ಯಾರೊ ಬಹಳ ತಮಾಷಿಯಾದ ಒಂದು ಈ-ಮೈಲ್ ಕಳಿಸಿದ್ದಾರೆ.
ಓದಿ ಸಂಜೆ ತೆಳ್ಳಗಾಯಿತು, ನಗು ತರಿಸಿತು.
ನನ್ನ ಹೆಸರಿನ ಬಗ್ಗೆ ಬಹಳ ತಮಾಷಿಯಾಗಿ ಗೇಲಿ ಮಾಡಿದ್ದಾರೆ, ಆದರೇ ಅವರ ಹೆಸರು ಹೇಳದೇ ಹಾಗೇ ಹೋಗಿದ್ದಾರೆ. ಇರಲಿ, ನಿಂದಕರಿರಬೇಕು.
ಮಹೇಂದ್ರ ಅನ್ನುವ ನನ್ನ ಹೆಸರು ಮಹೇನ್ ಆಗಿದ್ದರ ಬಗ್ಗೆ ಅವರ ತಕರಾರು.
ಸುಮಾರು ಹತ್ತು ವರ್ಷದಿಂದ ನನ್ನ ಉದ್ಯೊಗದ ವಲಯದಲ್ಲಿ ನನ್ನ ಹೆಸರು ಸ್ವಲ್ಪ ಚಿಕ್ಕದಾಗಿದೆ. ಕರೆಯುವವರು ಮಹೇನ್ ಅಂತ ಕರೆದು ಕರೆದು ನನಗೊ ಸಣ್ಣ ವ್ಯತ್ಯಾಸ ಕರಗಿ ಹೋಗಿದೆ. ಚಿಕ್ಕದು ಚೊಕ್ಕವೆಂದು ಹಾಗೆ ಬಿಟ್ಟೆ.
ನನ್ನ ಸಿಂಹ ಅನ್ನುವ ಹೆಸರಿನಲ್ಲಿ ಎರಡು M ಇರುವ ಬಗ್ಗೆ ಇನ್ನೊಂದು ಗೇಲಿ.ಅದರಲ್ಲಿ ಎರಡು M ಬಂದದ್ದು ನನ್ನಿಂದಾಗಿ ಅಲ್ಲ. ಯಾರೋ ಶಾಲೆಯಲ್ಲೇ ಹಾಗೆ ಮಾಡಿ ಟಿ ಸಿ ಕೊಟ್ಟಿದ್ದಾರೆ. "ಅದು ನ್ಯುಮಾರೊಲಜಿನ?" ಅಂತ ಕೇಳಿದವರಿಗೆ,ಅಲ್ಲ ಅದು ನಮ್ಮ ಶಾಲೆ ಯಾವುದೊ ಕಾರಕೂನನ ಕ್ರಿಮಿನಾಲಜಿ ಅಂತ ಹೇಳಿ ಸಾಕಾಗಿದೆ.ಯಾವುದೋ ಆದರ್ಶವಾದದ ಹೆಸರಿಟ್ಟಿಕೊಂಡು, ಅಡ್ಡದಾರಿ ಹಿಡಿದವರಿಗಿಂತ, ಆದರ್ಶಗಳನ್ನ, ಇರುವ ಹೆಸರಿನಲ್ಲೇ ಕಂಡುಕೊಳ್ಳುವ ಆಸೆ. ಅಷ್ಟೆ.
ಏನೇ ಇರಲಿ, ಇಲ್ಲಿ ತನಕ ಬಂದು, ಇಲ್ಲಿರುವುದನ್ನು ಓದಿ, ಅದರಲ್ಲಿ ತಪ್ಪು ಕಂಡು ಹಿಡಿದು, ಈ-ಮೈಲ್ ಮಾಡಿದವರ ಶ್ರಮಕ್ಕೆ ನನ್ನ ನಮನ.
ನನ್ನ ಕನ್ನಡದ ಹೆಸರಿನ ಬಗ್ಗೆ ಇಂಗ್ಲೀಷಿನಲ್ಲಿ ಪತ್ರ ಬರೆದು, ಹೆಸರೂ ಹೇಳದೇ ಹಾಗೇ ಹೋದ ಅನಾಮಧೇಯರಿಗೆ...ನವರಾತ್ರಿಯ ಶುಭಾಶಯ :)
No comments:
Post a Comment