ಒಂದು ಹೊಚ್ಚ ಹೊಸ ಮುಂಜಾವು..ಹೊಸ ಹಾಡು.
ಮೊನ್ನೆ ಸಂಜೆ ಒಬ್ಬನೇ ಪಕ್ಕದೂರಿಗೆ ಹೊರೆಟಿದ್ದೆ. ಸಂಜೆ ಸೂರ್ಯನಿಗೆ ಮಧ್ಯಾಃನ ಪರೆ ಕಳೆಚಿದ್ದ ಕನಕಪುರ ರಸ್ತೆ ಹೊಂಬಣ್ಣದಲ್ಲಿತ್ತು. ರೇಡಿಯೋದಲ್ಲಿ ಬರುತ್ತಿದ್ದ ಹಾಡು ತುಟಿಯ ಮೇಲಿದೆ.
"ಬಾ ನೋಡು ಗೆಳತಿ...ನವಿಲು ಗರಿಯು ಮರಿಹಾಕಿದೆ"
ಜಯಂತರ ಹೊಸ ಕವಿತೆ. ಯಾರು ಅದಕ್ಕೆ ರಾಗ ಹಾಕಿದ್ರು ಮುಂತಾದವೆಲ್ಲಾ ಮುಖ್ಯವೇ ಅಲ್ಲ. ಹಾಡಿನ ಸಾರ ಅಷ್ಟು ಚೆನ್ನಾಗಿತ್ತು. ಪುರುಸೊತ್ತಿದ್ರೆ ಕೇಳಿ...
ಕೆಲವು ಸಾಲುಗಳು ಹೀಗೆವೆ..
"ಲಂಗದಲ್ಲಿ ಹೆಕ್ಕಿತಂದ ಪಾರಿಜಾತ ಚೆಲ್ಲಿದೆ...."
"ಕಣ್ಣ ಮುಚ್ಚಾಲೆ ಆಡುತಾ...ಅಡಗಿ ನೀನೆಲ್ಲೋ ಹೋದೆಯಾ...."
"ಬಾ ಹೋಳೆಯ ತುಂಬಾ ಮಳೆಯ ಹನಿಯ ಬಳೆ ಮೂಡಿದೆ..."
ಅಪರೂಪಕ್ಕೆ ಒಂದು ಒಳ್ಳೆ ಹಾಡು...ಹೊಸವಾರಕ್ಕೆ ಬೇಕಾದಷ್ಟು. :)
No comments:
Post a Comment