Monday, February 14, 2011

ನಮ್ಮ ಮಣ್ಣಲ್ಲಿದ್ದ ಪ್ರೀತಿಯೆಲ್ಲಾ ಹೊರದೇಶಕ್ಕೆ ರಪ್ತಾಯಿತೇನೊ...

"ಮೊದಲಿನ ಪ್ರೀತಿನೂ ಇಲ್ಲ...ಅಷ್ಟು ನಿರ್ಮಲ ಮನಸ್ಸೂ ಈಗ ಇಲ್ಲ. ಏನೋಪ್ಪ, ಕಾಲ ಬದಲಾಯಿತು. ಮೊಬೈಲ್ ಬಂದಮೇಲೆ..ಪ್ರೀತಿಗೆ ಅರ್ಥನೇ ಬದಲಾಯಿತು ನೋಡಿ."
ಹೀಗಂತ ತಮ್ಮ ಪೇಪರ್ ಲವಲೆಟರ್ ದಿನಗಳನ್ನ ನೆನಸಿಕೊಂಡು ಸಣ್ಣಗೆ ಕೊರಗಿದರು ನನ್ನ ಪರಿಚಯದವರೊಬ್ಬರು. ವ್ಯಾಲೆನ್ಟೈನ್ಸ್ ಡೆ, ಮಾತಿನ ವಿಷಯವಾಗಿತ್ತು.ಹೌದ,ಮೊದಲಿನ ಕೌತುಕ ಈಗಿನ ಪ್ರೀತಿಗೆ ಇಲ್ಲ್ವ
ಈಗ ಹುಟ್ಟಿ ಆಗ ಸಾಯೋ ಫಾಸ್ಟ್ ಫುಡ್ ಆಯ್ತಾ ಪ್ರೀತಿ ಅಂತ ಯೋಚನೆ ಮಾಡಕ್ಕೆ ನಮಗೆ ಟೈಮೂ ಇಲ್ಲ. ಆದ್ರೊ ಅನ್ನಿಸ್ಸಿದ್ದು ಇಷ್ಟು. ಮೊದಲು, ಕಾವೇರಿ ನೀರಲ್ಲಿ, ಕನ್ನಡದ ಮಣ್ಣಲ್ಲಿ ಹದವಾದ ಬಿಸಿಲಿನಲ್ಲಿ ಮಲ್ಲಿಗೆ ಬೆಳೆಯುತ್ತಿದ್ದರು.
ಆಗ ಕಾವ್ಯದಲ್ಲೂ ಮಲ್ಲಿಗೆಯ ಸೊಂಪಿತ್ತು ನರಸಿಂಹ ಸ್ವಾಮಿಯವರ "ಮೈಸೂರು ಮಲ್ಲಿಗೆ" ಹುಟ್ಟಿತ್ತು. ಈಗ..ಅದೇ ಕಾವೇರಿ ನೀರಲ್ಲಿ, ಕನ್ನಡದ ಮಣ್ಣಲ್ಲಿ ಗುಲಾಬಿ ಬೆಳೀತಾರೆ, ಹೊರದೇಶಕ್ಕೆ ಕಳಿಸುತ್ತಾರೆ...ಹಣ ಮಾಡುತ್ತಾರೆ.
ನಮ್ಮ ಮಣ್ಣಲ್ಲಿದ್ದ ಪ್ರೀತಿಯೆಲ್ಲಾ ಹೊರದೇಶಕ್ಕೆ ರಪ್ತಾಯಿತೇನೊ....ಅಲ್ಲಿಂದ ಬಂದ ಹಣ ಸಹಜವಾಗಿಯೇ...ಕುರುಡು ಕಾಂಚಾಣ..ಕುಣೀತಾ ಇದೆ..:)

No comments:

Related Posts with Thumbnails