Tuesday, June 1, 2010

ಹಾಂ..ಆಗುಂಬೆ..

ಮಳೆ...


ಅಗುಂಬೆ

ಉಳ್ಟ ಹೊಡೆದ ಛತ್ರಿ

ರೈನ್ ಕೋಟು

ಚಾವಣಿ ತುದಿಯ ಹನಿ

ಅಂಗಳ ತುಂಬಿದ ಆಲಿ ಕಲ್ಲು

ಮಂಡಿಯ ವರೆಗೂ ಎತ್ತಿ ಕಟ್ಟಿದ ಸೀರೆ

ಮಳೆಗೆ ಮುಂಚೆ ಕೂಗುವ ಟಿಟ್ಟಿಬ ಹಕ್ಕಿ

ಒಲೆ ಮುಂದಿನ ಬಿಸಿ

ಗೂಡಂಗಡಿಯ ಚಹ

ತುಂಬಿ ಹರಿಯುವ ತೋಡು

ಆಲ್ ಇಂಡಿಯ ರೇಡಿಯೋ, ಮಂಗಳೂರು

ಕಿಟಕಿಗೆ ತಾಡು ಪಾಲು ಮುಚ್ಚಿದ ಕೇರಳದ ದೂರದೂರಿನ ಬಸ್ಸು

ಕೆಂಪು ಸಮುದ್ರ

ಒಣಗದೇ ಉಳಿಯುವ ಬಟ್ಟೆ

ಕಂಬಿಯ ತುದಿವರೆಗೂ ಒಂದೊಂದೇ,ಒಂದೊಂದೇ ಹನಿಸೇರಿ ಕೊನೆಯಲ್ಲಿ ಸುರಿಯುವ ಸೋನೆ.

ಒಮ್ಮೊಮ್ಮೆ ಮಳೆಯ ಸದ್ದಷ್ಟೇ ಪ್ರತಿದ್ವನಿಸುವ ಮನೆ

ಸಂಜೆಯ ಅನಿಸ್ಚಿತತೆ



ಮಳೆ ಮತ್ತು ಮಳೆಯೊಟ್ಟಿಗೆಯೇ ನೆನಪಿಗೆ ಬರುವ ಕೆಲವು ಪದಗಳು. ಬಹಳದಿನವಾಯಿತು ಕ್ಯಾಮರ ಹೆಗಲಿಗೇರಿಸಿ.ಈ ಸಲದ ಮಳೆಗಾಲದಲ್ಲಿ

ಎರಡು ಹನಿ ಹಿಡಿದು ತರಬೇಕು, ಕ್ಯಾಮರಾದ ಬೊಗಸೆಯಲ್ಲಿ. ಎಲ್ಲಿಗೆ ಹೋಗಲಿ...ಹಾಂ..ಆಗುಂಬೆ..

No comments:

Related Posts with Thumbnails