Monday, December 21, 2009

ಊರಿನ ಮುಂಜಾನೆ.

ಈ ತಿಂಗಳಿನಲ್ಲಿ ಊರಲ್ಲಿ ಬೆಳ್ಳಂಬೆಳಿಗ್ಗೆ ಮಾಯಲೋಕ. ಸಣ್ಣಗೆ ಮಂಜು, ದ್ವನಿ ಕಂಡರೂ, ಹೊಗೆಯಮರೆಯಲ್ಲಿ ತಾನು ಕಾಣಿಸಿಕೊಳ್ಳದ ಪುಟ್ಟ ಹಕ್ಕಿ. ಕತ್ತಲೊಡನೆ ಜಗಳಾಡುವ ಸೂರ್ಯ, ಕೈಲಾಗದ ಮುದುಕ,ಉದ್ದುದ್ದದ ಕೈಕೋಲುನ್ನು ಮುಂದಿಟ್ಟು ನಡೆಯುವಂತೆ, ಬೆಳಕಿನ ಕೋಲುಗಳನ್ನು ಮುಂದಿಟ್ಟು ಭುವಿಗೆ ಅಡಿಯಿಡುವ ಬೆಳಗಿನ ಕಾರ್ಯಕ್ರಮ ನೋಡಲು ಚೆಂದ.ಹೋದ ಸಲ ಹೋಗಿದ್ದಾಗ ತೆಗೆದ ಚಿತ್ರ. ಹಂಚಿಕೊಳ್ಳುತಿದ್ದೇನೆ.

No comments:

Related Posts with Thumbnails