ಮನಸ್ಸಿಲ್ಲದ ಮಾತುಕತೆ.....
ಮೌನದ ಕಗ್ಗೊಲೆ.
ಎಷ್ಟೋ ಸರಿ ಒಂದು ಸುಂದರ ಮೌನ ನಮ್ಮ ಕಣ್ಣ ಮುಂದೆ ಕೊನೆಯುಸಿರೆಳೆಯುತಿದ್ದರೂ, ಮಾತಿನಲ್ಲಿ, ಮಾತಿನ ಹಿಂದಿನ ಅರ್ಥ, ಅನರ್ಥಗಳಲ್ಲಿ ಕಳೆದುಹೋಗಿರುತ್ತೇವೆ. ಮೌನದಲ್ಲಿ ಒಂದು ಆತ್ಮೀಯತೆ ಇದೆ, ನಮ್ಮ ಪಾಡಿಗೆ ನಮ್ಮನಿರಲು ಬಿಟ್ಟು ಪ್ರೆಶ್ನೆಗಳನ್ನೆಲ್ಲಾ ಮನಸಿನ ಗೋಡೆಯಲ್ಲಿ ಬರೆದು..ಪರೀಕ್ಷೆ ಕೊಡುತ್ತದೆ ಉತ್ತರ ಹೇಳುವ ಪ್ರಾಮಾಣಿಕತೆ ಬೇಕು ಆಷ್ಟೆ. ಮೌನಕ್ಕೊಂದು ಸಲಾಮು ಹಾಗೆ ಶರಣು ಕೂಡ. ಅದು ಹೇಳಿದ, ಹೇಳದೇ ಇರುವ, ನನಗೆ ಕೇಳಿದ, ಕೇಳದೇ ಇರುವ ಅಶರೀರ ವಾಣಿಗಳ ಆಲಿಸುತ್ತಾ....ಮಾತು ಮುಗಿಸುತ್ತೇನೆ. :)
No comments:
Post a Comment