Wednesday, November 18, 2009

ಹಾರುವ ಶಕ್ತಿ ಕಳಕೊಂಡ ಹಕ್ಕಿ...ಯಾವಾಗ ಮಣ್ಣಾಯಿತು?


ನನಿಗೆ ತಕ್ಷಣಕ್ಕೆ ಡಿಪ್ರೆಸ್ ಯಾವ ವಿಷಯವೂ ಮಾಡುವುದಿಲ್ಲ. ಯಾವುದೇ ವಿಷಯ ಇದ್ರು, ತಕ್ಕ ಮಟ್ಟಕ್ಕೆ ಅದನ್ನ "ಇದು ಯಾಕೆ ಹೀಗೆ" ಅಂತ ಸ್ವಲ್ಪ ಯೋಚಿಸಿ. "ಓ..ಇದು ಹೀಗೆ ಇರಬೇಕು" ಅಂತ ನನ್ನದೇ ಒಂದು ಅಭಿಪ್ರಾಯಕ್ಕೆ ಬಂದು...ಮುಂದಿನ ದಾರಿ ನೋಡಿಕೊಳ್ಳೊ ಒಂದು ಮನಸ್ಸು ನಂದು. ಪಿ ಯು ಸಿ ಫೇಲ್ ಆದಗಲೂ [ಯಾಕೆ ಆದೆ ಅನ್ನೋದೇ ಒಂದು ದೊಡ್ಡ ಕತೆ], ಅಪ್ಪ ಅಕಾಲಕ್ಕೆ ಹೋದಾಗಲೂ, ಯಾರೋ ಒಂದು ದೊಡ್ಡ ಮೊತ್ತದ ಹಣಕ್ಕೆ ನನಗೆ ಮೋಸ ಮಾಡಿದಾಗಲೂ...ಪುನಃ..."ಇದು ಯಾಕೆ ಹೀಗೆ?" ಎಂದು ಒಮ್ಮೆ ಅಂದು ಮುಂದೆ ಹೋಗೋದು ಸಹಜ.
ಆದರೆ....
ಎಲ್ಲೋ ನಡೆದು ಹೋಗೋವಾಗ...ಅಥವ ಜೋರು ಮಳೆಯಲ್ಲಿ ಬೈಕು ರಸ್ತೆ ಬದಿಯಲ್ಲಿ ನಿಲ್ಲಿಸಿ, ಯಾವುದೋ ಸಣ್ಣ ಅಂಗಡಿಯ ಸಣ್ಣ ಬಾಗಿಲಿನಲ್ಲಿ, ಕೈ ಕಾಲು ಸಣ್ಣಕೆ ಮುದುರಿ ಮಳೆ ನಿಲ್ಲುವ ಸೂಚನೆಗೆ, ಆಕಾಶ ನೋಡುವಾಗ... ಕಾಲ ಬಳಿ...ಮೈಯಲ್ಲಾ ಮಳೆಯಲ್ಲಿ ತೋಯ್ದು ಸಣ್ಣದೇಹದ ನಾಯಿಮರಿ ಬೆಚ್ಚಗಿನ ಮೂಲೆಯನ್ನು ಹುಡುಕುವುದನ್ನು ನೋಡಿದಾಗ ಮನಸ್ಸು ಕದಡಿ ಹೋಗುತ್ತದೆ.
ಏನು ಮಾಡುವುದೂ ಅನ್ನುವುದೇ ತೋಚದೆ....ಬಹಳ ಹಿಂಸೆ ಆಗುತ್ತದೆ. ಒಮ್ಮೂಮ್ಮೆ...ಈ ಮರಿಯನ್ನು ಮನೆಗೆ ಕೊಂಡೊಯ್ದರೆ? ಅನ್ನಿಸುತ್ತದಾದರೂ...ಅದು ಪ್ರಾಕ್ಟಿಕಲ್ ಆದ ಯೋಚನೆ ಆಲ್ಲ ಅನ್ನಿಸಿ ಬೇಜಾರಗುತ್ತದೆ. ಒಳಗಿನ ತಪ್ಪಿತಸ್ಥ ಭಾವನೆಯನ್ನು ಮರೆಮಾಚಲು ಆಚೆ ಈಚಿ ನೋಡಿದರೂ..ಕಾಲಬಳಿಯ ನಾಯಿ ಮರಿ ಮನಸ್ಸಿನ ಪರದೆಯಲ್ಲಿ ಅಳಿಸುವುದಿಲ್ಲ.
ಇದರ ನಂತರ ನನಿಗೆ ಬಹಳ ಮುಜುಗರ ತರುವ ಇನ್ನೊಂದು ವಿಷಯ ಅಂದರೆ...ಯಾವುದೋ ದೇವಸ್ಥಾನವೋ..ಪ್ರವಾಸಿ ಸ್ಥಳವೋ ಮುಂತಾದ ಕಡೆ ಹೋದಾಗ...ಕಂಡು ಬರುವ ವೃದ್ಧ ಬಿಕ್ಷುಕರು. ಹಾರುವ ಶಕ್ತಿ ಕಳಕೊಂಡ ಹಕ್ಕಿ...ಯಾವಾಗ ಮಣ್ಣಾಯಿತು? ಅನ್ನುವ ಪ್ರಶ್ನೆಗೆ ಹೇಗೆ ಉತ್ತರ ತಕ್ಷಣ ದೊರೆಯುವುದಿಲ್ಲವೋ..ಹಾಗೆ...ಇವರು..ಯಾವಗ ಮೈ ಯಲ್ಲಿನ ತೇಜಸ್ಸು ಕಳೆದು ಕೊಂಡು ಬೀದಿಗೆ ಬಂದರು?..ನಾನು ಇವತ್ತು ಇವರಿಗೆ ಹಣ ಕೊಡದೇ ಹೋದರೆ..ನಾಳೆ ಇವರು ಹಸಿವಿನಿಂದಲೇ ಸತ್ತುಹೋಗಬಹುದಾ? ಹೀಗೆ ಏನೇನೋ ಮನಸ್ಸಿಗೆ ಕಾಡಿ ಸ್ವಲ್ಪ ಹೋತ್ತು..ತುದಿಕಾಲು ಏಡವಿದಾಗ ಅನುಭವಿಸುವ ನೋವಿನಂತಹ ಅನುಭವ.
ಪ್ರತಿ ಮಳೆಯ ರಾತ್ರಿಯಲ್ಲಿ..ಗುಡುಗು ಕೇಳಿಸಿವಾಗ...ಮೈಗೆ ಚಳಿ ಅನ್ನಿಸೆ...ಬೆಚ್ಚಗೆ ಹೋದ್ದು ಕೊಳ್ಳುವಾಗ..ಯೋಚನೆಯ ಕೊನೆಯಲ್ಲಿ ಒಂದು ನಾಯಿ ಮರಿ ಮತ್ತು ಒಬ್ಬ ಬೆನ್ನು ಗೂನಾದ ಮುದುಕ ಸುಳಿಯದೇ ಇರುವುದಿಲ್ಲ......

2 comments:

ಗೌತಮ್ ಹೆಗಡೆ said...

ನಿಮ್ಮ ಬರಹಗಳೆಲ್ಲ ಚೆನ್ನಾಗಿವೆ..:)

ವಿ.ರಾ.ಹೆ. said...

ನಿಜ. ಇದು ಮನಸು ಕದಡುವ ವಿಷಯ ಹಾಗೂ ಬರಹ.

Related Posts with Thumbnails