ನಮಗೆ ಇಷ್ಟ ಇರುವ ನೋರು ವಿಷಯಗಳನ್ನು ಪಟ್ಟಿ ಮಾಡುವ ಒಂದು ಇಂಟೆರೆಸ್ಟಿಂಗ್ ಸಂಗತಿಯನ್ನ ನನ್ನ ಆತ್ಮೀಯರೊಬ್ಬರ ಬ್ಲಾಗ್ ನಲ್ಲಿ ನೋಡಿದೆ. ನಾನು ಪ್ರಯತ್ನ ಪಟ್ಟೆ.
ನಾನು ಇಷ್ಟಾ ಪಟ್ಟಿದ್ದು, ಪಡುವ ಕೆಲವು ಪುಟ್ಟ ಪುಟ್ಟ ಸಂಗತಿಗಳು :)
ಅಮ್ಮನ ಕೈತುತ್ತು
ಮಗ್ಗಿ ಪುಸ್ತಕ
ಹಳೆ ಪುಸ್ತಕದ ಹಾಳೆಯ ಘಮ ಘಮ
ಮಿಂಚು ಹುಳ
ಕಡ್ಲೆ ಮಿಠಾಯಿ
ಹುಣಸೆ ಹಣ್ಣು,ಮೆಣಿಸಿನಕಾಯಿಪುಡಿ+ಉಪ್ಪು
ಪುಟ್ಟ ಕರು
ಕರುವಿನ ಕಿವಿ
ಆಡೋ ಮಗುವಿನ ತಪ್ಪು ಹೆಜ್ಜೆಯ ಓಟ
ಕೈಯಲ್ಲಿ ಹಿಡಿದ ಮಿಂಚು ಹುಳು
ಹರಿಯುವ ನದಿಯ ಪುಟ್ಟ ತೊರೆಯಲ್ಲಿ ಕಾಲು
ದೇವ ಕಣಗಲೆ ಹೂವು
ಸಂಪಿಗೆ
ಎಳಚಿ ಹಣ್ಣು
ನೀರಿನಲ್ಲಾಡೋ ಮೀನು
ಮದ್ಯಾನಃದ ದೇವಸ್ಥಾನ ಜಗುಲಿ
ಪುರೊಹಿತರ ಮನೆಯ, ಅಂಗೈಯ ತುಂಬ ಕೊಡುತಿದ್ದ ಪ್ರಸಾದ
ಲಾಲಿ
ಜೋಗುಳ
ಮುಗುಳುನಗೆ
ಆಗತಾನೆ ಸ್ನಾನ ಮಾಡಿ ಬಂದ ನನ್ನ ಬಾಲ್ಯ ಗೆಳತಿಯ ಮೆಹಂದಿ ಹಾಕಿದ ತಲೆಗೂದಲ ಘಮ ಘಮ.
ಅವಳ ಕೈ ತಪ್ಪಿಸಿ ಓಡಿದ ನಾಯಿ ಮರಿಯ ಕಂಡು ಅವಳ ದುಃಖ
ಈಗಲೂ, ಅವಳ ಹಾಗೆ ಇರುವ ಅವಳ ಮಗಳು
ಮುನಿಸಿಕೊಂಡ ತುಂಟ ಪೋರನ ಕೆನ್ನೆಯುಬ್ಬಿಸಿದ ಕೋಪ
ಅಪ್ಪ
ಅಪ್ಪ ಕೊಡುತಿದ್ದ ಎರಡು ರೂಪಾಯಿ/ಹೆಚ್ಚು ಕೊಟ್ಟರೆ ಎಲ್ಲಿ ಹಾಳಾಗುತ್ತಾನೋ ಎಂಬ ಅವನ ಕಾಳಜಿ
ಅಜ್ಜಿಯ ಏರುದನಿ
ತಾತನ ಹಾಲುಗೆನ್ನೆ, ಬೊಚ್ಚುಬಾಯಿ
ಒಲೆ ಬದಿಯ ಶಾಖ
ಬೀಳೊ ನಕ್ಷತ್ರ
ದೇವರ ಮೇಲಿನ ನೆನ್ನೆಯ ಹೂವು
ಏಕಾಂತದಲ್ಲಿನ ಅನಾಥಭಾವ
ಗುಂಪಿನಲ್ಲಿನ ಏಕಾಂತಭಾವ
ಅಂಗೈಯಲ್ಲಿ ಕೆಂಪು ಹಣ್ಣಿನಂತೆ ತುಂಬಿದ್ದ ನನ್ನ ಒಂದು ವಾರದ ಮಗಳು
ಚುಚ್ಚು ಮದ್ದು ಕೊಟ್ಟಾಗ ಅವಳ ಮುಖ
ಹಳೆಯ ಪೆನ್ನಿಗೆ ಇಂಕು ತುಂಬುವ ಪರಿ
ಗಾಳಿ ಪಟ
ಬುಗುರಿ
ಪುಟ್ಟ ನಾಗರ
ನವರಾತ್ರಿಯ ಸಂಜೆಯ ದೀಪ
ಕಾಯುವುದು, ಕಾಯುವಾಗಿನ ಉತ್ಸುಕತೆ
ಸುರುಳಿ ಸುರುಳಿ ಸುತ್ತಿ ಬೀಳುವ ಚಳಿಗಾಲದ ಒಣಗಿದೆಲೆಯನ್ನು ಹಿಡಿದು "ನಾನು ಟೆಸ್ಟ್ ನಲ್ಲಿ ಪಾಸ್" ಅಂದುಕೊಳ್ಳುತಿದ್ದ ಆ ದಿನ
ಇನ್ ಲ್ಯಾಂಡ್ ಲೆಟರ್ [ನೀಲಿ ಬಣ್ಣದ್ದು]
ಹಳೇ ಟ್ರಾನ್ಸಿಟರ್ ರೇಡಿಯೋ
ಮಂಕಿ ಕ್ಯಾಪು
ದೇವಸ್ಥಾನದ ಹೊರಗಡೆ ಸೊಟ್ಟಗೆ ಬಿದ್ದ ಪುಟ್ಟ ಮುಗುವಿನ ಚಪ್ಪಲಿ
ಅರ್ಧ ಬರೆದು ಬಿಟ್ಟು ಹೋದ ಚಿತ್ರ ಪಟ
ಉಫ್...ನೂರಿದೆಯಾ ಅಂತ ಎಣಿಸಲಿಲ್ಲ :)
5 comments:
Wah !! mahen....yelladaku naanu howdalla nangu idu ishta antha tale alladiside :))
tumba thanks list madidake :))
ಮಹೆನ್,
ಓದಿ ಎಷ್ಟು ಖುಶಿ ಆಯ್ತೂಂದರೆ!! ನೀವು ಬಿಡುವು ಮಾಡಿಕೊಂಡು ಇಂಥದೊಂದು ಲಿಸ್ಟು ಮಾಡಿದ್ದು ಫಸ್ಟ್ ಕ್ಲಾಸ್ ಕೆಲಸ.ಮಂಗಳೂರಿನವರಾ ನೀವು? ನನ್ನ ತಂದೆಯವರ ಮೂಲ ಮೂಡಬಿದಿರೆಯಲ್ಲಿ. ಬರೀತಿರಿ.
-ಟೀನಾ.
~me Thanks to you, you dont know what this little ramblings of yours do to me and how it inspires me.Nimma hinde yerdu bili rekke galu idya? nimige iro uthsaha nodidre Tinkerbell nenapagutthe. :)
ಟೀನ, ಹೌದು ನಾನು ಮಂಗಳೂರಿನವನು, ಆಡಿದ್ದು ಮಂಗಳೂರು, ಬೆಳದದ್ದು ಮೈಸೂರು :)
ನಮ್ಮ ಜಯಂತ ಕಾಯ್ಕಿಣಿ ಹೇಳೂ ಹಾಗೆ ಪಕ್ಕ ಮೀನು ಮೈಂಡೆಡ್ ಸೌತ್ ಕೆನರ ಫೆಲೊ :)
ನಿಮ್ಮ ಬರಹಗಳು ಓದಿದೆ, ಕನ್ನಡಕ್ಕೆ ಹೊಸದೇ, ಚೆನ್ನಾಗಿದೆ. ಮುಂದುವರಿಸಿ
>> ಅಪ್ಪ ಕೊಡುತಿದ್ದ ಎರಡು ರೂಪಾಯಿ/ಹೆಚ್ಚು ಕೊಟ್ಟರೆ ಎಲ್ಲಿ ಹಾಳಾಗುತ್ತಾನೋ ಎಂಬ ಅವನ ಕಾಳಜಿ
ಇದೊಂದು ಮಾತ್ರ ಅಲ್ಲ ನೀವು ಬರೆದ ಪ್ರತಿಯೊಂದು ವಿಷಯ ಕೂಡ ಓದಿದ ಕೂಡಲೇ ನನ್ನ ಸ್ವಂತ ಅನುಭವಗಳ ಪುಟವನ್ನು ಬಿಚ್ಚಿಕೊಳ್ಳುವ ಒಂದು ಕೊಲ್ಯಾಪ್ಸಿಬಲ್ ಅನುಭವವನ್ನು ನೀಡಿತು.
wow...even i want to come up with a list...
liked this one
ದೇವಸ್ಥಾನದ ಹೊರಗಡೆ ಸೊಟ್ಟಗೆ ಬಿದ್ದ ಪುಟ್ಟ ಮುಗುವಿನ ಚಪ್ಪಲಿ
Post a Comment