
ನವರಾತ್ರಿ ಅಂದ್ರೆ ಒಂದು ನೆನಪುಗಳ, ಒಂಬತ್ತು ದಿನಗಳ ಮೆರವಣಿಗೆ.
ಚಿಕ್ಕಪ್ಪ, ಸಂಜೆವರೆಗೂ ಮಣ್ಣಿನಲ್ಲಿ ಆಡಿದ ನಮಗೆ ಬಾವಿಕಟ್ಟೆ ಹತ್ತಿರ ನಿಲ್ಲಿಸಿ
ಬಿಂದಿಗೆಯಿಂದ ನೀರು ಸೇದಿ ತಲೆಯಿಂದ ಹಾಕಿ ಸ್ನಾನ ಮಾಡಿಸಿ,
"ಜಯತು ಜಯ ವಿಠಲ" ಹೇಳಿಸುತ್ತಿದ್ದರು.
ಆಗಲೇ ಪಕ್ಕದ ಚಿಕ್ಕ ದೇವಸ್ಥಾನ ದಿಂದ ಆರತಿಯ ಸಮಯದ ಜಾಗಟೆಯ ಸದ್ದು.
"ಇವತ್ತು ದೇವಿ ಭೂಮಿಗೆ ಬಂದು ಒಂಬತ್ತು ದಿನ ಇರ್ತಾಳೆ" ಅಂತ ಹೇಳುತ್ತಿದ್ದ
ಚಿಕ್ಕಪ್ಪ, ಒಂಬತ್ತು ದಿನವೂ ಮನೆಯಲ್ಲಿ ಪೂಜೆ, ಬಜನೆ ಮಾಡೋರು.
ಮತ್ತೊಂದು ನವರಾತ್ರಿ, ಮನಸ್ಸಿನಲ್ಲಿ ಊರು.
No comments:
Post a Comment