
ಅವತ್ತಿಗಿಂತ ನೀನು ಇವತ್ತು ನಮಗೆ ಬೇಕು
ಬಿಳಿಬಟ್ಟೆ ಬೆತ್ತ ಹಿಡಿದು ಒಂದು ಹೆಜ್ಜೆ ಬಂದು ಹೋಗು.
ದಿಕ್ಕು ತಪ್ಪಿದ ಪುಟ್ಟ ಕಂದನಂತಾಗಿದೆ ನಿನ್ನ ದೇಶ
ಒಮ್ಮೆ ಬಾ....ಬಾಪು.
ಕೊಲ್ಲುವವರಿಗೆ, ಕೊಲ್ಲದೇ ನೀನು ತಂದ ಸ್ವಾತಂತ್ರ್ಯದ
ಕಥೆ ಹೇಳು, ಕರುಣೆ ತೋರು.
ಪುಟ್ಟ ಹುಡುಗನ ಕೈ ಹಿಡಿದು, ಆಡಿನ ಹಾಲು ಕುಡಿಸಿ,
ಉಪ್ಪು ತರಲು ಸಮುದ್ರದೆಡೆಗೆ ಕರೆದೊಯ್ಯಬಾರದೆ,
ಸರಿದಾರಿಯೆಡೆಗೆ ನಡೆಸಬಾರದೇ
ಬಾಪು..
No comments:
Post a Comment