ಇತ್ತೀಚಿಗೆ ಯಾವುದೇ ಹಿಂದಿ ಅಥವ ಕನ್ನಡ ಸಿನೆಮಾ ನೋಡಿರಲಿಲ್ಲ.ಪ್ರೆಡಿಕ್ಟೆಬಲ್ ಅನ್ನಿಸುವ ಕಥೆಗಳನ್ನು ನೋಡುವುದು ಸ್ವಲ್ಪ ಬೇಜಾರು. ನನಗೆ "ಲೂನಿ ಟೂನ್ಸ್" ನೂಡುವಾಗಿನ ಮಜ ಸಿನಿಮಾ ನೋಡುವಾಗ ಬರುವುದಿಲ್ಲ. ಹೆ ಹೆ ಹೆ.
ಮೊನ್ನೆ ನನ್ನ ಐ ಟಚ್ ನಲ್ಲಿ ತುಂಬಿಕೊಂಡಿದ್ದ ಹಲವು ಚಿತ್ರಗಳಲ್ಲಿ, ನೊಡುವ ಅದೇನು ಮಾಡಿದ್ದಾರೋ ಅಂತ ಅನ್ನಿಸಿ, ನೋಡಲು ಶುರು ಮಾಡಿದ್ದು "ಲವ್ ಆಜ್ ಕಲ್". ಬಹಳಷ್ಟು ಜನ ನೋಡು ಅಂತ ಶಿಫಾರಸ್ಸು ಮಾಡಿದ್ದ ಚಿತ್ರ ಇದು, ನೋಡಲು ಆಗಿರಲಿಲ್ಲ.
ನಾವು ಬಯಸಿದ ಹಾಗೆ ನಾವು ಸ್ವತಂತ್ರರಾಗಿರಬೇಕು ಹಾಗೂ ನಾವು ಬಯಸುವವರು ನಮ್ಮ ಹಿಡಿತದಲ್ಲಿರಬೇಕು ಈ ಎರಡು ಯೋಚನೆಗಳ ನಡುವೆ ಸಂಬಂಧಗಳ ಕಿತ್ತಾಟ ಇದ್ದದ್ದೆ. ಅದನ್ನೇ ಹಿಡಿದು ಚಿತ್ರ ಮಾಡಿದ್ದಾರೆ. ಹಳೇ ತಲೆ ಮಾರಿನ ಪ್ರೇಮಿಗಳಿಗೆ ಈ ಚಿತ್ರ ದೊಡ್ಡ ಶಾಕ್ ಕೊಡಬಹುದು.
ಏನೋ...ನೋಡಕ್ಕೆ ಒಂದು ತರಹ ಮಜ ಬಂತು. ಸಿನಿಮ್ಯಾಟೋ ಗ್ರಫಿ ಮತ್ತು ಪ್ರೋಡಕ್ಷನ್ ವ್ಯಾಲ್ಯು ತುಂಬಾ ಚೆನ್ನಾಗಿದೆ.
ಯಾರೋ ಒಂದು ಒಳ್ಳೇ ಚಿತ್ರ ಸರಣಿ ನನ್ನ ಮೈಲ್ ಗೆ ಕಳಿಸಿದ್ದರು. ತುಂಬಾ ಚೆನ್ನಾಗಿತ್ತು. ಯಾವ ಫೋಟೋಗ್ರಾಫರ್ ತೆಗೆದ ಚಿತ್ರವೋ ಏನೋ ಅದ್ಭುತ. ಒಂದು ಚಿತ್ರ ಸಾವಿರ ಪದ ಗಳಿಗೆ ಸಮ ಅನ್ನುವುದನ್ನು ಕೇಳಿದ್ದೇನೆ. ನನ್ನ ಕೇಳಿದರೆ..ಒಂದು ಚಿತ್ರ ನಾವು ಹೇಳಲಾಗದ ಪದಗಳಿಗೆ ಸ್ವರವಾಗಬೇಕು ಆಗ ಚೆಂದ. ಆ ಗುಣ ಈ ಚಿತ್ರ ಗಳಿಗಿದೆ ಅನ್ನಿಸಿತು.
No comments:
Post a Comment