Friday, January 9, 2009

Six random things about yourself ನಮ್ಮ ಬಗ್ಗೆ ಆ ಕ್ಷಣದಲ್ಲಿ ಅನ್ನಿಸುವ ಆರು ವಿಷಯಗಳು

Six random things about yourself
ನಮ್ಮ ಬಗ್ಗೆ ಆ ಕ್ಷಣದಲ್ಲಿ ಅನ್ನಿಸುವ ಆರು ವಿಷಯಗಳು

ಇದಕ್ಕೆ ಒಂದಷ್ಟು ರೂಲ್ಸು :)
Here are the rules ~
1. Link to the person who tagged you.
2. Post the rules on your blog.
3. Write six random things about yourself.
4. Tag six people at the end of your post and link to them.
5. Let each person know they’ve been tagged and leave a comment on their blog.
6. Let the tagger know when your entry is up.

ನನ್ನ ಪರಿಚಯದವರೊಬ್ಬರು ನನ್ನ ಹೆಸರನ್ನೊ ಟ್ಯಾಗ್ ಮಾದಿ ಅವರ ಬ್ಲಾಗ್ ನಲ್ಲಿ ಬರೆದಿದ್ದ್ರರು. ಚೆನ್ನಗಿದೆ ಅನ್ನಿಸ್ತು. ಎಲ್ಲಾರಬಗ್ಗೆ ಒಪೀನಿಯನ್ ಗಳನ್ನ ಇಟ್ಟುಕೊಳ್ಳೊ ನಾವು, ಯಾವಾಗಲಾದರೂ ಒಮ್ಮೆ
ನಮ್ಮ ಬಗ್ಗೆ, ಆ ಸಮಯದಲ್ಲಿ ನಮಿಗೇ ಏನನ್ನಿಸಬಹುದು ಎಂಬುದನ್ನು ಪಟ್ಟಿ ಮಾಡಿದರೆ ಒಂದು ತುರ್ತು ಅತ್ಮವಿಮರ್ಶೆ ಆಗಬಹುದು. ಪಟ್ಟಿ ಮಾಡಿ ಆದ ಮೇಲೆ "ಅರೆ ಇದು ನಾವೇನಾ?" ಅನ್ನಿಸಿದರೆ ಆ ಕ್ಷಣದಲ್ಲೇ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಂಡೊ ಅಥವ ಅಬ್ಯಾಸಗಳನ್ನು ಬದಲಾಯಿಸಿಕೊಂಡೋ ಸ್ವಲ್ಪ "ಸರಿ" ಆಗಬಹುದು.

ಇಲ್ಲಿ ಮೇಲಿರುವ ರೂಲ್ಸಿನಲ್ಲಿ "ಪ್ರಾಮಾಣಿಕವಾಗಿ" ಬರಿಯಬೇಕು ಎಂದೇನೂ ರೂಲ್ಸಿಲ್ಲಾ. ಹಾಗಿದ್ದರೇ ಚೆನ್ನಾಗಿತ್ತು. ಇಲ್ಲಾ ಅಂದ್ರೆ, ನಮ್ಮ ಬಗ್ಗೆ ನಾವು, ಬೇರೆ ಅವರಿಗೆ ಚೆನ್ನಾಗಿರುವ ಹಾಗೆ, ಬೇರೆಅವರಿಗೆ ಇಷ್ಟವಾಗುವ ಹಾಗೆ ಬರೆದು, ನಮ್ಮನ್ನ ನಾವು "ಕಂಡು" ಕೊಳ್ಳುವ ಅವಕಾಶ ಕಳೆದು ಕೊಳ್ಳುತ್ತೇವೆ ಅನ್ನಿಸುತ್ತೆ. ಇರಲಿ ನಾನು ಬರೆಯುವಾಗ ಆದಷ್ಟು "ಇರುವ" ವಿಷಯವನ್ನೇ ಬರೆಯುವ ಪ್ರಯತ್ನ ಮಾಡುತ್ತೇನೆ.

೧.ನಾನು ಸ್ವಲ್ಪ ಸೋಂಬೇರಿ. ಇದು ದೈಹಿಕವಾಗಿ ಕೆಲಸ ಮಾಡುವ ವಿಚಾರದಲ್ಲಿ ಅಲ್ಲ. ಯಾವುದೋ ಒಂದು ವಿಷಯ, ಒಂದು ಜಾಗಕ್ಕೆ ಹೋಗುವುದೋ, ಪಿಕ್ಚರ್ ನೋಡುವುದೋ ಇಲ್ಲ, ಅಥವ ತಂದಿಟ್ಟ ಪುಸ್ತಕವನ್ನು ಓದಿಮುಗಿಸುವುದೋ ಇವುಗಳ ವಿಚಾರದಲ್ಲಿ ನಾನು ಸ್ವಲ್ಪ ನಿಧಾನ. ಇವತ್ತು ಮಾಡುವ, ನಾಳೆ ಮಾಡುವ ಅಂತ ಮುಂದೆ ಹಾಕುತ್ತಿರುತ್ತೇನೆ. ಮದ್ಯದಲ್ಲಿ ಯಾರಾದರು, "ಏನೋ ಆ ಪುಸ್ತಕ ಓದಿಲ್ಲವಾ? ಇನ್ನೂನು?" ಅಂದಾಗ, ಬುಡಕ್ಕೆ ಬೆಂಕಿ ಬಿದ್ದಹಾಗೆ ಓದಲಿಕ್ಕೆ ಶುರು.
೨.ನನ್ನ ಯಾವುದಾದರೂ ಕೆಲಸಕ್ಕೆ ಬೇರೆಯವರನ್ನು ಪೂಸಿ ಮಾಡುವುದು ನನ್ನಿಂದ ಸಾದ್ಯವೇ ಇಲ್ಲ. ನನ್ನ ಕ್ಲೈಂಟ್ ಗಳಲ್ಲಿ ಆತ್ಮೀಯರಾದವರನ್ನು ಕಾಫಿ ಕುಡಿಯಲು ಕರಿಯಲೂ ಮನಸ್ಸು ಹಿಂಜರಿಯುತ್ತದೆ.
೩.ಎದುರಿಗಿರುವರು ಯಾರೇ ಆಗಿರಲಿ, ಅವರು ಹೇಳಿದ ಜೋಕು ನಗು ಬರಿಸಲಿಲ್ಲ ಅಂದ್ರೆ ನನ್ನ ಕೈನಲ್ಲಿ ಸುಮ್ಮ ಸುಮ್ಮನೆ ನಗುವುದು ಕಷ್ಟ.
೪. ರಾತ್ರಿ ಒಂಬತ್ತೂವರೆ ನನ್ನ ಮಿದುಳು ಕೆಲಸ ಮಾಡುವುದನ್ನು ನಿಲ್ಲಿಸಿ, ಮಲಗಲು ಅಣಿ ಆಗುತ್ತದೆ. ಬೆಳಿಗ್ಗೆ ನಾಲ್ಕಕ್ಕೆ ಎಚ್ಚರ. ಎಷ್ಟೋ ಸರಿ ನನ್ನ ಶೂಟ್ ಗಳಲ್ಲಿ ತಡ ರಾತ್ರಿ ಕೆಲಸ ಮಾಡಲು ನಿರಾಕರಿಸಿ ಜಗಳವೂ ಆಗಿದೆ. ಏನೊ, ನನ್ನ ಅಭಿಪ್ರಾಯದಲ್ಲಿ ತಡ ರಾತ್ರಿಗಳಲ್ಲಿ ಕೆಲಸ ಮಾಡಬಹುದು ಹೊರತು, ಕ್ರಿಯೇಟಿವಿಟಿ ಅಲ್ಲ.
೫.ಯಾವುದೇ ಹೊಸ ವಸ್ತು, ಅದು ನನ್ನ ಬಟ್ಟೆ ಆಗಿರಬಹುದು, ಶೊ ಅಗಿರಬಹುದು, ಅಂಗಡಿಗೆ ಹೋದ ಮೊದಲ ಸಲವೇ ತರುವುದಿಲ್ಲ. ಒಂದು ಐದು ಅಂಗಡಿಗೆ ಹೋಗಿ, ವಿಚಾರಿಸಿ ತಿಳಿದು ಕೊನೆಗೆ ಹೋಗಿ ತೊಗೊಳೊದು. ಅಂಗಡಿಯವರು ಮೋಸ ಮಾಡಲಿಕ್ಕೇ ಇದ್ದಾರೆ ಅನ್ನೊ ಒಂದು ಅವ್ಯಕ್ತ ಭಯ. ಅದರಲ್ಲೂ ’ಏ...ಇದಕ್ಕೆ ಯಾಕೆ ಇಷ್ಟು ಕೊಟ್ಟೆ, ನಾನು ನೋಡು ಇಷ್ಟು ಕಡಿಮೆ ಕೋಟ್ಟು, ಇಂತಹ ಕಡೆ ತೊಗೊಂಡೆ" ಅಂತ ಯಾರದ್ರು ಅಂದು ಬಿಟ್ರೆ, ನಾನು ತೊಗೊಂಡ ವಸ್ತು ಮೇಲೆ ಜಿಗುಪ್ಸೆ ಬಂದು ಬಿಡುತ್ತೆ.
೬.ಊಟದಲ್ಲಿ ನಾನ್ ವೆಜ್ ತುಂಬಾ ಇಷ್ಟಾನೇ.. ಆದ್ರೆ ಅದು ತುಂಬಾ ಚೆನ್ನಾಗಿ ತಯಾರು ಮಾಡಿದ್ದಾಗಿರಬೇಕು. ಇಲ್ಲಾ ಅಂದ್ರೆ ಏನೇ ಇದ್ದರೂ ತಿನ್ನೊಲ್ಲಾ. ಊಟ ಆದ ಮೇಲೆ ಸ್ವಲ್ಪ ಏನಾದರೂ ಸ್ವೀಟ್ ಬೇಕು, ಹೆಚ್ಚಿಲ್ಲ.

ಇನ್ನೊಂದೆರಡು ಹೇಳ್ಬಿಡಾಣ

೭.ಕಾರ್ ಡ್ರೈವ್ ಮಾಡೋದು ಒಂದು ಮಜಾ ಆದ್ರೆ ಅದು ಹೊಸ ದಾರಿ ಆಗಿರಬೇಕು. ಮ್ಯುಸಿಕ್ ಸಿಸ್ಟಮ್ ನಲ್ಲಿ ಒಳ್ಳೆ ಒಳ್ಳೆ ಹಾಡಿರಬೇಕು. ನನ್ನ ಪ್ರಕಾರ, ಸ್ಪೀಡ್ ಜಾಸ್ತಿ ಆದಷ್ಟು ಒಂದು ತರಹ ಮೆಡಿಟೇಟಿವ್ ಸ್ಟೇಟ್ ಗೆ ಹೋಗಬಹುದು. :)
೮.ಒಂದು ಐದಾರು ಜನ ಚೆನ್ನಾಗಿದೆ ಅಂದ್ರೆ ಮಾತ್ರ ನಾನು ಆ ಪಿಕ್ಚರ್ ನೋಡೊದು.ಹಾಡುಗಳು ಮಾತ್ರ ಯವಾಗಲೂ ಆನ್. ಯಾವಾದಾದ್ರು ಹಾಡು ಕೇಳ್ತಾನೇ ಇರತೀನಿ. ಶೂಟ್ ಮಾಡುವಾಗ,ಸಿಸ್ಟಮ್ ನಲ್ಲಿ ಎಡಿಟ್ ಮಾಡುವಾಗ, ಬೆಳಿಗ್ಗೆ ಎದ್ದ ತಕ್ಷಣದ ಭಜನ್ ನಿಂದ ಹಿಡಿದು ರಾತ್ರಿ ಮಲುಗುವ ಮುನ್ನದ ಗಝಲ್ ತನಕ ಹಾಡು ಕೇಳೋ ದೌರ್ಬಲ್ಯ.
೯.ಕೆಟ್ಟ ಅಬ್ಯಾಸಗಳೆಂದರೆ, ಅಭಿಪ್ರಾಯಗಳನ್ನ ಪಾಲೀಶ್ ಮಾಡಿ ಹೇಳೋದು ಗೊತ್ತಿಲ್ಲ. ಮೊನ್ನೆ ಯಾರೊ ಒಂದು ಘಂಟೆ ಅವರ ಹೊಸ ಪಿಕ್ಚ್ರರ್ ಕಥೆ ಹೇಳಿದರು. ಕೊನೇಗೆ ನಾನು ಹೇಳಿದ್ದು "ಈ ಕಾಲದಲ್ಲಿ ಯಾರು ನೋಡ್ತಾರೆ ಇಂಥಹ ಕತೆ ಮಾಡಿದ್ರೆ?" ಅವನಿನ್ನೂ ನನ್ನ ಹತ್ತಿರ ಮಾತಾಡಿಲ್ಲ.
೧೦. ಮೂರು ಅಥವ ನಾಲ್ಕು ದಿನಕಿಂತ ಹೆಚ್ಚಿಗೆ ಮನೆ, ಮನೆಯವರನ್ನು ಬಿಟ್ಟು ಬೇರೆ ಊರಿಗೆ ಹೋಗಿರು ಅಂದರೆ ಸಾದ್ಯವೇ ಇಲ್ಲ.

ನಿಮ್ಮದೂ ಒಂದು ಲಿಷ್ಟ್ ಮಾಡಿ...ಬೇರೆಯವರನ್ನ ಟ್ಯಾಗ್ ಮಾಡಣ ಅಂದ್ರೆ, "ನೀನೊಂತರ ಲೂಸು, ಮಾಡಕ್ಕೆಲಸ ಇಲ್ಲವೇನೋ?" ಅಂತ ಗೆಳೆಯರು ಫೊನ್ ಮಾಡಿ ಬೈಬಹುದು ಅಂತ ಭಯ.
ನಿಮಿಗನ್ನಿಸಿದ್ದು ನೀವೇ ಲಿಷ್ಟು ಮಾಡಿ. :)

1 comment:

~mE said...

:) tumba channagide..nange car driving ond churu ishta illa...vidi illa antha madtini :D

Related Posts with Thumbnails