ಕುಸುರಿಕೆಲಸದ ಒಬ್ಬ ನಿಪುಣ. ಹತ್ತೂರಿಗೂ ಅವನೇ ಉತ್ತಮ. ಮಕ್ಕಳ ಆಟಿಕೆ,ಬಾಗಿಲ ಚಿತ್ತಾರ, ಗಾಡಿಕೆ ಅಲಂಕಾರ ಹೀಗೆ ಅವನ ಕೈಚಳಕವೇ ಬೇಕು. ಅರಕ್ಕೇರದೇ ಮೂರಕ್ಕಿಳಿಯದೇ, ಜನರ ಅಬಿಮಾನದಿಂದ ನಡೆಯುತಿತ್ತು ಜೇವನ. ಹೀಗಿದ್ದಾಗ, ಆ ಊರಿಗೊಬ್ಬ ಬಂದ. ಕುಸುರಿಯವನ ಕಂಡು, " ನಿನ್ನನ್ನೇ ಹುಡುಕುತಿದ್ದೆ ನನಗೆ ಕೆಲಸ ಮಾಡು ಕೈತುಂಬಾ ಹಣ" ಎಂದ. ಕೆಲಸವೂ ಅಂಥಹದ್ದೇನಲ್ಲ, ಹರಿತವಾದ ಚೂರಿಗಳಿಗೆ ಸುಂದರವಾದ ಹಿಡಿ ಮಾಡಿಕೊಡುವುದು. ಇವನ ಅರಸಿ ಬಂದಿದ್ದವನು ಒಬ್ಬ ಹರಿತವಾದ ಚೂರಿಮಾಡುವ ಕಮ್ಮಾರ.
"ಚೂರಿಯ ಸಹವಾಸ ನಮಗೆ ಬೇಡ. ಅಂತಹದ್ದನ್ನು ಸುಂದರ ಮಾಡಿ, ಮಾರಿ ನಾವು ಹೊಟ್ಟೇ ಹೊರೆಯುವ ಅಗತ್ಯವೇನಿಲ್ಲ" ಅಂದಳು ಹೆಂಡತಿ.
ಆತ ಕೇಳಲಿಲ್ಲ. ಕೈಗೆ ಬರಲಿದ್ದ ಹಣದ ಮೇಲೆ ಅವನಿಗೇನೋ ಮೋಹ. ಅಂತೂ ಸುಂದರ ಕುಸುರಿಯ ಚೂರಿ ಬಹಳ ಜನಪ್ರಿಯವಾಯಿತು. ಇವನೂ ಧನಿಕನಾದ.
ಮುಂದೊಂದು ದಿನ, ಎಲ್ಲೋ ಹೊರಟಿದ್ದ ಕುಸುರಿಯವನನ್ನು ಹಣಕ್ಕಾಗಿ ಯಾರೋ ಕೊಂದರು. ಎದೆಯಿಂದ ಹರಿದು ಹೋದ ನೆತ್ತರಿನಾಳದಲ್ಲಿ ಹುದುಗಿದ್ದ ಚೂರಿಯ ಹಿಡಿ ಮಿರಿ ಮಿರಿ ಮಿಂಚುತಿತ್ತು.
ಮೊನ್ನೆ ವಿಶ್ವ ಪರಿಸರ ದಿನ.ನನ್ನ ಮಿತ್ರನೊಬ್ಬ ಪರಿಸರ ಉಳಿಸಲು ಬೆಂಗಳೂರಿನಲ್ಲಿ ನಡೆದ ಸೈಕಲ್ ಓಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ.ಅವನು ಬಹಳ ಮೇಧಾವಿ. ಐ ಟಿ ನಿಪುಣ. ಅವನ ಇತ್ತಿಚಿನ ಪ್ರಾಜೆಕ್ಟ ಮಾಡುತ್ತಿರುವುದು, ಬಿ.ಪೀ ಅಯಿಲ್ ಕಂಪನಿಗೆ.
ಅಮೆರಿಕದ ಮೆಕ್ಸಿಕೋ ತೀರದಲ್ಲಿ ಬೀಪಿ ಕಂಪನಿಯವರಿಂದ ಅಯಲ್ ಸ್ಪಿಲ್ ಆಗಿ ನೂರಾರು ಪಕ್ಷಿ ಗಳು ಹಾರಲಾಗದೇ ಸತ್ತವಂತೆ. ಇವನು ಸೈಕಲ್ ಹೊಡೆದು ಧನ್ಯ.
ನಾನು ಮಾಡುವ ಕೆಲಸಕ್ಕೂ, ನಾನು ನಂಬುವ ಆದರ್ಶಕ್ಕೂ ಒಂದು ಸಂಬಂಧ ಕಲ್ಪಿಸು ದೇವ..
2 comments:
ಬುದ್ಧನು ಆಯುಧಗಳ ತಯಾರಿಕೆಯಂತಹ ಉದ್ಯೋಗಗಳಲ್ಲಿ ತೊಡಗದಿರಲು ಹೇಳಿದ್ದಾನೆ ಅಂತ ಅದೆಲ್ಲೋ ಓದಿದ್ದೇನೆ.
ಬಹಳಷ್ಟು ಸಲ ಕೆಲಸ ಸಿಕ್ಕಿದ ಮೇಲೆ ಆದರ್ಶಗಳು ಬದಲಾಗುತ್ತವೆ!
Post a Comment