Thursday, September 18, 2008

ರಘು ದೀಕ್ಷಿತ್


ರಘು ದೀಕ್ಷಿತ್
ಸೈಕೊ ಚಿತ್ರದ ಹಾಡುಗಳನ್ನ ಕೇಳ್ತಾಇದ್ದೆ. ಕೇಳಕ್ಕೊ ಮುಂಚೆ, ಹೊಗಳಿಕೆಗಳನ್ನ ಕೇಳಿದ್ದೆ. ರಘು ಬಗ್ಗೆ ನನಿಗೆ ಒಂದು ಅಶ್ಚರ್ಯ ತುಂಬಿದ ನೋಟ ಇರಲಿಕ್ಕೆ ಸಾದ್ಯವಿರಲಿಲ್ಲ, ಏಕೆಂದರೆ ನನಗೆ ಆತ ಮೈಸೊರಿನ ದಿನಗಳಿಂದಲೂ ಪರಿಚಯ.
ಹಾಗಾಗಿ, ಏನಿದೆ ಅನ್ನುವ ಕುತೂಹಲ ಮಾತ್ರ ಇತ್ತು.
ಹಾಡುಗಳು ಚೆನ್ನಾಗಿವೆ. ಚಲನ ಚಿತ್ರ ಒಂದು ಕಮರ್ಶಿಯಲ್ ಬ್ಯಾಲೆನ್ಸ್. ನಮ್ಮ ಕ್ರಿಯಾಶೀಲತೆ, ಸ್ವಾಭಿಮಾನ ಇವುಗಳೆಲ್ಲದರ ಮದ್ಯ, ನಾಲ್ಕು ಜನ ಕೇಳುವಂತಹ ವಸ್ತುವನ್ನು ತಯಾರು ಮಾಡಬೇಕು. ಅದು ಮಾರಾಟ ಕೂಡ ಆಗಬೇಕು. ಆ ದೃಷ್ಟಿಯಲ್ಲಿ ಹಾಡುಗಳು ಚೆನ್ನಾಗಿದೆ. ಕನ್ನಡದ ಮಟ್ಟಿಗೆ ಒಂದು ಹೊಸತನ ಇದೆ. ವಾದ್ಯಗಳ ಉಪಯೊಗ ನೂತನವಾಗಿದೆ.
ನಂತರ, ಮುಂದೆ ಹೋದರೆ, ಒಂದೇ ಏರು ಸ್ವರದ ಹಾಡುಗಾರಿಕೆ ಎರಡು ಸಲ ಕೇಳಿದರೆ ಸ್ವಲ್ಪ ಆಯಾಸ ಮಾಡುತ್ತದೆ. ಮಹದೇಶ್ವರ ಹಾಡು ಇತ್ತ ಫೊಕ್ [ಜಾನಪದ] ಅಲ್ಲ ಅಥವ ಕ್ಲಾಸಿಕ್ಕೊ ಅಲ್ಲ, ಬರೀ ಕೇಳಲಿಕ್ಕೆ ಚಂದ ಮಾಡಿರುವಂತಿದೆ..ಇದೇ ಹೊಸತನವೆಂದರೆ...ಎಷ್ಟು ದಿನ ಇರುತ್ತದೆ ಎಂದು ನೋಡಬೇಕು.
ರಘು ಅವನ ಸ್ವಂತ ಅಲ್ಬಮ್ ಕೂಡ ತಂದಿದ್ದಾನೆ. ಹಿಂದಿಯ ನಟರೆಲ್ಲಾ ಅದರ ಬಗ್ಗೆ ಮಾತಾಡಿದ್ದಾರೆ. ಶಿಶುನಾಳರ ಪದ್ಯಗಳಿಗೆ ಅವನು ರಾಗ ಸಂಯೊಜನೆ ಮಾಡಿದ್ದಾನೆ. ಯಾಕೋ ಕೇಳಲಿಕ್ಕೆ ಕಷ್ಟ ಆಯಿತು. ಶಿಶುನಾಳ ಶರೀಫರ ಹೊಸ ಚಿತ್ರ ಬರೆದು, ಅದರಲ್ಲಿ ಅವರಿಗೆ ಪ್ಯಾಂಟು ಶರಟು ಹಾಕಿದ ಹಾಗಿತ್ತು. ಅವರ ಬಗ್ಗೆ ಕಲ್ಪನೆ ಇಲ್ಲ ದವರಿಗೆ ಇದೇ ಚಂದ ಅನ್ನಿಸಬಹುದು. ಅಶ್ವಥ್ಥರ ಶಿಶುನಾಳರನ್ನ ಕಂಡವರಿಗೆ...ಇವರು ಸ್ವಲ್ಪ ಯಂಗು..ಯಂಗೆಗೊ..
ಅಂತು, ಕನ್ನಡಕ್ಕೆ ಒಂದು ಫಿರಂಗಿ ಧನಿ ಗಿಟಾರು ಇಟ್ಟುಕೊಂಡು ಬಂದಿದೆ.
ಇಲ್ಲಿಯವರು ಅವನನ್ನ ಎಷ್ಟು ಕೆಡಿಸುತ್ತಾರೊ...ಅಥವ ಇವನೇ ಅವರನ್ನು "ಕೆಡಿಸುತ್ತಾನೊ" ನೋಡಬೇಕು.
ಸದ್ಯಕ್ಕಂತೂ...ಎಲ್ಲೆಲ್ಲೂ..ಪೊಜೆಗೆ ಬಂದೆ ಮಹದೇಶ್ವರ....ಕಂಸಾಳೆ ಕತ್ತು ಹಿಚುಕಿ...ಕೀಬೊರ್ಡ್ ನಲ್ಲಿ ಹುಟ್ಟಿಬಂದಿದೆ. ಸದ್ಯಕ್ಕೆ, ಜಿಂಕೆ ಮರಿ ಹಿಂದೆ ಓಡ್ತಾಇದ್ದ ಜನಕ್ಕೆ ಸ್ವಲ್ಪ ವಿರಾಮ.

2 comments:

ರಾಜೇಶ್ ನಾಯ್ಕ said...

ಮಹೇಂದ್ರ,
ದಿಟ್ಟ ನೇರ ಬರಹ. ನಿನ್ನಾ ನೋಡಲು ಬಂದೆ ’ರಘು ಅಣ್ಣಾ’ ಎಂದು ಚಿತ್ರ ನಿರ್ಮಾಪಕರು ರಘು ಮನೆಗೆ ಸಾಲುಗಟ್ಟಿ ಬಂದರೂ ಆಶ್ಚರ್ಯವಿಲ್ಲ. ಶಿಶುನಾಳ ಶರೀಫ್ ಬಗೀ ಬರೆದ ಸಾಲುಗಳಿಗೆ ನನ್ನ ಸಹಮತ ಇದೆ. ನನಗೂ ಹಾಗೇ ಅನಿಸಿತ್ತು. ಆದರೆ ಸದ್ಯಕ್ಕೆ ಒಂದು ಟೆಂಪರರಿ ಹೊಸತನ ರಘು ನೀಡಿದ್ದಾರೆ.

Unknown said...

ಮಹೇಂದ್ರ,

ನಿಮಗೆ ನೆನಪಿರಬಹುದು, ಆಲ್ವಿನ್ ಎಂಬ ಸರಳ ಮನಸ್ಸಿನ ಸಂಗೀತಗಾರ ವಿಜಯ ಕರ್ನಾಟಕಕ್ಕೊಂದು ಜಿಂಗಲ್ ಮಾಡಿಕೊಟ್ಟಿದ್ದ. ಅದರ ಕೊನೆಯಲ್ಲಿ ಹೈ ಪಿಚ್ ಕೋರಸ್ ಗೋಸ್ಕರ ಅವನ ಗೆಳೆಯ ರಘು ಬಂದಿದ್ದ. ಹಾಗೆಲ್ಲ ಕೋರಸ್ ಹಾಡಿದರೆ ಸಣ್ಣವನಾದೆ ಅಂತ ತಿಳಿಯುವ ಜನರಿರುವ ಈ ಲೋಕದಲ್ಲಿ ತನ್ನ ಸ್ನೇಹಿತನಿಗೋಸ್ಕರ ನೀಟಾಗಿ ಹಾಡಿ, ತಮಾಷೆ ಮಾತನಾಡಿ ಹೋಗಿದ್ದ ರಘು ಬಗ್ಗೆ ಓದಿದ್ದು ನಿಮ್ಮ ಬರಹದಲ್ಲಿಯೇ.
ನಾನು ಅವರ ಹಾಡುಗಳನ್ನು ಕೇಳಿಲ್ಲ.

ಗುರು ಬಾಳಿಗ

Related Posts with Thumbnails