Friday, June 11, 2010

ಸ್ಕೂಲಿಗೆ ಹೊರಡೋ ಹೊತ್ತಿಗೆ ಸರಿಯಾಗಿ ಮಳೆ ಬಂದುಬಿಡೋದು ಮಗಳೆ

ಈಗ ಬರುತ್ತೆ ಆಗ ಬರುತ್ತೆ ಅನ್ನೊ ಮಳೆ...ಎಲ್ಲಿ ಹೋಯಿತೋ ಗೊತ್ತಿಲ್ಲ. "ನಮ್ಮ ಕಾಲದಲೆಲ್ಲಾ ನಾವು ರಜಾ ಮುಗಿಸಿ ಸ್ಕೂಲಿಗೆ ಹೊರಡೋ ಹೊತ್ತಿಗೆ ಸರಿಯಾಗಿ ಮಳೆ ಬಂದುಬಿಡೋದು ಮಗಳೆ" ಅಂತ ಅವಳಿಗೆ ಹೇಳಿದ್ದೇ ಬಂತು. ಮಳೇ ಇಲ್ಲ.

ಪೇಪರಿನಲ್ಲಿ ದಿನವೂ ಮಳೆಯ ಸುದ್ದಿ. ಇವತ್ತು ಕರ್ನಾಟಕಕ್ಕೆ ಪ್ರವೇಶ, ನಾಳೇ ಮಳೇ, ಹೀಗೆ, ಆದ್ರೂ ಮಳೆಯ ದರ್ಶನ ಪೂರ್ಣ ಪ್ರಮಾಣದಲ್ಲಿ ಇನ್ನೂ ಇಲ್ಲ.

ಜೂನ್ ಮೊದಲ ವಾರಕ್ಕೇ ಕಾರು, ಕ್ಯಾಮರ ಹಿಡಿದು ಹೊರಡುವ ಅಂದು ಕೊಂಡಿದ್ದೆ...ನೋಡುವ ಮಳೆ ಬರಲಿ..ಅಮೇಲೆ ಹೋದರೆ ಆಯಿತು.

No comments:

Related Posts with Thumbnails