




"ಬಾಯಿ ಬಿಟ್ರೆ ಬೆಂಕಿ ಉಗುಳ್ತಾನಪ್ಪ" ಅಂತಾರೆ ಕೆಲವರನ್ನ. ನಮ್ಮ ಲಂಕೇಶ್ ಈ ಕ್ಯಾಟೊಗೊರಿಗೆ ಸೇರ್ತಾರೆ. ಇದರ ಗುಣಾತ್ಮಕ ಭಾಗದಲ್ಲಿ ನೋಡಿದ್ರೆ, ನಮ್ಮ ತೇಜಸ್ವಿ ನೆನಪಾಗ್ತಾರೆ. ಅವರೂ ಇದ್ದದ್ದ ಇದ್ದ ಹಾಗೆ ಹೇಳಿ ಕೆಟ್ಟವರೂ ಅನ್ನಿಸಿ ಕೊಂಡವರೇ.
ನಾನು ಇವನನ್ನ ನೋಡಿದ್ದು, ಯಾವುದೊ ಸೂಪರ್ ಮಾರ್ಕೆಟ್ ನ ಒಂದು ವರ್ಷದ ಸಂಬ್ರಮದಲ್ಲಿ ಅವರು ಮನರಂಜನೆಗಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ. ಮೈಗೆಲ್ಲಾ ಅಫ್ರಿಕಾದ ಕಾಡುಜನದಹಾಗೆ ಬಣ್ಣ ಬಳೆದುಕೊಂಡು, ಅವರಹಾಗೆ ಇದ್ದ ಈತ ಹತ್ತಿರ ಬಂದರೇನೆ ಸೀಮೆಯೆಣ್ಣೆ ವಾಸನೆ ಬರುತ್ತಿತ್ತು. ಅಲ್ಲಲ್ಲಿ ಅಗ್ನಿ ಕುಂಡಗಳನ್ನು ಇಟ್ಟುಕೊಂಡು, ಒಂದು ಬಟ್ಟಲಲ್ಲಿ ಬಿಸ್ಕತ್ತುಗಳನ್ನೂ ಇಟ್ಟುಕೊಂಡಿದ್ದ. ಬಿಸ್ಕತ್ತಿಗೊ, ಬೆಂಕಿಗೊ ತಕ್ಷಣದ ಸಂಬಂದದ ಅರಿವಾಗಲಿಲ್ಲ ನನಗೆ.
ಕರ್ಕಷವಾದ ಮ್ಯುಸಿಕ್‍ನ ನಡುವೆ ಒಂದೆರಡು ಪಲ್ಟಿ ಹಾಕಿ ಎಂಟ್ರಿ ಕೊಟ್ಟ ಈತ, ಜನರಬಾಯಲ್ಲಿ ಶೀಟಿ ಉದುರಿಸಿದ. ನಂತರ ಶುರುವಾದದ್ದೇ ಬೆಂಕಿ ಉಗುಳುವಾಟ. ಒಂದು ಕೊಂಬಿನ[ಎಪೆಕ್ಟ್ ಗಾಗಿ] ಒಳಗೆ ಸೀಮೆಏಣ್ಣೆ ತುಂಬಿ ಕೊಂಡು ಅದನ್ನು ಬಾಯಲ್ಲಿ ಹಾಕಿ, ಒಂದು ಕಡ್ಡಿಯ ತುದಿಯಲ್ಲಿ ಇದ್ದ ಬೆಂಕಿಯ ಉಂಡೆಯೆಡೆಗೆ ಉಗುಳುತಿದ್ದ. ಭಗ್ ಅಂತ ತರ ತರನಾದ ಬೆಂಕಿಯ ಚಿತ್ತಾರ.
ಕಣ್ಣುಬಾಯಿ ಬಿಟ್ಟ ಜನಗಳ ಮೋಖದಲ್ಲೂ ಬೆಂಕಿ ಪ್ರತಿಫಲಿಸಿ ಆಶ್ಚರ್ಯಕ್ಕೊಂದು ಆಲಾಪ.
ಮದ್ಯ ಮದ್ಯ ಒಂದು ಬಿಸ್ಕತ್ತು ತುಂಡು ತೆಗೆದು ಕೊಂಡು, ಅದಕ್ಕೆ ಬೆಂಕಿ ಹತ್ತಿಸಿ, ಅದನ್ನು ಬಾಯಾಲ್ಲಿ ಇಟ್ಟು ಕೊಳ್ಳುತ್ತಿದ್ದ. ಅಥವ ಅದನ್ನು ಮೇಲೆ ಎಸೆದು ಅದಕ್ಕೆ ಸೀಮೆಎಣ್ಣೆ ಉಗುಳುತ್ತಿದ್ದ.
ಅಂತು ಹತ್ತು ಹದಿನೈದು ನಿಮಿಷಗಳ ಅಗ್ನಿನಾಟ್ಯ. ಸುತ್ತ ನೆರೆದ ಜನಗಳ ಕೇಕೆ.
ಎಲ್ಲಾ ಮುಗಿದಾದ ಮೇಲೆ ಅನ್ನಿಸಿದ್ದು, ಇವನಿಗೆ ಏನಾದರೂ ತಿಂದಾಗ ಅದರ ರುಚಿ ಹತ್ತುವುದಾ ಇಲ್ಲವಾ? ನಾಲಿಗೆ ಆಗಾಗ ಅಕಸ್ಮಿಕವಾಗಿ ಸುಟ್ಟು, ಚಿಕನ್ ತಿಂದಾಗ ವೆತ್ಯಾಸ ಗೊತ್ತಾಗುತ್ತದೋ ಇಲ್ಲವೊ? ಒಂದು ಬಿಸಲ ಓಡಾಟದಲ್ಲೇ, ಉಷ್ಣ ಅಂತಾ ಗೋಳಾಡೊ ನಾವಿರುವಾಗ ಇವನಿಗೆಷ್ಟು ಉಷ್ಣವಾಗ ಬಹುದು?
ಇತ್ಯಾದಿ.
ಅಂತು, ಅವನ ಒಳಗಿನಬೆಂಕಿಯ ಅರಿತವರಾರು? ಅನ್ನಿಸಿ, ಅವನಿಗೊಂದು ಕೈಮುಗಿದು ಬಂದೆ.
No comments:
Post a Comment