Thursday, October 15, 2009

ಕಣ್ಣು ಕಿರಿದು ಮಾಡಿ..ಸುರ್ ಸುರ್ ಬತ್ತಿಯನ್ನು ಉದ್ದದ ಕೈಯಲ್ಲಿ ಹಿಡಿದು


ಮತ್ತೆ ಬೆಳಕಿಗೇ ಸಂಭ್ರಮ
ದಿನವೂ ಎದೆಯ ಗೂಡಿನಲ್ಲೆಲ್ಲೋ ಸಣ್ಣ ಹಣತೆ ಇಟ್ಟುಕೊಂಡು ಜಗತ್ತು ಎದುರಿಸೊ ಹಲವರಿಗೆ...ಇದು ಮತ್ತೊಂದು ದಿನ ಅಷ್ಟೆ. ಸ್ವಲ್ಪ ದೊಡ್ಡವರಾಗುತ್ತಿದ್ದಂತೆ...ಮಕ್ಕಳ ಪಟಾಕಿಯ ಸಂಭ್ರಮವೂ ಕೂಡ...ಒಂದು ತರಹ ಕಿರಿ ಕಿರಿ. ಅರೇ..ನಾವು ಸಣ್ಣವರಾಗಿದ್ದು ಅಷ್ಟು ಬೇಗ ಮರೆತು ಹೊಯ್ತ? ಗೊತ್ತಿಲ್ಲಾ...
ಈಗಿನ ದೀಪಾವಳಿ ಕೆಲವರಿಗೆ "ಬ್ರೇಕ್" ಕೆಲವರಿಗೆ "ರೆಸಾರ್ಟ್ ಟ್ರಿಪ್" ಕೆಲವರಿಗೆ ಒಹ್.." ಐ ಹ್ಯಾವ್ ಟು ವರ್ಕ್ ಟುಡೆ" ದಿನ.
ಅದಿರಲಿ..ದೀಪಾವಳಿ ಅಂದ್ರೆ ನಿಮಗೆ ಏನು ಅಂತ ಆಮೇಲೆ...ಹೇಳಿ
ನನಗೆ ದೀಪಾವಳಿ ಅಂದ್ರೆ..
ಹೊಸ ಬಟ್ಟೆಯ ಸುಗಂಧ...
ಪಕ್ಕದ ಮನೆಯ ಪುಟ್ಟಿಯ ಜರಿ ಲಂಗ...
ಕಣ್ಣು ಕಿರಿದು ಮಾಡಿ..ಸುರ್ ಸುರ್ ಬತ್ತಿಯನ್ನು ಉದ್ದದ ಕೈಯಲ್ಲಿ ಹಿಡಿದು..ಹೆದರಿಕೆಯಲ್ಲೇ ಸಣ್ಣಗೆ ನಕ್ಕ ನನ್ನ ಮಗಳ ನಗೆ.
ಆಆಆಆ...ಅಂತ ಬಾಯಿ ಬಿಟ್ಟು..ತಂದೆಯ ಹೆಗಲ ಮೇಲೆ, ಬಾಯಲ್ಲಿ ಬೆರಳಿಟ್ಟು, ಆಕಾಶಕ್ಕೆ ಹೊರಟ..ರಾಕೆಟ್ ನೋಡುವ ಹಾಲು ಕಂದನ ಆಶ್ಚರ್ಯ..
ರಜಕ್ಕೆ ಮನೆಗೆ ಬಂದ ಮಗ ಸೊಸೆಯನ್ನು ಕಂಡು ಉಕ್ಕಿ ಹರಿವ ವಾತ್ಸಲ್ಯದಲ್ಲಿ....ಕಾಲಿಗೆ ಯೌವನ ಧಾರೆ ಎರೆದ ಅಜ್ಜ ಅಜ್ಜಿ...
"ಬೇಡಕಣೋ..ಮೊದಲು ದೇವರಿಗೆ ಇಟ್ಟು ಆಮೇಲೆ.." ಅಂದು....ಮಗ ತಿನ್ನುವುದನ್ನೆ ಹಬ್ಬ ದಂತೆ ನೋಡುವ ತಾಯಿ...
"ಇವತ್ತು ಎಣ್ಣೇ ಸ್ನಾನ ಮಾಡ್ಬೇಕು" ಅಂತ ಬಟ್ಟಲ್ಲಲ್ಲಿಯ ಎಣ್ಣೆಯಲ್ಲ ನೆತ್ತಿಗೆ ಸುರಿವ ಅಪ್ಪ..ಚಿಕ್ಕಪ್ಪ...
"ಹೇ...ಹೊಸಬಟ್ಟೇ...ನಂಗಿಲ್ಲ್ವ ಬುದ್ದಿ?...ಅಮ್ಮಂಗೇಳಿ ನಂಗೊದ್ದು ಸೀರೆ ಕೊಡ್ಸಿ ಮತ್ತೆ...ಅಂತ ಅವಲತ್ತು ಕೊಳ್ಳುವ..ಕೆಲಸ ಅಜ್ಜಿ..[ಈವತ್ತಿನ ಮೈಡ್ ಅಲ್ಲ]
ನಾವು ಪಟಾಕಿ ಹೊಡೆಯುವುದನ್ನೆ ಬೆರಗು ಗಣ್ಣಿನಿಂದ ನೋಡುತ್ತ...ನಿಲ್ಲುತ್ತಿದ್ದ ಸಾಬರ ಹುಡುಗ..ಅಕ್ಬರ್..
"ಮೊದಲೇ ಹೇಳ್ದೆ..ದೂರ ಇಟ್ಟು ಹೊಡಿ ಅಂತ..ನೋಡ್ದ ಸುಟ್ಟಿದ್ರೆ ಈಗ..?" ಅಂತಿದ್ದ ಅಮ್ಮ..
ದಿನವೂ ನಮ್ಮ ಬೀದಿಗೇ ಟೈಗರ ಆಗಿದ್ದ ನಮ್ಮ "ಟಾಮಿ" ಮೆಟ್ಟಿಲು ಕೆಳಗೆ ಉಸಿರೇ ಇಲ್ಲದೇ ಬಾಲ ಅಲ್ಲಾಡಿಸುತ್ತಾ ಮಲಗಿದ್ದ ನೋಟ...
ಎಲ್ಲಾ ಮುಗಿಯೋವರೆಗೂ ಕಾದಿದ್ದು...ನಮಗೆ ಬೇಜಾರಾಗಿ.."ಟುಸ್" ಅಂದ ಕೆಲ ಪಟಾಕಿಗೆ ತಾಳ್ಮೆಯಿಂದ ಕಾಯ್ವ...ಬಡತನದ ಕತ್ತಲೆಯ ಕಂದಮ್ಮಗಳು
ತನ್ನದೇ ಮನಸ್ಸುಳ್ಳ ರಾಕೆಟ್...ಇಟ್ಟ ಕಡೆ ಬಿಟ್ಟು ಮತ್ತೆಲ್ಲಾ ಸುತ್ತುವ..ಬೂ ಚಕ್ರ... ಹತ್ತು ಸರಿ ಹತ್ತಿಸಿದರೂ...ಟುಸ್ ಅಂದು...ಆಚೆ ತಿರುಗಿದ ತಕ್ಶಣ "ಡಬ್" ಅನ್ನುವ ಆನೆ ಪಟಾಕಿ...
ಹೀಗೆ ಏನೇನೊ...
ಬನ್ನಿ ನಮ್ಮ ಮನೇಲಿ ದೀಪ ಮೋದಲೇ ಇದ್ರೆ ಏನಂತೆ...ಯಾವುದಾದರೂ ಎದೆಯ ಗೂಡಲ್ಲಿ ಒಂದು ಬೆಳಕಿಡುವ...ದೀಪ ಹಚ್ಚುವ..

ಶುಭ ದೀಪಾವಳೀ
ಮಹೇನ್

4 comments:

~mE said...

adu yen barithira mahen neevu :) Tumba channagide.
ಬನ್ನಿ ನಮ್ಮ ಮನೇಲಿ ದೀಪ ಮೋದಲೇ ಇದ್ರೆ ಏನಂತೆ...ಯಾವುದಾದರೂ ಎದೆಯ ಗೂಡಲ್ಲಿ ಒಂದು ಬೆಳಕಿಡುವ...ದೀಪ ಹಚ್ಚುವ. :)

~mE said...

nanagu deepavali andre
Goodu deepa ge color color paper tandu repair madodu :)
goodu deepa ge paper rose madodu :)
yenne snana
Sunje deepa ge batti haki yennay haki ammana hatre jagla madi maney yella deepa idodu
chikkavalidaga patakiya hucchu ittu ..iga terrace ge hogi nodo hucchu :)

ಶೆಟ್ಟರು (Shettaru) said...

ದೀಪದಿಂದ ದೀಪ ಹಚ್ಚಿ...
ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಷಯಗಳು

-ಶೆಟ್ಟರು

Mahen said...

ಥ್ಯಾಂಕ್ಸ್ ಶರಣ್ಯ...
ನೀವು ಓದಿದ್ದಕ್ಕೆ ಧನ್ಯವಾದ...ಹಬ್ಬಗಳು ಚಂದ...ನೆನಪುಗಳಿಗಾದ್ರು...ಆಚರಿಸಬೇಕು :)
ಈ ಸಲ, ನಾನು ಮತ್ತೆ ಹಬ್ಬ ಇಬ್ಬರೆ...ಎಲ್ಲಾ ಊರಿಗೆ ಹೋಗಿದ್ದಾರೆ. ಅದಕ್ಕೆ, ಹೀಗೇ ಏನೋ ನೆನಪಾದದ್ದನ್ನ ಬರೀತಾ ಕೂತೆ.
ಮಹೇನ್
ಶಟ್ಟರೇ ನಿಮಿಗೂ ಶುಭಾಶಯಗಳು. :)

Related Posts with Thumbnails