
ಬಿಸಿಲು,ಬಾಯಾರಿಕೆ,ಬೆಂಗಾಡು ಅಂದ್ರೆ ಏನು?
ಒಮ್ಮೆ ನೋಡಿಬರೊಣ ಬಾ ಎಂದು ಒಪ್ಪಿಸಿ
ಕರೆದೊಯ್ದೆ...
ಬಟ್ಟ ಬಯಲಿನ...ಕೆಂಪು ಮಣ್ಣಿನ ಊರದು,
ಯಾರೂ, ಯಾರ ಕೂಗಿಗೂ...ಓ..ಎನ್ನರೇನೋ..
ಎಂಬಷ್ಟು...ಖಾಲಿ...ಖಾಲಿ...ಬಾಯಾರಿದ ಬಯಲು
ಮೊಡಕ್ಕೂ ಈ ಊರಿಗೂ ಮುನಿಸೇನೊ...
ಹನಿನೀರಿಗೂ...ಪ್ರಾಥನೆ...
ಹಿಂದಿರುಗಿ ಬಂದಾಗ...ಉಳಿದದ್ದು...
ಬಿಸಿಯುಸಿರು...ಮತ್ತು ಬೆಂದ ಮನಸ್ಸು...
No comments:
Post a Comment