Saturday, November 22, 2008

ಲೋಲನಾದ ರಂಗನ್‌ ಮ್ಯಾಲೆ ಹಾಲಿನೋಕುಳಿಯೊ

ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ದಾದೆನುತ
ಬಲ್ಲಿದ ರಂಗನ್‌ ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೋ ।।

ಅರೆದರು ಅರಿಶಿಣವ ಅದಕೆ ಬೆರಸ್ಯಾರೆ ಸುಣ್ಣವ
ಅಂದವುಳ್ಳ ರಂಗನ್‌ ಮೇಲೆ ಚೆಲ್ಲಿದರೋಕುಳಿಯೋ ।।

ಹಾಲಿನೋಕುಳಿಯೋ ಒಳ್ಳೆ ನೀಲದೋಕುಳಿಯೋ
ಲೋಲನಾದ ರಂಗನ್‌ ಮ್ಯಾಲೆ ಹಾಲಿನೋಕುಳಿಯೊ ।।

ತುಪ್ಪದೋಕುಳ್ಲಿಯೋ ಒಳ್ಳೆ ಒಪ್ಪದೋಕುಳಿಯೋ
ಒಪ್ಪವುಳ್ಳ ರಂಗನ್‌ ಮ್ಯಾಲೆ ತುಪ್ಪದೋಕುಳಿಯೋ ।।


http://www.kannadaaudio.com/Songs/Children/home/AneBantondane.php


ಹ ಹ..ನನ್ನ ಮಗಳಿಗೆ ಡಾನ್ಸ್ ಕ್ಲಾಸ್ ನಲ್ಲಿ "ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ದಾದೆನುತ" ಅನ್ನೊ ಹಾಡಿಗೆ ಡಾನ್ಸ್ ಮಾಡಿಸ್ತಾ ಇದ್ದಾರೆ. ಮೂರು ದಿನದಿಂದ ಒಂದೇ ಸಮನೆ ಕೋಲಾಟದ ಕೋಲು ತಂದು ಕೊಡು ಅಂತ ಹಠ, ತಂದಿದ್ದೂ ಅಯಿತು. ಅದನ್ನ ಹಿಡ್ಕೊಂಡು ತಟ್ಟಿ ತಟ್ಟಿ ತಲೆ ಚಿಟ್ಟು.
ಇವತ್ತು ಹಾಡನ್ನ ತಪ್ಪು ತಪ್ಪು ಹೇಳ್ತಾಇದ್ದಳು, ನನಗೂ ಮರೆತು ಹೋಗಿತ್ತು. ಸರಿ ಇಲ್ಲೇ ಆಲೈನ್ ನಲ್ಲಿ ಎಲ್ಲಾದ್ರು ಸಿಗುತ್ತಾ ಅಂತ ಹುಡುಕ್ತಾಇದ್ದೆ, ಸಿಕ್ಕಿತು. ಹಾಗೆ ಮಕ್ಕಳ ಹಾಡುಗಳು ಕೂಡ ಕೆಲವು ಕೇಳಲಿಕ್ಕೆ ಸಿಕ್ಕಿತು.
ಅದರ ಲಿಂಕ್ ಅಲ್ಲಿದೆ. "ಆನೆ ಬಂತೂಂದು ಆನೆ" ಹಾಡಲ್ಲಿ ಎಷ್ಟೋಂದು ಲೈನ್ಸ್ ಇದೆ ಅಂತ ನನಿಗೆ ಗೊತ್ತೆ ಇರಲಿಲ್ಲ. ಕೇಳಿದ ಮೇಲೆ ಮಜಾ ಬಂತು.
ನೀವು ಕೇಳಿ.



No comments:

Related Posts with Thumbnails