Saturday, June 7, 2008

ಅವನು ಕಲಾವಿದನೇ ಇರಬೇಕು ಅಲ್ವ?

ವಿಚಿತ್ರ ಅಲ್ವ...
ನಿನ್ನನ್ನ
ಕೈಯಲ್ಲಿ ಹಿಡಿದು
ಮೃದುವಾಗಿ ಮೀಟಿ, ದ್ವನಿ ಹೊರಡಿಸಿ
ತನ್ನೊಳಗಿನ ಸುಖ ದುಃಖ ನೆಲ್ಲಾ
ಹೇಳ್ಕೊಳ್ಳೊ ಆ
ಕಲಾವಿಧ...
ನಿನ್ನಿಂದ ಹೊರಟ ಆ ದ್ವನಿ
ನಿಂದೊ
ಅಥವ
ಅವನದೊ
ಅಂಥ ಯೊಚನೆನೇ ಮಾಡಲ್ಲಾ...
ಅಷ್ಟೆಲ್ಲಾ ಭಾವನೆಗಳನ್ನ ಹೊರಗೆ ಹಾಕುತೀಯಲ್ಲಾ
ನಿನಗೆ ಯಾರ ನೆನಪು, ವಿರಹ?
ನಮ್ಮನ್ನ ಅವನಿಗೆ ಬೇಕಾದ ಹಾಗೆ ಅಡಿಸ್ತಾನಲ್ಲ
ಆ ದೇವರು...ಅವನಿಗೂ ನಮ್ಮ ದುಃಖ ಅರ್ಥ ಅಗಲ್ಲಾ
ಅನ್ನಿಸುತ್ತೆ...
ಅವನು ಕಲಾವಿದನೇ ಇರಬೇಕು ಅಲ್ವ?

No comments:

Related Posts with Thumbnails