Sunday, December 20, 2009
ಕಂಗಾಲ್ ಬೆಲ್ಸ್,ಕಂಗಾಲ್ ಬೆಲ್ಸ್, ಕಂಗಾಲ್ ಆಲ್ ದ ವೇ....
ಬೆಳಿಗ್ಗೆ ಎದ್ದು ಪತ್ರಿಕೆ ತೆಗೆಯೋದಕ್ಕೆ ಬಹಳ ಬೇಜಾರಾಗುತ್ತೆ. "ಕರಾಗ್ರೇ ವಸತೇ..." ಅಂತ ಕಣ್ಣು ತಿಕ್ಕಿ ನೋಡಿಕೊಂಡಾಗಲೇ ಅನುಮಾನ ಆಗುತ್ತೆ ಯಾರೋ ಕಿವಿಮೇಲೆ ಹೂವ ಇಡಕ್ಕೆ ಪ್ರಯತ್ನ ಮಾಡ್ತಾಇದ್ದಾರೆ ಅಂತ.ಪೇಪರ್ ನೋಡಿದಾಗ ಆ ವಿಷ್ಯ ಕನ್ಫರ್ಮ್. ಯಾಕೆ ಅಂತೀರ? ಈ ಪೇಪರ್ ನವರು ನಮ್ಮನ್ನ ಎಷ್ಟು ಚೆನ್ನಾಗಿ ಅವರ ಪ್ರಯೋಗದ ವಸ್ತು ಮಾಡಿಕೊಳ್ತಾರೆ ರೀ ಅಬ್ಬಾ! ಅವರ ಇತ್ತಿಚಿನ ಮುಖಪುಟಗಳೇ ಅವರ ಉದ್ದೇಶ ಕ್ಲಿಯರ್ ಮಾಡುತ್ತೆ. ಎಲ್ಲಿ ಎಲ್ಲಿ ಅಡ್ವರ್ಟೈಸಿಂಗ್ ಗೆ ಪ್ರಮುಖ ಜಾಗ ಬೇಕೋ ಅಲ್ಲೆಲ್ಲಾ ಅಷ್ಟಷ್ಟು ಜಾಗ ಜಾಹೀರಾತಿಗೆ ಬಿಟ್ಟು, ಮಿಕ್ಕ ಇಕ್ಕೆಲಗಳಲ್ಲಿ ಇಂತಿಷ್ಟು ಅಂತ ಸುದ್ದಿ. ಇನ್ನು, ಸುದ್ದಿಯೂ ಕೂಡ ಹೇಗೆ ಅಂದರೆ, ಇವುರು ಆನೆಗೆ ಮುಂದಿರೋದೇ ಬಾಲ ಅಂತ ಎಲ್ಲಾ ವಿವರಗಳೊಂದಿಗೆ ವಾದ ಮಂಡಿಸಿದರೇ... ಹುಟ್ಟಿದಾಗಿನಿಂದ "ಆನೆ ಬಂತೊಂದು ಆನೆ" ಹೇಳಿದ ನಮಗೇ ಕಫ್ಯುಶನ್.ಅವತ್ತಿನ ದಿನ ಕಬ್ಬನ್ ಪಾರ್ಕಿನಲ್ಲಿ ಎರಡು ಪಂಗಡ. ಆನೇಗೆ ಮುಂದಿರೋದೆ ಬಾಲ ಅಂತ ಒಬ್ಬರು...ಇಲ್ಲ ಹಿಂದಿರೋದು ಸೊಂಡಲು ಅಂತ ಇನ್ನೊಬ್ಬರು. ಒಬ್ಬರನ್ನು ಒಬ್ಬರು ಎಡಪಂತೀಯರು ಅಂತ ಹೀಯಾಳಿಸಿ..ಹಿಂದೆ ಮುಂದೆ ಗೊತ್ತಿಲ್ಲದೆ ಜಗಳ.ಇವತ್ತು ಮಾದ್ಯಮದವರಿಗೆ, ಸುದ್ದಿ ಅಂದರೆ...ಇರುವ ಎಲ್ಲಾ ಕಮ್ಯುನಿಕೇಷನ್ ಜಾಕಚಕ್ಯತೆ ಗಳನ್ನೆಲ್ಲಾಉಪಯೋಗಿಸಿ, ಅವರಿಗೆ ಸರಿ ಅನ್ನಿಸಿದ್ದನ್ನ, ಅವತ್ತಿನ ಹೊಸತು ಅಂತ, ಜಾಹೀರಾತಿನ ಲಾಭ ನಷ್ಟದ ಮದ್ಯೆ ಬರೆದ ಸಣ್ಣ ಲೆಕ್ಕಾ ಚಾರ. [ಟೀವಿ ನ್ಯುಸೂ ಅಷ್ಟೆಯಾ] ದೀಪಾವಳಿ, ಕ್ರಿಸ್ಮಸ್ ಬಂತೆಂದರೆ ಪೇಪರಿಗೆ ವೈಟ್ ಮ್ಯಾನೇಜ್ ಮೆಂಟ್ ಪ್ರಾಬಲಮ್. ದಿನವೊ.."ಅರೇ ಇದೇನು ಸಾಪ್ತಾಹಿಕನೂ ಇಲ್ಲ್ವ, ಇಷ್ಟು ಸಣ್ಣಗಿದೆಯಲ್ಲಾ?" ಅಂತ ತಿರುಗಿಸಿ ಮರುಗಿಸಿ ನೋಡುವಂತೆ ಮಾಡುವ ದಿನ ಪತ್ರಿಕೆ, ಹಬ್ಬ ಅಥವ ವರ್ಷಾಂತ್ಯ ಬಂತೆದ್ರೆ, ಅತಿಯಾಗಿ ತಿಂದು ತಕ್ಷಣಕ್ಕೆ ದಡೂತಿಯಾದವರಂತೆ ದಪ್ಪಗಾಗಿ ಗಾಬರಿ ಮಾಡುತ್ತದೆ. ಮುಖಪುಟದಿಂದಲೇ "ಡಿಸ್ಕೌಂಟುಗಳ" ಮಹಾಪೋರ...ಸುಮಾರು ಒಂದು ವಾರದಿಂದ ಕ್ರಿಸ್ಮಸ್ ಸಂಬಂದಿ ಜಾಹೀರಾತನ್ನು ನೋಡಿದ ನನ್ನ ಮಗಳಿಗೆ ಇಷ್ಟೆಲ್ಲಾ ತೋರಿಸುವಾಗ ಇದು ನೋಡಲೇ ಬೇಕಾದ, ಹೋಗಲೇ ಬೇಕಾದ ಅಥವ ಕೊಂಡುಕೊಳ್ಳಲೇ ಬೇಕಾದ ಒಂದು ಕಾರ್ಯಕ್ರಮ ಇರಬೇಕು ಎಂದೆನಿಸಿ, "ಅಪ್ಪ ಅಷ್ಟೆಲ್ಲಾ ಶಾಪಿಂಗ್ ನಡಿತಾ ಇದೆ ಯಾವುದಕ್ಕೊ ಹೋಗೋದೇ ಇಲ್ಲವ?" ಅಂತ ಮುಖ ಚಿಕ್ಕದು ಮಾಡಿ ಕೇಳಿದಳು. ನಮಿಗೆ ಬೇಕಿದ್ದರೇ ಮಾತ್ರ,ಬೇಕಾದಷ್ಟು ಮಾತ್ರ, ಹೋಗಿ ತರುವಾ ಮಗಳೇ..ಅವರು ಅಂದ ಚೆಂದವಾಗಿ ಹಾಕಿದ್ದಾರೆ ಅಂತ ತರುವುದಲ್ಲ ಅಂತ ತಿಳಿಹೇಳುವವರೆಗೆ ಸುಸ್ತು. ಅಂತು, ದುಡ್ಡು ಕರ್ಚಾಗುತ್ತೆ ಅಂತ ಅಪ್ಪ ಏನೇನೋ ಹೇಳ್ತಾನೆ ಅಂತ ನನ್ನ ಮಗಳು ಅಂದು ಕೊಂಡಿದ್ದರೂ ಅಂದು ಕೊಂಡಿದ್ದರಬಹುದು. ಹಾಗೆ ಮಾಡುತ್ತವೆ ಇವತ್ತಿನ ಪೇಪರ್ ಗಳು.
ಸ್ಯಾಂಟಾ ಕ್ಲಾಸ್ ನ ಎಷ್ಟು ಚಿತ್ರಗಳು ಪೇಪರಿನಲ್ಲಿ ಬರುತ್ತವೆಂದರೆ..ಈತ ನಮ್ಮ ಹನುಮಂತನ ಚಿಕ್ಕಪ್ಪನೇನೋ ಅನ್ನುವಷ್ಟು ಇಲ್ಲಿಯ ಸಂಸ್ಕೃತಿಗೆ ಹತ್ತಿರ ಅನ್ನಿಸ ಹತ್ತುತ್ತಾನೆ. ನನ್ನ ಮಗಳು ಆಗಲೇ ಅವನಿಗೆ ಕಾರ್ಡ್ ಕಳಿಸಲು ಶುರು ಮಾಡಿದ್ದಾಳೆ. ಎಚ್ ಬಿ ಓ...ಸ್ಟಾರ್ ಮೂವೀಸ್ ಎಲ್ಲದರಲ್ಲೊ ಕ್ರಿಸ್ಮಸ್ ಚಲನ ಚಿತ್ರಗಳೇ...ಮನಸ್ಸಿ ಇನ್ನೇನಾಗುತ್ತೆ ಹೇಳಿ..ಕೇಕ್ ತಿನ್ನದೇ ಇದ್ದರೆ...ಕರ್ಮ ಸುತ್ತುಕೊಳ್ಳುತ್ತೇ ಅನ್ನೊ ಅಷ್ಟು ಮಟ್ಟಿಗೆ ಮನಸ್ಸಿಗೆ ಮೊಳೆ.ಅಲ್ಲಿ ಅವರಿಗೆ ಇದು ಜಿಂಗಲ್ ಬೆಲ್ಸ್...ಇರಬಹುದು...ಇಲ್ಲಿಯ ಸಾಂಸ್ಕೃತಿಕ ಬುಡ ಹಿಡಿದವರಿಗೆ ಕಂಗಾಲ್ ಬೆಲ್ಸ್
Subscribe to:
Post Comments (Atom)
1 comment:
nice article .
agree actually the way they decorate mall for christmas and new years has almost confirmed the newer generation including my daugther that jan 1st is new year day and no more ugadi!.
hmm i always wonder why the same amount lightnening effect for Deepavali!
Post a Comment