ಇನ್ನೇನ್...ಎರಡುದಿನ ಎಡವಿ ಬಿದ್ದರೆ, ವೆವಹಾರಿಕದ ಹೊಸ ವರ್ಷ. ಎಲ್ಲಾ ಕಡೆ, ಏನೋ ಒಂದು ಮಂದಗತಿ.
ಹೊಸವರ್ಷ ಬರುವವರೆಗೆ ಏನೂ ನಡೆಯದಿಲ್ಲ. ಒಂದು ಅಘೊಷಿತ ರಜೆ.
ಹೊಸವರ್ಷಕ್ಕೆ ಇಗಾಗಲೇ ಹೊಸ ಎಸ್ ಎಮ್ ಎಸ್ ಗಳ ತಯಾರಿ ನಡೆದಿರಬೇಕು. ಕೆಲವರು, "ಅದೆಲ್ಲ ಯಾಕೆ, ಬಂದ ಎಸ್ ಎಮ್ ಎಸ್ ನಲ್ಲಿ ಚೆನ್ನಾಗಿರೋದನ್ನ ಫಾರ್ವಡ್ ಮಾಡಿದ್ರಾಯಿತು" ಅಂತ ಸುಮ್ಮನಿರಬೇಕು.
ಇನ್ನು ಹೊಸವರ್ಷಕ್ಕೆ ಮಾಡಲೇಬೇಕಾದ ಕೆಲಸಗಳ, ಅಥವ ಮುಟ್ಟಲೇಬೇಕಾದ ಗುರಿಗಳ ಪಟ್ಟಿಮಾಡುವುದು ಒಂದು ವಾಡಿಕೆ. ನಿವ್ ಇಯರ್ ರೆಸೆಲ್ಯುಷನ್, ಗೊತ್ತಲ್ಲ? ಅದನ್ನೆ ಒಂದು ಪಟ್ಟಿ ಮಾಡುವ ಅಂತ ಕುಳಿತೆ. ಆಗಲೇ ಅನ್ನಿಸಿದ್ದು,ಅರೇ..ಹೋದ ವರ್ಷದ ಪಟ್ಟಿ ಏನಾಯಿತು? ಏನೇನೋ ಅಂದು ಕೊಂಡಿದ್ದೆ ಯಾಕೆ ಮಾಡಕ್ಕೆ ಆಗಲಿಲ್ಲ? ಅಂತ.
ಅದಕ್ಕೆ, ಹೋದ ವರ್ಷ ನನ್ನಿಂದ ಆಗದೇ ಉಳಿದ ಕೆಲಸಗಳ ಬಗ್ಗೆ ಒಂದು ಪಟ್ಟಿ ಮಾಡುವ ಅಂತ ಶುರು ಮಾಡಿದೆ.
೧. ಒಂದು ಸೂರ್ಯ್ಯೊದಯ ಮತ್ತು ಅದೇ ದಿನದ ಸೂರ್ಯಸ್ತ ನೋಡಲಿಕ್ಕಾಗಲಿಲ್ಲ.
೨. ಒಂದು ಮರ ನೆಡುವ ಉದ್ದೇಶ ಪೂರ್ತಿಅಗಲಿಲ್ಲ.
೩. ಎಷ್ಟೋ ವರ್ಷಗಳಿಂದ ಮೌನವೇ ಸೇತುವೆಯಾಗಿರುವ, ಹಳೆಯಗೆಳೆಯರಿಗೆ ಫೊನ್ ಮಾಡಲು ಆಗಲೇ ಇಲ್ಲ.
ಅಥವ ಅದಕ್ಕೆ ಬೇಕಾದ ಸಂಕೋಚವಿಲ್ಲದ ಧೈರ್ಯ ಒಟ್ಟುಗೂಡಿಸಲಾಗಲಿಲ್ಲ.
೪. ನನ್ನ ಅಕ್ವೇರಿಮ್ ಅನ್ನು ದೊಡ್ಡದು ಮಾಡಿ ಇನ್ನಷ್ಟು ಮಿನು ಬಿಡಬೇಕು..ಅಗಲಿಲ್ಲ.
೫. ಸಂಸ್ಕೃತ ಕಲಿಯಲಿಕ್ಕೆ ಹೊರಟಿದ್ದೆ.. ಅಂಚೆ ಮೂಲಕ ಮೊದಲ ಬಾಗ ಮುಗಿಸಿದೆ ಕೂಡ. ಆದರೇ ಮುಂದಿನ ಅಬ್ಯಾಸಕ್ಕೆ ಎದುರು ಕುಳಿತು ಹೇಳುವ ಗುರು ಬೇಕು. ಅಂತಹವರನ್ನು ಹುಡುಕಲಾಗಲಿಲ್ಲ.
೮. ಎಷ್ಟು ಜನ ಹೊಸಬರನ್ನು ಭೇಟಿಮಾಡಿದೆ ಅಂತ ಲೆಕ್ಕ ಹಾಕಿದರೆ, ಹೋದ ವರ್ಷದಲ್ಲಿ ಅಂತಹ ದೊಡ್ಡ ಲಿಷ್ಟ್ ಸಿಕ್ಕುವುದಿಲ್ಲ. ಈ ವರ್ಷ ಹೆಚ್ಚಿಸಬೇಕು.
೭. ಹೆಚ್ಚು ನಾಟಕಗಳನ್ನು ನೋಡಲಾಗಲಿಲ್ಲ. ನಾಟಕದಲ್ಲಿ ಅಭಿನಯಿಸಬೇಕೆಂಬ ಆಸೆಗೆ ಇನ್ನು ಚಾಲನೆ ಕೊಟ್ಟಿಲ್ಲ.
೮. ಒಂದು ಸಂಜೆ ರೈಲ್ವೆ ಸ್ಟೇಷನ್ನಿಗೆ ಹೋಗಿ ಯಾವುದೋ ದೂರದೂರಿಗೆ, ಟ್ರೈನ್ ಹಿಡಿದು, ಒಬ್ಬನೇ, ಒಂದು ವಾರ ಹೋಗ ಬೇಕೆಂದಿದ್ದೆ, ಹೋಗಲಿಲ್ಲ.
೯. ಸಮುದ್ರದಲ್ಲಿ ಮೀನು ಹಿಡಿಯುವ ದೋಣಿಯೊಂದರಲ್ಲಿ ಹೋಗಿ, ಅವರೊಂದಿಗಿದ್ದು ಅವರ ಜೀವನ ನೋಡಿ ಬರಬೇಕು ಅಂದು ಕೊಂಡಿದ್ದೆ. ಅಗಲಿಲ್ಲ.
೧೦. ಆಗದೇ ಇರೋ ಕೆಲಸದ ಬಗ್ಗೆ ಹೆಚ್ಚು ಚಿಂಸದೆ, ಮುಂದೆ ಮಾಡಬೇಕಾದ ಕೆಲಸಗಳ ಕಡೇ ಗಮನ ಕೊಡಬೇಕು ಅಂತ ತೀರ್ಮಾನ ಮಾಡಿದ್ದೆ, ನನಿಗನ್ನಿಸುತ್ತೆ ಇನ್ನೂ ಅಗಲಿಲ್ಲ.
:)
ನಿಮ್ಮದೂ ಒಂದು ಪಟ್ಟಿ ಇದೆಯಾ? ಹಂಚಿ ಕೊಳ್ಳಿ :)
No comments:
Post a Comment