
ತಲೆಯಲ್ಲಿ ಯಾವುದಾದರೂ ಒಂದು ಯೋಚನೆ ಇರಲೇಬೇಕು. ಇಲ್ಲ ಅಂದರೆ ದೇಹ ಸೊಂಬೇರಿಯಾಗುತ್ತೆ. ಏನೂ ಇಲ್ಲ ಅಂದ್ರು, ಮುಂದೊಂದು ದಿನ, ಯಾವುದೇ ಯೊಚನೆ ಇಲ್ಲದೆ ಆರಾಮವಾಗಿರುತ್ತೇನೆ, ಅದಕ್ಕೊಸ್ಕರ ಕಷ್ಟಪಡಬೇಕು ಅನ್ನೊ ಯೊಚನೆ ಇರಬೇಕು. ಯಾವುದೂ ಯೋಚನೆಗಳು ಇಲ್ಲ ದಿನ ಬರುತ್ತೊ ಇಲ್ಲವೊ, ಪ್ರಯತ್ನ ಅಂತು ತಲೆ ತುಂಬಿಕೊಳ್ಳುತ್ತೆ, ತಲೆ ಹಾಳಾಗೋದು ತಪ್ಪುತ್ತೆ.
ಧ್ಯಾನ ಅಂತ ಘಂಟೆಗಟ್ಟಲೆ ಕೂತು ಮನಸ್ಸನ್ನ ಕಟ್ಟುಹಾಕಿ, ಯೊಚನೆಗಳನ್ನೆಲ್ಲಾ ಹೊರಹಾಕಿ ಶಾಂತ ಮಾಡೋ ಪ್ರಯತ್ನ ಕೂಡ ಒಂದು ಯೋಚನಾ ಲಹರಿನೇ ಅಲ್ಲವ?
No comments:
Post a Comment