ಹ...ಮೇಲ್ ಬರತಾಇದೆ...
ಇನ್ನೇನು...ಅರ್ದ ಪಾಲು ಕೆಳಗೆಡೆ ಬೀಳುತ್ತೆ.
ಓಡು....ಅನ್ನುತ್ತೆ ಮನಸ್ಸು...ಕಾಲುಗಳು ನೆಲಬಿಟ್ಟು ಅಲ್ಲಾಡಲ್ಲ.
ಆ ಓಂದು ಸೆಕೆಂಡು ಸಾವರಿಸಿ ಕೊಂಡು, ವಾಶಿಂಗ್ ಮಶೀನ್ ದಾಟಿ,
ಡೈನಿಂಗ್ ಟೇಬಲ್ ಸುತ್ತು ಹೋಡೆದು ಕೈ ಆದಷ್ಟೂ ಉದ್ದ ಮಾಡಿ
ಸ್ಟೌನ ಕ್ನೋಬ್ ತಿರುಗಿಸಿ ಗ್ಯಾಸ್ ಕಡಿಮೆ ಮಾಡೂ ಅಷ್ಟರಲ್ಲಿ...
ಬೆಳ್ಳಗಿನ ಬಿಸಿ ಹಾಲು...ಪಾತ್ರೆಯಿಂದ ಧಾರೆ ಇಳಿದು...ಕೆನೆಯೆಲ್ಲಾ
ಕೆಳಗಡೆ ಚೆಲ್ಲಾಡಿ ರಾಡಿ...
ಇದು ಪ್ರತಿ ಸಲವೂ, ನಮ್ಮ ಮನೆಯಲ್ಲಿ, ಹಾಲು ಉಕ್ಕೊವಾಗ ನಡೆಯೊ ಪ್ರಹಸನ.
ಯಾವುದೊ ಪುಟ್ಟ ಕರುವಿನ ಹಕ್ಕನ್ನು ನಾವು ದುಡ್ದು ಕೊಟ್ಟು ತಂದು, ಕುಡಿದ್ರೆ ಒಂತರ, ಒಲೆ ಮೇಲೆ ಇಟ್ಟು, ಉಕ್ಕಿಸಿ
ಹಾಳು ಮಾಡುತಿದ್ದೀವಿ ಅನ್ನೊ ಅಪರಾಧಿ ಭಾವನೆ ಬೇರೆ.
ಹಾಗಂತ ಹಾಲು ಕುದಿಸೊಕ್ಕೆ ಪರ್ಯಾಯ ಹುಡುಕಿಲ್ಲ ಅಂತ ಅಲ್ಲ.
ಪಕ್ಕದಲ್ಲೇ ಅಲಾರ್ಮ್ ಗಡಿಯಾರ ಇಟ್ಟು ನೊಡಿ ಆಯಿತು,
ಅಲ್ಲೇ ಒಂದು ಬುಕ್ ಹಿಡ್ಕೊಂಡು ನಿಂತು ಟ್ರೈ ಮಾಡಿ ಆಯಿತು,
ಕೊನೆಗೆ, ಹಾಲಿನ ಕುಕ್ಕರ್ರೂ ತಂದಿದ್ದಾಯಿತು [ಬಹಳ ದಿನ ನನ್ನ ಹೆಂಡತಿಗೆ ಇದು ಸಮ್ಮತಿ ಇರಲಿಲ್ಲ, ಅವಳ ಪ್ರಕಾರ ಅದು ನಮ್ಮ ಎಬಿಲಿಟಿಯನ್ನೇ ಪ್ರೆಶ್ನೆ ಮಾಡುತ್ತಾ ಇತ್ತು.]
ಮೊದಲನೇ ದಿನ ಸೊಂಂಯ್.....ಅಂತ ಶಿಳ್ಳೆ ಹಾಕಿ ಕೂಗಿದಾಗ, ಏನೊ ದೊಡ್ಡ ಪರಿಹಾರ ಕಂಡು ಹಿಡಿದ ಗರ್ವ.
ಬಹಳ ದಿನ ನಡಿಲಿಲ್ಲ...ಆ ಕುಕ್ಕರಿನ ಕುಂಡೆಗೆ ನೀರು ಹಾಕಿ ನೊಡಿಕೊಳ್ಳೊ ತಾಳ್ಮೆ ಕಡಿಮೆ ಆಗಿ...ಅಥವ ಒಮ್ಮೊಮ್ಮೆ...ಅದರ ಒಳಗೆ ಹಾಕಿ ಕುದಿಸುವಷ್ಟು ಹಾಲಿನ ಪ್ರಮಾಣ ಇಲ್ಲದಂತಾಗಿ, ಇವೇ ಮುಂತಾದ ರೀಝನ್ ಗಳಿಂದ ಕುಕ್ಕರಿನ ಐಡಿಯ ಅಷ್ಟು ಸಂಮಜಸ ಅನ್ನಿಸದೆ..ಪುನಃ ಪಾತ್ರೆ ಬಂತು...
ಮತ್ತದೇ...ಓಹ್....ಮೇಲೆ ಬಂತು...ಓಡು.. ಪುರಾಣ...
ಹೇಗೊ..ಓಡಿ...ಹಾಲು ಉಳಿಸಿದರೆ..ಆಹ್...ಅನ್ನೊ ಉದ್ಗಾರದ ಜೊತೆ ಒಂದು ಕಿರುನಗೆ...
ಇಲ್ಲಾ ಅಂದ್ರೆ..."ನಾನು ನಿನಿಗೆ ಹೇಳಿದ್ದೆನಲ್ಲಾ..ನೊಡ್ಕೊಳ್ಳೊಕ್ಕೆ...ಎಲ್ಲಿ ಹೋದೆ.." ಅಂತ ಒಮ್ಮೊಮ್ಮೆ
ಅವಳು ನನಿಗೆ ನಾನು ಅವಳಿಗೆ ಬೈದು ತುಸು ಸಮಾಧಾನ.
ಹಮ್...ಮತ್ತೊಂದು ಭಾನುವಾರ ಶುರು...
No comments:
Post a Comment