ಹಂಚಿಕೊಳ್ಳಕ್ಕಾಗದೇ ಇರೊ ಸಂತೋಷ.....ನಿಜವಾಗಲೂ ಸಂತೋಷನಾ? ಗೊತ್ತಿಲ್ಲ...ಮೊನ್ನೆ ಒಬ್ಬನೇ ಎಲ್ಲೋ ಹೋಗ್ತಾಇದ್ದೆ.... ನನ್ನ ಐ-ಪಾಡ್ ಟಚ್ ನಲ್ಲಿ ಒಂದು ಸುಂದರವಾದ ಹಳೇ ಗಜಲು. ಎರಡು ಕಿವಿಗಳ ಮದ್ಯ ಹಲವು ಕನಸುಗಳ ಚಿತ್ತಾರ ಸ್ವರಗಳಲ್ಲಿ ಬಿಡಿಸುತ್ತಿದ್ದ ಕ್ಷಣಗಳನ್ನ ಯಾರಲ್ಲಾದ್ರು ಹಂಚಿಕೊಳ್ಳಾಣ ಅಂದ್ರೆ...ಯಾರೂ ಇಲ್ಲ. ನನ್ನ ಮನಸ್ಸಿನಲ್ಲಿ ಏನ್ ನಡಿತಾ ಇದೆ ಅಂತ ಯಾರಿಗೇನ್ ಗೊತ್ತಾಗುತ್ತೆ. ಒಂದು ವಿಚಿತ್ರ ಅನುಭವ...ಹಂಚಿಕೊಳ್ಳಕಾಗದೇ ಇರೊ ಎಷ್ಟೋ ಸಂತೋಷಗಳು ಒಳಗಿದ್ದರೇನಂತೆ...ಕಿವಿಗಳ ಮದ್ಯ ನಮಿಗಷ್ಟೇ ಕೇಳೋ ಸಂಗೀತದಂತೆ.
.............................................................................
ಓಶೊ ಬಗ್ಗೆ ಓದುತಾಇದ್ದೆ. ಪ್ರೀತಿಬಗ್ಗೆ ಬಹಳ ಚೆನ್ನಾಗಿ ಹೇಳ್ತಾನೆ ಅವನು."ನೀವು ಪ್ರೀತಿನ ಮನಸ್ಸಿನ ಮುಖಾಂತರ ಹುಡುಕ್ತಾ ಇದ್ರೆ...ನೀವು ತಪ್ಪು ಮಾಡ್ತಾ ಇದ್ದೀರಿ. "ಇವ್ ಆರ್ ನಾಟ್ ಯುಸಿಂಗ್ ಅ ರೈಟ್ ಇನ್ಸ್ ಟ್ರುಮೆಂಟ್" ಪ್ರೀತಿಗೊ ಮನಸ್ಸಿಗೂ ಸಂಬಂಧವೇ ಇಲ್ಲ". ಹೌದಲ್ವ ಅನ್ನಿಸಿತು..:)
..............................................................................
ಒಂದು ಸುಂದರ ಗಝಲ್"ಮಸೀದಿಗೆ ಹೋಗುವ ದಾರಿಯಲ್ಲಿ....ಎರಡು ನಿಮಿಷ ನಿಂತು...ಒಂದು ಪುಟ್ಟ ಮಗುವನ್ನು ನಗಿಸಿ ಮುಂದೆ ಹೋಗು"
..............................................................................
ಯಾವುದೋ ಕೆಲಸಕ್ಕೆ ಪೋಸ್ಟ್ ಆಫೀಸಿಗೆ ಹೋಗಿದ್ದೆ. ಉದ್ದಕೆ ಇದ್ದ ದರ ಪಟ್ಟಿಯಲ್ಲಿ ಮೊದಲ ಹೆಸರು "ದೇಶೀಯ ಅಂಚೆ[inland letter] - ರು.೦.೫೦.[ಐವತ್ತು ಪೈಸೆ]". ಮನಸ್ಸು ಮುಗುಳ್ನಗ್ತು. ಕಾಲು ಗಳು ಎರಡಡಿ ಚಿಕ್ಕದಾಂತೆನಿಸಿ...ನೆನಪು ಬಾಲ್ಯಕಂಡಿತು. ಯಾವತ್ತಾದರು...ಒಂದು ಐವತ್ತು ಪೋಸ್ಟ್ ಕಾರ್ಡ್ ತಂದು ಯಾವುದೋ ಒಂದು ಅಂಚೆ ವಿಳಾಸ ಬರೆದು..ಕೆಂಪು ಡಬ್ಬಕ್ಕೆ ಹಾಕಬೇಕು...ವಿಳಾಸ ನನ್ನದೇ ಆದರೇನಂತೆ....ಕುಶಲವೇ ಅನ್ನಲಿಕ್ಕೆ...:)
No comments:
Post a Comment