ಹಳಸು ಎಮ್ ಎಮ್ ಯಸ್ ಗಳು, ಪೋಲಿ ಜೋಕ್ಸುಗಳು ಕಳುಹಿಸಿದ
ಫೋನಿನಲ್ಲಿ, ಯಾರೋ ಇಂಗ್ಲೀಷಿನಲ್ಲಿ ಟೈಪ್ ಮಾಡಿ ಕಳುಹಿಸಿದ ಕನ್ನಡ ರಾಜ್ಯೊತ್ಸವದ
ಶುಭಾಶಯವನ್ನು ಇನ್ನೊಬ್ಬರಿಗೆ ಫಾರ್ವಡ್ ಮಾಡಿ, "ವರ್ಷದ" ಕನ್ನಡಿಗ ಆಗುವ ಮುನ್ನ
ಒಮ್ಮೆ ಓದು.
ತಿಳಿದಿಲ್ಲದಿರಬಹುದು....ಕೇಳು. ಕನ್ನಡ..ಭಾಷೇ ಅಷ್ಟೇ ಅಲ್ಲ..
ಸಂಸ್ಕೃತಿ. ಇವತ್ತು ಡ್ಯಾಡಿ ಮಮ್ಮಿ ಅಂದ ಮಕ್ಕಳು..ಹದಿನೆಂಟಾದ ತಕ್ಷಣ
ನೀವು ನಮಗೆ ಬ್ಯಾಡಿ ಅನ್ನಬಹುದು.
ಇಂದಿರಾನಗರದ ತುಂಬಾ ರೆಡ್ಡಿ ಗಳು, ಕೊರಮಂಗಲದ ತುಂಬಾ ಸೇಟು ಗಳು
ತುಂಬಿಕೊಂಡ ಬೆಂಗಳೂರು, ಕಪೂರು, ಖನ್ನಗಳಿಗೆ ಕರ್ಪೂರವಾಗುವ ಮುನ್ನ
ಯಾವುದೋ ಅಂಗಡಿಗೆ ಹೋದಾಗ ಕನ್ನಡದಲ್ಲಿ ಒಮ್ಮೆ ಕೇಳು..
"ಏನ್ ಗುರು ಏನಿದೆ? ಕನ್ನಡ ಬರುತ್ತಾ?"
ಯಾವುದ್ಯಾವುದೋ ಮಾತೃಭಾಷೆಯ ಮೇಧಾವಿಗಳು ಕನ್ನಡದಲ್ಲಿ ಬರೆದು ಜ್ಞಾನಪೀಠ
ಪಡೆದು ದೊಡ್ಡವರಾಗಿರುವಾಗ
ನೀನು ಓದುವುದೆಲ್ಲವೂ ಇಂಗ್ಲೀಷೇ ಆದರೆ ಏನು ಚಂದ..ಕಂದ
ತಮಿಳು ಕಂದಮ್ಮಗಳೆಲ್ಲಾ, ಕನ್ನಡ ಚಿತ್ರಗಳನ್ನು ಮಾಡಿ
ಕೋಟಿ ಕೋಟಿ ದುಡ್ಡು ಮಾಡಿದೊಡ್ಡವರಾಗುತ್ತಿರುವಾಗ
ಇದು ನಂದಲ್ಲಾ ಎಂದು ಹೇಳಿ ನಕಲಿ ಹಿಂದಿ ಡಿವೀಡಿ ನೋಡಿ
"ಕ್ಯಾ ಬಾತ್ ಹೈ" ಅಂದರೆ ಏನು ಚಂದ.
ತಾಯಿ ಸುಷ್ಮ ಜೊತೆ ಸೇರಿದ ರೆಡ್ಡಿಗಳು,
ತಾಯಿ ಶಾರದೆಯ ಒಡಲು ಬಗೆದು
ಮನೆ ನಾಯಿಗೂ ಹೆಲಿಕಾಪ್ಟರ್ ಕೊಟ್ಟು ಕುಂತಿರುವಾಗ
ಜಾತಿ ಹೆಸರಲ್ಲಿ ಯಡ್ಡಿಗೋ, ಚಡ್ಡಿಗೊ ಓಟು ಒತ್ತಿ
ಓತಿಕ್ಯಾತನಾದರೆ ಏನು ಚಂದ
ಬೆಂಗಳೂರಿನ್ನ ಬೇರೆಯವರಿಗೆ ಬಿಟ್ಟು,
ಉತ್ತರ ದೃವದಲ್ಲಿ ಸಾಫ್ಟ್ ವೇರ್ ಕುಟ್ಟಿ
ನಾನ್ ರೆಸಿಡೆನ್ಷಿಯಲ್ ಕನ್ನಡಿಗನಾದ ನಿನಗೆ,
ಮಲೆಯಾಳಿಗಳು ನಿನ್ನ ಮನೆ ಮೂಲೆಗೆ ಬಂದು
ಕುಂತಿರುವುದು ಕಾಣದ ಕಂದ...
ರೇಷ್ಮೆ ಸೀರೇನ, ಹೊರದೇಶದವರು ಕಣ್ಣಿಗೊತ್ತಿ ಕೊಂಡು ಹೋಗಿ
ಮೈತುಂಬಾ ಸುತ್ತಿ "ಹೌ ನೈಸ್" ಅಂದು ಸಂಭ್ರಮಿಸುವಾಗ,
ಅವರು ಬಿಚ್ಚಿಟ್ಟ ಬಿಕನಿಯ, ನಮ್ಮ ಕಂದಮ್ಮರಿಗೆ ಉಡಿಸಿ
ಫ್ಯಾಷನ್ ಡಿಸೈನರ್ ಆದ್ರೆ ಏನ್ ಚಂದ
ಯಾವುದೇ ಪೇಪರ್ ತೆಗೆದ್ರೂ, ಎಣ್ಣೆ ಗ್ಲಾಸು ಹಿಡಿದು ನಿಂತ
ದೊಡ್ಡವರ ಚಿತ್ರಗಳು ಕಣ್ಣಿಗೆ ರಾಚಿ
"ನಾನು ಅಜ್ಜಿಮನೆಗೆ ಹೋದ ಕತೆ" ಅನ್ನುವ ಮಕ್ಕಳ ಅಂಕಣಕ್ಕೆ
ಜಾಗವೇ ಇಲ್ಲವಾದಗ, ನೀನೂ ಕಣ್ಮುಚ್ಚಿ ಚಪ್ಪಾಳೆ ಹೊಡೆದರೆ ಏನು ಚಂದ.
ಕನ್ನಡ ರಾಜ್ಯೋತ್ಸವದ ಶುಭಾಶಯಗಳು...:)
ಪಾರಿಜಾತ.
2 comments:
Tumba Channagide.. Munduvaresi!!!
Nice.. my dear .. frnd..
innu swalpa punch irali..
Post a Comment