Friday, December 25, 2009

ಮಠಾದೀಶರೂ...ಮಂತ್ರಿಗಿರಿಯೂ.....ಮರ್ಯಾದೆಯೂ..

ಹಾಗೆ ನೋಡಿದರೆ ಯಾರೂ ತಪ್ಪೇ ಮಾಡಲ್ಲ. ಅವರವರ ಮೂಗಿನ ನೇರಕ್ಕೆ ನಾವು ನೋಡಬೇಕು ಅಷ್ಟೇ.
ಹಾಗಂದು ಕೊಂಡು ಸುಮ್ಮನಿದ್ದು ಬಿಡಬೇಕು. ಇಲ್ಲದೇ ಇದ್ದರೆ, ಸರಿ ತಪ್ಪುಗಳ ಸಂಕೇತಗಳಂತಿರುವ ಎಷ್ಟೋ ಮಂದಿ ಸಮಾಜದ ಎದುರೇ ಮಾಡುವ ಅನಾಚಾರ, ಅದನ್ನು ಸಮರ್ಥಿಸಿಕೊಳ್ಳಲು ಅವರು ಕೊಡುವ ಸಮಜಾಯಿಷಿ ಇದನ್ನೆಲ್ಲಾ ನೋಡಿದರೆ ತಲೆ ಚಿಟ್ಟು ಹಿಡಿದುಬಿಡುತ್ತದೆ.

"ಮಠಾದೀಶರ ಹೆಸರಿನಲ್ಲಿ ಪ್ರಮಾಣವಚನ" ಹೀಗೊಂದು ಹೆಡ್ಲೈನ್ ನೋಡಿದ್ದೇ ಇಷ್ಟೆಲ್ಲಾ ಯೋಚನೆಗೆ ದಾರಿ ಮಾಡಿತು. ಯಾವೋನೋ ಒಬ್ಬ...ಮಾಡಬಾರದ್ದೆಲ್ಲಾ ಮಾಡಿ, ಅದು ಚಿತ್ರರೂಪದಲ್ಲಿ ಊರಿನ ಪತ್ರಿಕೆಗಳ ಶೀಲವನ್ನೇ ಕೆಡಿಸಿ,ಜನಗಳೆಲ್ಲಾ ಇವರ ನಾಟಕಗಳನ್ನು ಸೀರಿಯಲ್ ರೂಪದಲ್ಲಿ ನೋಡಿ..ಚಿ...ತೂ... ಅಂದು ತೆಗಳಿದ್ದರೂ...ಆ ಮನುಷ್ಯ ಇವತ್ತು ಮಂತ್ರಿ ಆಗುತ್ತಾನೆ...ಮತ್ತವನ ಮಂತ್ರಿಗಿರಿಯ ಶಿಫಾರಸಿಗೆ ದೈವ ಸ್ವರೂಪ [ಅವರವರ ಜಾತಿಗೆ]ರಾದ ಮಠಾದೀಶರೇ ನಿಂತಾಗ ಯಾಕೋ ಹೊಟ್ಟೇ ತೋಳಸಿ ಬರುತ್ತೆ.

ಇನ್ನ್ಯಾರೋ ಜಡ್ಜ್ ಅಂತೇ...ಸಿಕ್ಕಾಪಟ್ಟೇ ಕರಪ್ಟ್ ಅಂತೆ..ಯಲ್ಲಾ ಪೇಪರ್ ನಲ್ಲೂ ಬರೀತಾರೆ. ಅವನು ಇನ್ನೂ, ಇನ್ನೊಬ್ಬರಿಗೆ ನ್ಯಾಯ ಹೇಳುತಿದ್ದಾನೆ. ಅವನನ್ನು ಕೆಳಗಿಳಿಸಬಾರುದ ಅಂತ ಅವನ ಪಂಗಡವೋ, ಜಾತಿಯೋ.. ಏನೋ ಒಂದು, ಗಲಾಟೆ ಮಾಡುತ್ತಾರೆ.

ಇಂನ್ಶ್ಟಾಲ್ ಮೆಂಟಿನಲಿ ಸಿಕ್ಕುವ ಎಲ್ಲಾ ಸುಖ[ದ ವಸ್ತುಗಳನ್ನು] ಕೊಂಡುಕೊಂಡು, ಅದರಲ್ಲೇ ಪರಮ ಸುಖವನ್ನು ಕಂಡು, ಎದುರು ಮಾತಾಡಿದರೆ ಬಾಸ್ ಎಲ್ಲಿ ಕೆಲಸದಿಂದ ತೆಗೆದು ಹಾಕುತ್ತಾನೋ, ಸಂಬಳವಿಲ್ಲದೆ ತಿಂಗಳ ಸಾಲತೀರಿಸುವುದು ಹೇಗೋ? ಎಂದು, ನಮ್ಮಲ್ಲಿ ಎಲ್ಲೋ ಇನ್ನೂ ಹುದುಗಿರುವ ಒಬ್ಬ ಸಣ್ಣಕ್ರಾಂತಿಕಾರಿಯನ್ನು ಅಲ್ಲೇ ಕೊಂದು. ಸಾಮಾಜದಲ್ಲಿ ಯಾರು ಏನೇ ಮಾಡಿಕೊಳ್ಳಲಿ, ನನಿಗೇನು, ಬೆಳಿಗ್ಗೆ ನೀರು ಬಂದ್ರೆ ಆಯಿತು, ಮ್ಯಾಚ್ ನೋಡಕ್ಕೆ ಕರೆಂಟಿದ್ರೆ ಆಯಿತು ಅಂತ ಬದುಕೋದು ಎಷ್ಟು ದಿನ ಅನ್ನಿಸುತ್ತೆ. ಸಾಕು ರೀ...ಇನ್ನು ಮೇಲಾದ್ರು ಸಣ್ಣ ಸಣ್ಣ ಕೋಪಬರಬೇಕು ಮನುಷ್ಯನಿಗೆ ಇಂತಹ ವಿಷ್ಯಗಳ ಮೇಲೆ. ಅದನ್ನು ಅಟ್ಲೀಷ್ಟ್ ಚುನಾವಣೆ ದಿನ, ಎಲ್ಲೋ ಇಸ್ಪೀಟ್ ಆಡಕ್ಕೆ ಕೂರದೆ, ಒಂದು ಒಳ್ಳೆಯವನಿಗೆ ಓಟ್ ಮಾಡಿ ಸಮಾಧಾನ ಮಾಡಿಕೊಳ್ಳಬೇಕು. ಆದ್ರೆ ಏನ್ ಮಾಡೋದು...ಇಂಥಹ ಹಲ್ಕ ಕೆಲ್ಸ ಮಾಡಿದವರೆಲ್ಲಾ ಯಾವುದೋ ಜಾತಿಯವರೋ, ಕುಲದವರೋ ಆಗೇ ಇರ್ತಾರೆ...ಮತ್ತೇ ಜಾತಿ ಹೆಸರಲ್ಲಿ ಅವರ ಕಡೆಯವರು ಇವರನ್ನೇ ಪುನಃ ಆರಿಸಿ ತಮ್ಮ ಇಲ್ಲದ ಐಡೆಂಟಿಟಿ ಅನ್ನು ಕಂಡ್ಕೋತಾರೆ.

ಹಮ್...ಹೊಸವರ್ಷ ಶುರು ಮಾಡಣ ಅಂದ್ರೆ...ಒಂದು ಕಿರಿ ಕಿರಿ ಮನದ ಮೂಲೆಯಲ್ಲಿ ಎಲ್ಲೋ..

No comments:

Related Posts with Thumbnails