Wednesday, June 30, 2010

ಗೊತ್ತಿಲ್ಲದ ಊರಿನ ಚಳಿ ಚಂದ

ಬಿನ್ನಹವಿದು ನಿನ್ನಡಿಗಳಲಿರಲಿ


ಎನ್ನಯ ತನು ಮನ ನಿನ್ನ ಅರಿಯಲಿ

ಎನ್ನದು ಎನ್ನುವುದೆಲ್ಲವು ಸಂತತ

ಚೆನ್ನಕೇಶವ ನಿನ್ನೊಳು ನಿಲಲಿ.



ಮೊನ್ನೆ ಪ್ರಾರ್ಥನೆ ಒಂದನ್ನ ಕೇಳ್ತಾಇದ್ದೆ. ನನಿಗೇನು ಬೇಡ ದೇವರೇ, ನಿನ್ನನ್ನ ಅರಿತರೆ ಅಷ್ಟೇ ಸಾಕು ಅನ್ನುವ ಈ ಪದಗಳು ಬಹಳ ಕುಷೀ ಕೊಟ್ಟಿತು.

ಮತ್ತೆ,

ಏನೆಲ್ಲಾ ಎದುರಿಗಿದ್ದರೂ..ಒಮ್ಮೊಮ್ಮೆ ಬೇಸರ..ಅದಕ್ಕೊಂದು ಕಾರಣವಿರುವುದಿಲ್ಲ. ಒಂದು ಹಂತದ ವಯಸ್ಸಾದ ನಂತರ ಎಲ್ಲಾ ವಿಷಯಗಳನ್ನು ಎಲ್ಲರಲ್ಲೂ ಹೇಳಿಕೊಳ್ಳಲು ಮನಸ್ಸಾಗುವುದಿಲ್ಲ. ಹೇಳಿಕೊಳ್ಳುವ ಎಂದೆನಿಸುವ ಯಾರೋ..ಎಲ್ಲಿದ್ದಾರೋ ಗೊತ್ತಿಲ್ಲ.

ಬಹಳ ದಿನಗಳಿಂದ, ಚಿಕ್ಕಮಗಳೂರಿನ ತಾಜ್ ಹೋಟೇಲಿನ ಲಾನ್ ನ ಮೇಲೆ, ಸಂಜೆ ಹೊತ್ತು, ಸಣ್ಣಗಿನ ಚಳಿಯಲ್ಲಿ ಕುಡಿದ ಚಹದ ನೆನಪಾಗುತ್ತಿದೆ.

ಯಾವಗಲಾದರೂ ಹೋಗಬೇಕು. ಗೊತ್ತಿಲ್ಲದ ಊರಿನ ಚಳಿ ಚಂದ. ಭಾವನೆಗಳೆ ಅಪ್ಪುಗೆಗೆ ಅಸರೆ. ಬೆಚ್ಚಗಾಗುವುದು ದೇಹವೋ ಮನಸ್ಸೋ ಗೊತ್ತಿಲ್ಲ.

No comments:

Related Posts with Thumbnails