Monday, November 17, 2008

ಅಬ್ಯಾಸಕ್ಕೆ ಬೀಳಬಾರದು

ಈ ಅಬ್ಯಾಸಗಳಿಗೆ ಸಿಕ್ಕಿಬೀಳಬಾರದು. ಮನಸಿನ ಯಾವುದೋ ಮೂಲೆ, ಎಷ್ಟೆ ಸಮಾಧಾನ ಮಾಡಿದ್ರು ರಚ್ಚೆ ಹಿಡಿದ ಮಗುವಿನಹಾಗೆ, ಅಬ್ಯಾಸಕ್ಕೆ ಬಿದ್ದದ್ದನ್ನೇ ಕೇಳುತ್ತೆ.
  • ಯಾವುದೋ ಸ್ನೇಹಿತನ ಮುಗುಳುನಗೆ,
  • ಯಾವುದೋ ಹೋಟೇಲಿನ ಹುಡುಗನ ವಿಧೇಯ ನಗೆ,
  • ಸಿಗ್ನಲ್ಲಿನಿಂತಾಗ, ಅದೇ ಹೊತ್ತಿಗೆ ದಿನವೂ ಅಫೀಸಿಗೋ, ಎಲ್ಲಿಗೋ ಹೊರಟ ಸ್ನಿಗ್ಧ ಸುಂದರಿಯ ಅರ್ಥವರಿಯದ ಕುಡಿನೋಟ,
  • ನಮಗಿಷ್ಟವಾದ ಎಫ್ ಮ್ ರೇಡಿಯೋದ ಯಾವುದೋ ಹಾಡು,
  • ಮಾಡಿದ ಕೆಲಸ ಇಷ್ಟ ಪಟ್ಟ ಕ್ಲೈಂಟಿನ ಬಾಯಿತೆರೆದ ಹೋಗಳಿಕೆ,
  • ಆತ್ಮೀಯ ಲೇಖಕನ ಹೊಸಪುಸ್ತಕ ಮತ್ತು ಅದು ತುಂಬಾ ಚೆನ್ನಾಗಿರಬಹುದೆಂಬ ಭ್ರಮೆ,
  • ಮೈಲ್ ಚೆಕ್ ಮಾಡಲಿಕ್ಕೆ ಹೋದಾಗ ದಿನವೂ, ತಪ್ಪದೇ ಸಿಕ್ಕುವ,"ಹೈ" "ನಮಸ್ಕಾರ" ಅನ್ನುವ ಆನ್ಲೈನ್ ಸ್ನೇಹಿತರು,
  • ಮೆಸ್ಸೆಂಜರ್ ಒಪೆನ್ ಮಾಡಿದಾಗ ಅಫ್‍ಲೈನ್ ಮೆಸ್ಸೇಜುಗಳು.
ಇದ್ಯಾವುದರ ಅಬ್ಯಾಸಕ್ಕೂ ಬೀಳಬಾರದು. ತಕ್ಷಣ, ಯಾವ ಮುನ್ನುಡಿಯೂ ಇಲ್ಲದೇ ಇವೆಲ್ಲಾ ನಿಂತು ಹೋದಾಗ, ಅಥವ ನಾವಂದು ಕೊಂಡ ಹಾಗೆ ಆಗದೇ ಇದ್ದಾಗ,ದೂರದ ಊರಿಗೆ ಬಂದು ತಲುಪಿ, ನಿಲ್ದಾಣಕ್ಕೆ ಬರುವೆನೆಂದ ಗೆಳೆಯ ಕಾಣದೇಇದ್ದಾಗ ಆಗುವ ಅನಾಥ ಭಾವ ಕಾಡುತ್ತೆ, ಮನಸ್ಸು ರಚ್ಚೇ ಹಿಡಿಯುತ್ತೆ.
ಅಬ್ಯಾಸಕ್ಕೆ ಬೀಳಬಾರದು.

No comments:

Related Posts with Thumbnails