ಸುದೇಷ್ಣೆ...
ಏನ್ ಚೆನ್ನಾಗಿದೆ ಹೆಸರು. ಕಾಡಬೆಳದಿಂಗಳು ಚಿತ್ರ ನೊಡ್ತಾಇದ್ದೆ...ಅದ್ರಲ್ಲಿ ಅನನ್ನ್ಯ ಕಾಸರವಳ್ಳಿ ಹೆಸರು ಸುದೇಷ್ಣೆ.
ಹಾಗಂದ್ರೆ...ದ್ರೌಪದಿಯಂತೆ. ದ್ರೌಪದಿ ಬಗ್ಗೆ ಇರೊ ಇನ್ನೊಂದು ಹೆಸರು ಅದು. ದ್ರೌಪದಿಯ ಬಗ್ಗೆ ಇರೊ ಯಾವುದೇ ಹೆಸರನ್ನ ಮಕ್ಕಳಿಗೆ ಇಡುತ್ತಾರೆ ಅಂತೆ ನನಿಗೆ ಗೊತ್ತೇ ಇರಲ್ಲಿಲ್ಲ. ಮಹಾಭಾರತವನ್ನ ಸರ್‍ಫೇಸ್ ಲೆವೆಲ್‍ನಲ್ಲಿ ಅರ್ಥಮಾಡಿಕೊಂಡಿರೊ ಬಹಳಜನಕ್ಕೆ,ದ್ರೌಪದಿ ಅನ್ನೊ ಹೆಸರು ಒಂದು ಸಣ್ಣ ಮುಗುಳುನಗೆ ಹುಟ್ಟುಸೊ ಅಂತಹುದು.
ಐದು ಜನರೊಡನೆ ಅವಳ ದಾಂಪತ್ಯ, ಅದರೊಳಗಿನ ಒಪ್ಪಂದಗಳು ಚಿಕ್ಕವರಾದ ನಮಗೆ ತಿಳಿಯುತಿರಲ್ಲಿಲ್ಲ. ಅದರ ಮೇಲೆ ಅವಳು ಪತಿವ್ರತೆ ಅಂತೆಲ್ಲಾ ಹೇಳಿದಾಗ ಹುಟ್ಟುತಿದ್ದ ಎಷ್ಟೊ ಪ್ರೆಶ್ನೆಗಳು "ಇದು ನಮಗೆ ಮೀರಿದ್ದು ಇರಬೇಕು" ಅಂತ ಹೆಚ್ಚು ಕೆದುಕಲಿಲ್ಲ... ಈಗಲು ಅವಳು ಐದು ಜನರನ್ನ ಒಪ್ಪಿದ್ದು ಹೇಗೆ ಅನ್ನೊ...ಪ್ರೆಶ್ನೆ ಇನ್ನೊ ಹಾಗೆ ಇದೆ.
ಯಾವಗಲಾದ್ರು ಅವಳ ಬಗ್ಗೆ ಇನ್ನೂ ಹೆಚ್ಚು ಓದಬೇಕು. ಒಂದು ಕೆಲಸ ಸಾದ್ಯನೇ ಇಲ್ಲ ಅನ್ನೊವಾಗ ಅದನ್ನ ಸಾದಿಸಿ ತೊರಿಸೊದು ಹೆಣ್ಣಿನ ಆಶ್ಚರ್ಯಗಳಲ್ಲಿ ಒಂದು. ದ್ರೌಪದಿ, ಆ ಲೆಕ್ಕದಲ್ಲಿ ಮಹಾನ್ ಹೆಣ್ಣು ಮಗಳು.
No comments:
Post a Comment