ಕೊಡದೆ ಅದಕ್ಕೆ ಕೆಟ್ಟ ಚಾಕ್ಲೇಟ್ ಕೊಟ್ಟ ಅನ್ನುವುದನ್ನ ಗಮನ ಇಟ್ಟು ಕೇಳಿ "ಹೂ" ಅನ್ನಬೇಕು.
೨.ಯಾವುದೋ ಊರಿಂದ ಆಗತಾನೇ ಬಂದಿದ್ದರೂ,ಎಷ್ಟೇ ಸುಸ್ತಾಗಿದ್ರೋ,ಮೊದಲು ಅವಳು ಎಷ್ಟು ತೊಂದರೇಯಲ್ಲಿದ್ದಾಳೆ ಅಂತ ಕೇಳಿಸ್ಕೊಳ್ಳಬೇಕು.ಅವಳ ಹೊಸ ಬಟ್ಟೇ ಅಂಗಡಿಯಲ್ಲಿ ಬದಲಾಯಿಸಲಾಗಲಿಲ್ಲ ಅನ್ನುವ ಅವಳ ಕಳಕಳಿ ಇಂದ ಹಿಡಿದು,ಮೂರುದಿನ ಕೆಲಸದವಳು ಬರದೇ ಇದ್ದಾಗ ಇವಳು ಪಟ್ಟ ಕಷ್ಟದ ಬಗ್ಗೆ ಅನುಕಂಪ ತೊರಿಸಿದ ಮೇಲೆ....ನನ್ನ ಸ್ನಾನಕ್ಕೆ ನೀರು ಕೇಳಬೇಕು.
೩.ಮಗಳು ಕೋಪ ತೋರಿಸಿದಾಗ, ಅನ್ನ ತಿನ್ನದೇ "ಸಾರು ಸರಿ ಇಲ್ಲ" ಅಂದಾಗ. ಹೊರಗಿನಿಂದ ಆಡಿ ಬಂದು ಹಾಗೇ ಕಾಲು ತೋಳೀದೇ ಹಾಸಿಗೆ ಹತ್ತಿದಾಗ, ಟೀವಿ ನೋಡುತ್ತಾ ಕೂತು ಹಾಗೇ "ಅಮ್ಮಾ ನನಿಗೆ ಸ್ವಲ್ಪ ಹಾಲು ಮಾಡಿಕೊಡು" ಅಂತ ಕೇಳಿದಾಗಲೆಲ್ಲಾ. "ಯಾರ ಮಗಳು ಹೇಳು? ಎಲ್ಲಾ ಅಪ್ಪನ ಗುಣ,ಹೇಳಿದ್ದ ಮಾತೇ ಕೇಳಲ್ಲಾ. ಎಲ್ಲಾ ಕೂತಿದ್ದ ಕಡೇನೆ ಆಗಬೇಕು" ಅಂತ,ಅಲ್ಲೇ ಏನೋ ಮಾಡುತ್ತಾ ಕೂತ ನನ್ನ ಕಡೇ ನೋಡಿ,ಕಣ್ಣು ದಪ್ಪ ಮಾಡಿ ಬೈದಾಗಾ ಸುಮ್ಮನೇ ಇರಬೇಕು. ಗಪ್ ಚುಪ್.
೪.ಮಗಳಿಗೆ ಅಂತ ಫೈವ್ ಸ್ಟಾರ್ ತಂದಾಗ, ಅವಳಿಗೂ ನಟ್ಟೀಸ್ ತರಬೇಕು. "ಯಾಕೆ ತಂದ್ರಿ ಈಗಾಗಲೇ ದಪ್ಪ ಆಗಿದ್ದೀನಿ" ಅಂತ ಹೇಳ್ತಾಳೆ.."ಇರಲಿ ತಿನ್ನೇ, ದಪ್ಪ ಅಂತ ಯಾರ್ ಹೇಳಿದ್ದು ತೋರ್ಸು ನೋಡಣ" ಅಂತ ಉಬ್ಬಿಸಬೇಕು.
೫.ಯಾವತ್ತೋ ಒಂದು ದಿನ ಯಾವುದೋ ಪೇಪರ್ ನಲ್ಲಿ ಓದಿ, "ಇವತ್ತು Only greens" ಅಂತ ಹೇಳಿ ಬರೀ ಸೊಪ್ಪು ತಿನ್ನಿಸ್ತಾಳೆ..ಆಗ ಸುಮ್ಮನೆ ಮುಚ್ಚಿಕೊಂಡು ತಿಂದು, ಮಗಳಿಗೂನು, "ಹೇ ಅಮ್ಮ ಹೇಳೋದು ಸರಿ, ಸೂಪ್ಪು ತಿನ್ನ ಬೇಕು" ಅಂತ ಹೇಳಬೇಕು.
೬.ಚಾನಲ್ ಗಳನ್ನ ಬದಲಾಯಿಸುವಾಗ ಯಾವುದೋ ಚಾನಲ್ ನೋಡಿದವಳೇ.."ರೀ ಇರಿ ಇರೀ...ಅದೇನೋ ತೋರಿಸ್ತಾ ಇದ್ದಾರೆ ನೋಡ್ಬೇಕು" ಅಂತ ಕೈ ಅಡ್ಡ ತಂದಾಗ..ಆಯ್ತು ನೀನೇ ನೋಡು ಅಂತ ಸ್ವಲ್ಪ ಹೋತ್ತು ಬಿಡ ಬೇಕು.
೭.ಊರಿಗೆ ಕಾರಿನಲ್ಲಿ ಹೋಗ್ಬೇಕಾದ್ರೆ " ಆಗಲಿಂದಾ ಡ್ರೈವಮಾಡ್ತಾ ಇದ್ದೀರಲ್ಲ..ಕಾಲು ನೋವ್ತಾ ಇಲ್ವಾ?" ಅಂತ ಕೇಳ್ತಾಳೆ...ಆಗ..ಹಾಗೇ ಕಾರು ಸೈಡಿಗೆ ಹಾಕಿ..."ಸರಿ ನೀನು ಸ್ವಲ್ಪ ಹೋತ್ತು ಓಡಿಸು" ಅಂತ ಏನೂ ಗೊತ್ತೇ ಇಲ್ಲದವನ ಹಾಗೇ ಬಿಟ್ಟು ಸೀಟು ಬದಾಲಾಯಿಸಬೇಕು.
೮.ಅವಳು ಎಷ್ಟೇ ಕೆಟ್ಟಾದಾಗಿ ಡ್ರೈವ್ ಮಾಡ್ಟಾ ಇರಲಿ, ಹಾಡು ಜೋರಾಗಿ ಹಾಕಿ ಕೊಂಡು ಒಂದು ಸಣ್ಣ ನಗು ಮೊಖಕ್ಕೆ ಅಂಟಿಸಿ ಕೊಂಡು,ಹೆದರಿಕೆಯಲ್ಲಿ ಕಾಲೆರಡನ್ನೂ ಹತ್ತಿರಕ್ಕೆ ಎಳೆದು ಕೊಂಡು ಕೂರಬೇಕು.
೯.ಯಾವುದೇ ಹಾರರ್ ಮೂವಿ ಆಗಲಿ ಕಾರ್ಟೂನ್ ಮೂವಿ ಆಗಲಿ ಬಂದಾಗ "ಅದೇನ್ ಮಕ್ಕಳತರಹ ಇಂಥಹ ಮೂವಿ ನೋಡೋದು" ಅನ್ನದೇ ಮುಚ್ಚಿಕೊಂಡು ಜೊತೆಗೆ ಕೂತು ನೋಡಿ, ಎದ್ದೇಳಬೇಕು.
೧೦. ಬೇರೆ ಯವರ ಮುಂದೆ ಅಪ್ಪಿ ತಪ್ಪೀನೂ ಅವಳನ್ನ ಬೈ ಬಾರದು.
ಇಷ್ಟೇ ಮಾಡಬೇಕಾದ್ದು. :)

No comments:

Related Posts with Thumbnails