ನನಿಗೆ, ಟಿ ವಿ ಯಲ್ಲಿ, ಈ ಮಕ್ಕಳ ಹಾಡುಗಾರಿಕೆ ಕಾಂಪಿಟೇಷನ್, ಡಾನ್ಸ್ ಕಾಂಪಿಟೇಷನ್ ಇವಗಳನ್ನ ನೋಡೋ ಉತ್ಸಾಹ ಅಷ್ಟಿಲ್ಲಾ.ಈ ಚಿಕ್ಕ ಮಕ್ಕಳನ್ನ ಉಪ್ಯೋಗಿಸಿಕೊಂಡು, ನಮ್ಮ ಚಾನಲ್ ಗಳು ದುಡ್ಡು ಮಾಡುತ್ತವೇ ಅಂಬುದೇ ನನ್ನ ಅಭಿಪ್ರಾಯ. ಅದರಲ್ಲೂ, ಕೆಲವು ಮಕ್ಕಳ ಪ್ರೊಗ್ರಾಮ್ ಅಂತಹ ಹೇಳಿಕೋಳ್ಳುವ ಉತ್ತಮ ಮಟ್ಟದಲ್ಲಿರದೆ, ಬೇಸರ ಮೋಡಿಸುತ್ತದೆ. ಅದರಮೇಲೆ ಕೆಲವು ತಲೆ ಪ್ರತಿಷ್ಟೆ ಜಡ್ಜುಗಳು ಅವರನ್ನ ನೋಡಕ್ಕೆ ಇರಿಟೇಷನ್ನು.
ಇವತ್ತು, ಯಾವುದೇ ಉದ್ದೇಶವಿಲ್ಲದೇ ಚಾನಲ್ ಬದಲಾಯಿಸುತಿದ್ದೆ. ಒಂದು ಅದ್ಬುತವಾದ ದ್ವನಿ ನನ್ನನ್ನು ತಡೆದು ನಿಲ್ಲಿಸಿತು. ಮುಂದೆ ಹೋಗಲೇ ಇಲ್ಲ. ಅದು ಝಿ-ಮರಾಠಿ ಚಾನಲ್. ನಡೆಯುತಿದ್ದ ಪ್ರೊಗ್ರಾಮ್ ಸ ರೆ ಗ ಮ ಲಿಟ್ಟಲ್ ಚಾಂಪ್ಸ್. ನನಿಗೆ ಮರಾಠಿ ಅರ್ಥವೂ ಆಗುವುದಿಲ್ಲ, ಆದರೂ ಈ ಪುಟ್ಟ ಹುಡುಗಿ ನನ್ನ ಕಟ್ಟಿ ನಿಲ್ಲಿಸಿದ್ದಳು. ಎಂತಹ ಗಾಯನ, ಧನ್ಯನಾಗಿ ಹೋದೆ. ಅಷ್ಟು ಚೆನ್ನಾಗಿ ಹಾಡಲು ಎಂಟು ವರ್ಷದ ಈ ಪೋರಿ, ಎಷ್ಟು ಕಷ್ಟಾ ಪಟ್ಟಿರಬೇಕು, ಎಷ್ಟು ಅಬ್ಯಾಸ ಮಾಡಿರಬೇಕು ಎಂಬ ಕಲ್ಪನೆಯೇ ನನ್ನನ್ನು ಮಂಕ ನನ್ನಾಗಿಸಿತು.
ಹೆಸರು ಮುಗ್ಧ ವೈಶಂಪಾಯನ್ ವಯಸ್ಸು ಎಂಟಂತೆ, ತಾಯಿ ಶಾರದೆ ಇವಳ ಕಂಠದಲ್ಲೇ ಇದ್ದಾಳೆ ಅನ್ನಿಸುವಷ್ಟು ಪರಿಶುದ್ಧ ಸ್ವರ. ಎಲ್ಲೂ ತಪ್ಪದೆ ಸರಾಗವಾಗಿ, ನಗು ನಗುತ್ತಾ ಹಾಡುವ ಅವಳ ಕಂಡರೆ ಕರೆದೆತ್ತಿ ಮುತ್ತಿಡುವಷ್ಟು ಕುಷಿಯಾಯಿತು.
ಅಂತು ಭಾರತೀಯ ಶಾಸ್ತ್ರೀಯ ಸಂಗೀತ ಈ ಇಂಟರ್ನೆಟ್ ದುನಿಯದಲ್ಲಿ ಎಲ್ಲಿ ಕಳೆದು ಹೋಗುವುದೋ ಅನ್ನುವ ನನ್ನ ಭಯ ಬಹಳ ತಪ್ಪು ಅನ್ನಿಸಿತು.
ಬೆಳಗಾವಿಯ ವಿಷಯದಲ್ಲಿ ಮರಾಠಿಗರಿಗೂ ನಮಗೂ ಇಲ್ಲದ ತರಲೆ. ನನಿಗೂ ಮರಾಠಿಗಳು ಅಂದರೆ ನಮ್ಮ ಬೆಳಗಾವಿಯನ್ನು ಕಸಿಯಲು ಬಂದಿರುವವರು ಅಂತ ಸಣ್ಣ ಕೋಪ. ಈ ಹುಡುಗಿ ಹಾಡಿದ್ದು ನೋಡಿದ್ರೆ ಅದೆಲ್ಲಾ ಮರೆತು ಹೋಯಿತು. ಎಲ್ಲಿದ್ದರೇನು, ಬೆಳಗಾವಿ ಭಾರತದಲ್ಲೇ ಇದ್ದರೆ ಅಷ್ಟು ಸಾಕು. ಇಂತಹ ಮಕ್ಕಳು ಈ ವಿಷಯಗಳನ್ನು ತಲೆ ಹಚ್ಚಿಕೊಳ್ಳದೇ ಹೀಗೆ ಸಾಧನೆಯಲ್ಲಿ ಇರಲಿ, ಆಗಾಗ ಕಣ್ಣಲ್ಲಿ ಎರಡು ಹನಿ ಅರಿಯದೇ, ಮೂಡಿಸಲಿ ಅಂತ ನನ್ನ ಪ್ರಾರ್ಥನೆ.
ಅವಳ ಹೆತ್ತು ಹೊತ್ತು ಇಂಥಹ ಒಂದು ರತ್ನವಾಗಿಸಿದ ಅವಳ ತಾಯಿಗೆ ನನ್ನ ನಮನ.
[ಅವಳ ಕೆಲವು ಗಾಯನ ಯು ಟ್ಯುಬ್ ನಲ್ಲಿದೆ..ದಯವಿಟ್ಟು ನೋಡಿ :)]
1 comment:
>>>ಅಂತು ಭಾರತೀಯ ಶಾಸ್ತ್ರೀಯ ಸಂಗೀತ ಈ ಇಂಟರ್ನೆಟ್ ದುನಿಯದಲ್ಲಿ ಎಲ್ಲಿ ಕಳೆದು ಹೋಗುವುದೋ ಅನ್ನುವ ನನ್ನ ಭಯ ಬಹಳ ತಪ್ಪು ಅನ್ನಿಸಿತು.
ಅಂತರ್ಜಾಲ ನಿಜಕ್ಕೂ ಸಂಗೀತಕ್ಕೊಂದು ವರದಾನ. ಬೆರಳ ತುದಿಯಲ್ಲಿಂದು ಸಂಗೀತ ವಿಶ್ವ. ಮೊದಲು ಜಸರಾಜ್ ಹಾಡಿ ಕದಲಿಸಿ ಬಿಟ್ಟ ಕ್ಯಾಸೆಟ್ ಗೋಸ್ಕರ ಎಲ್ಲೆಲ್ಲೊ ಫೋನ್ ಮಾಡಿ ತರಿಸಿಕೊಂಡಿದ್ದು ನೆನಪಾಯಿತು. ಇಂದು ಜಸರಾಜ್ ನನ್ನ ಎಲ್ಲಿ ಹೋದರು ನನ್ನ ಜತೇಲೆ ಇರ್ತಾನೆ.
Post a Comment