Saturday, November 8, 2008

ಯಾರಿಗೆ ಗೊತ್ತು, ನಿಮ್ಮಲ್ಲೆಲ್ಲೊ ಒಂದು ಕವಿತೆ ಮೈನೆರೆದಿರಬಹುದು

ಕತ್ತಲಲ್ಲಿ ಎಲ್ಲೊ ನಡೆದು ಹೋಗೊವಾಗ ಎಷ್ಟೇ ಎಚ್ಚರಿಕೆಯಿಂದಿದ್ದರೂ ಒಮ್ಮೊಮ್ಮೆ ಎಡವಿ ಬಿಡ್ತೀವಿ, ಹೆಬ್ಬೆರಳ ತುದಿಗೆ ಥಟ್ಟನೆ ತಟಿಯೊ ಕಲ್ಲು, ತಾನಿಂತ ಜಾಗದಿಂದ ಒಂದಿನಿತೂ ಅಲ್ಲಾಡದೆ, ಮೈಜುಮ್ ಅನ್ನುವಂತೆ ನೋವುಂಟು ಮಾಡಿ ತೆಪ್ಪಗೆ ಏನೂ ಮಾಡಿಲ್ಲವೆನ್ನುವಂತೆ ಕುಳಿತಿರುತ್ತದೆ.
ಒಂದೇ ಸಮನೆ ಹೆಚ್ಚು ಹೆಚ್ಚಾಗುತ್ತಿರುವ ನೋವು, ಕೂಗಿದರೂ ಯಾರೂ ಕೇಳುವುದಿಲ್ಲವೆಂಬ ಹತಾಶೆ, ನಾವೆ ಮಾಡಿಕೊಂಡ ಗಾಯಕ್ಕೆ ಯಾರಮೇಲೊ ಮಾಡಿಕೊಂಡ ಗೊಂದಲದ ಕೋಪ, ಎಷ್ಟೇ ಕೋಪ ಮಾಡಿಕೋಂಡರೂ ನೋವುಂಟು ಮಾಡಿದ್ದು ಭಾವನೆಗಳೇ ಇಲ್ಲದ ಕಲ್ಲು ಎಂದರಿವಾದಾಗ ಆಗುವ ಶಕ್ತಿಹೀನವೆನಿಸುವ ನಿರಾಸಾಭಾವ ಇದನ್ನೆಲ್ಲಾ ಅನುಭವಿಸಬೇಕು. ಉಫ್! ಉಫ್! ಎಂದು ಕಾಲಿನ ತುದಿಯನ್ನು ಊದಿ ಸಮಾಧಾನ ಮಾಡುವಾಗ ಸಣ್ಣದಾಗಿ,ಸುಂದರವಾಗಿ ಮೂಡುವುದು, ಯಾವುದೋ ಕಾವ್ಯ ಒಂದರ ಪುಟ್ಟ ಸ್ಪೂರ್ತಿಯ ಸೆಲೆ.
ಕೋಪ ಕಳೆದು, ಕುಂಚ ಹಿಡಿದಾಗ ಕಲಾವಿಧನ ಜನನ.
ಧರ್ಯ ಮಾಡಿ, ಕತ್ತಲಲ್ಲಿ ನಡೆಯಿರಿ, ಎಡವಿ, ತಪ್ಪುಮಾಡಿ, ಯಾರಿಗೆ ಗೊತ್ತು, ನಿಮ್ಮಲ್ಲೆಲ್ಲೊ ಒಂದು ಕವಿತೆ ಮೈನೆರೆದಿರಬಹುದು.

No comments:

Related Posts with Thumbnails