Sunday, September 28, 2008

ಬಾಲ್ಯ ನೆನಪಾಗುತ್ತಾ?

ಕಾರ್ಟೂನ್ ಅಂದ್ರೆ ಆಗಲಿಂದಲೂ ಇಷ್ಟ.
ಅದರಲ್ಲೂ ಭಾನುವಾರ ಮದ್ಯಾನಃ ಬರುತಿದ್ದ ಸ್ಪೈಡರ್ಮ್ಯಾನ್ ಅಚ್ಚು ಮೆಚ್ಚು. ನಮ್ಮ ಮನೇಲಿ ಟೀವಿ ಇರಲಿಲ್ಲ. ಪಕ್ಕದ ಮನೇಲಿ ಹೋಗಿ ಅವರನ್ನ ಕಾಡಿ ಬೇಡಿ ನೋಡತಿದ್ದದ್ದು. ಸ್ಪೈಡರ್ಮ್ಯಾನ್ ಬರುವುದಕ್ಕೆ ಮುಂಚೆ, ರಾಷ್ಟ್ರೀಯ ಭಾವೈಕ್ಯತೆಯ ನೆಪದಲ್ಲಿ "ಏಕ್ ತಿತಲಿ" ಬರುತಿತ್ತು. ತಲೆ ಆ ಕಡೆ ಈ ಕಡೆ ಆಡಿಸುತ್ತಾ ನೋಡುತ್ತ ಇದ್ದೆವು.
ಮೊನ್ನೆ ಪುನಃ ನೋಡಲು ಸಿಕ್ಕಿತು, ಹಂಚಿಕೊಳ್ಳುತ್ತಿದ್ದೇನೆ.

No comments:

Related Posts with Thumbnails