Friday, November 7, 2008

ಕಲ್ಪನೆಯ ಕೈಗೆ ಸ್ಟಿಯರಿಂಗ್ ಕೊಟ್ಟು,

ಕಲ್ಪನೆಯ ಕೈಗೆ ಸ್ಟಿಯರಿಂಗ್ ಕೊಟ್ಟು, ಯಾವುದೋ ಬೇಜಾರನ್ನ ಆಕ್ಸಲರೇಟರನ ಮೇಲಿಟ್ಟು,ಮುಂದೆ ಕಾಣೊ ರಸ್ತೆ ಮೇಲೆ ಬರವಸೆ ಇಟ್ಟು, ಕಾರು ಹತ್ತಿ ಹೋಗಿದ್ದೆ, ಬರುವಾಗ ಪುನಃ ಯತಾಃಸ್ಥಿತಿ. ನೀವೆಲ್ಲಾ ಬೇಜಾರಾದಾಗ ಏನ್ ಮಾಡ್ತೀರೋ ಗೊತ್ತಿಲ್ಲ, ನಾನು ಮಾತ್ರ ಕ್ಯಾಮರ ಹೆಗಲಿಗೆ ನೇತ್ ಹಾಕಿಕೊಂಡು ಕಣ್ಣಿಗೆ ಕಾಣದ್ದು ಕ್ಯಾಮರಕ್ಕೆ ಕಾಣತ್ತಾ? ಅಂತ ಹೊರಟುಬಿಡ್ತೀನಿ. ಹಾಗೆ ಮೊನ್ನೆ ಗುರುವಾರ ಮೈಸೂರಿಗೆ ಹೋಗಿದ್ದೆ. ಬಹಳ ಹತ್ತಿರದ ಒಬ್ಬ ಮಿತ್ರ ಬಂದಿದ್ದ. ಅವನನ್ನ ಮಾತಾಡಿಸಿ ಬರುವ, ಹಾಗೇ ನನ್ನ ಕಾಲೇಜಿಗೆ ಹೋಗಿ ಬರುವ ಎಂಬುದು ಐಡಿಯ.
ಆರ್ಟ್ಸ್ ಕಾಲೇಜಿನಲ್ಲಿ ಓದಿದವರ ಒಂದು ಅಡ್ವಾಂಟೇಜ್ ಏನಂದ್ರೆ, ಏನೂ ತೊಚುತಿಲ್ಲವಲ್ಲ ಅನ್ನಿಸುವಾಗ ಒಮ್ಮೆ ನಾವು ಓದಿದ ಕಾಲೇಜಿಗೆ ಹೋಗಬೇಕು. ತಕ್ಷಣ ಮನಸ್ಸಿಗೆ ಒಂದು ಐದು ವರ್ಷ ಕಡಿಮೆ ಯಾಗಿ ಪುನಃ ಚೈತನ್ಯ.
ನಮ್ಮ ಜೂನಿಯರಗಳ ಜೊತೆ ಕೂತು ಸ್ವಲ್ಪ ಹೊತ್ತು ಹರಟಿ, ಗೊತ್ತಿದ್ದದ್ದನ್ನು ಹೇಳಿ, ಹೊಸದನ್ನು ಕೇಳಿ ರಿಫ್ರೆಶ್ ಆಗಬಹುದು.
ಹಾಗೇ ಆಯಿತು ಕೂಡ.



No comments:

Related Posts with Thumbnails