ಮೊನ್ನೆ ಬಳ್ಳಾರಿಗೆ ಹೋಗಿದ್ದೆ. ಬಂದಾಗ ಬಹಳ ಆಯಾಸವಾಗಿತ್ತು. ನನ್ನ ಎಲ್ಲಾ ಪ್ರೊಗ್ರಾಮುಗಳಿಗೆ ಪುಲ್ ಸ್ಟಾಪ್
ಹಾಕಿ, ಮನೇಲಿ ಮಗಳ ಹತ್ತಿರ ಇರೋಣ, ಮನೆ ಸ್ವಲ್ಪ ಗಲೀಜ್ ಆಗಿತ್ತು, ಅದನ್ನೆಲ್ಲಾ ಕ್ಲೀನ್ ಮಾಡಾಣ ಅಂತ ಯೋಚನೆ ಮಾಡಿದ್ದೆ. ಮಾರನೇ ದಿನ ಎದ್ದು ನಿವ್ಸ್ ಪೇಪರ್ ನೋಡಿದಾಗ, ಮುಂಬೈನಲ್ಲಾದದ್ದು ನೋಡಿ ಕಂಗಾಲು.
ಕುತೂಹಲ ಕೋಪಕ್ಕೆ ತಿರುಗಿ, ಕೋಪ ಅಸಹಾಯಕತೆಗೆ ಮೋರೆ ಹೋಗಿ ಎರಡು ದಿನ ಟೀವಿಗೆ ಬಂದಿಯಾಗಿ ನೊಂದಿದ್ದಾಯಿತು.
ಈ ಎರಡು ದಿನದಲ್ಲಿ ಕಂಡದ್ದು ಮತ್ತು ಅದು ನನ್ನಲ್ಲಿ ಹುಟ್ಟಿಸಿದ ಪ್ರೆಶ್ನೆಗಳನ್ನು ಬರೆದಿಡಿತಿದ್ದೇನೆ...ಯಾರನ್ನಾದರೂ ಉತ್ತರ ಕೇಳಲಿಕ್ಕೆ.
೧. ಇತ್ತೀಚಿಗೆ ಇಸ್ಲಾಂಮಾಬಾದಿನ ಹೋಟೇಲೊಂದರಲ್ಲಿ ಬಾಂಬ್ ಸ್ಪೋಟವಾಗಿ ಹೋಟೇಲೇ ನಿರ್ನಾಮವಾಗಿ ಹೋಯಿತು. ಅದಕ್ಕೆ ಮುಂಚೆ ಲಂಡನ್ ನ ರೈಲ್ವೆ ಸ್ಟೇಶನ್ ನಲ್ಲಿ ಸ್ಪೋಟದ ಘಟನೆ ನಡೆಯಿತು. ಸಾಮಾನ್ಯ ಪ್ರಜೆಯಾಗಿ, ಈ ಘಟನೆಯ ಬಗ್ಗೆ ಚಿಂತಿಸಿದರೆ, ಅನ್ನಿಸುತ್ತದೆ ಈ ಎರಡು ಘಟನೆಗಳೂ ಮುಂಬೈ ನಲ್ಲಿ ನಡೆದ ಘಟನೆಗೆ ಎಚ್ಚರಿಕೆಯಾಗಬಹುದಿತ್ತಲ್ಲಾ? ದಿನವೂ ರಕ್ಷಣೆಯ ಕೆಲಸ ಮಾಡುವ ನಮ್ಮ ಇಂಟಲಿಜೆನ್ಸ್ ನವರಿಗೆ ಇಲ್ಲಿನ ಹೋಟೇಲಿನ ಮೇಲೂ ಇಸ್ಲಾಂಮಾಬಾದಿನ ಹೋಟೇಲೊಂದರಲ್ಲಿ ಬಾಂಬ್ ಸ್ಪೋಟವಾದ ಹಾಗೆ ಆಗಬಹುದು ಅನ್ನಿಸಲಿಲ್ಲವ?
೨. ಪಾಕೀಸ್ತಾನದ ವಿದೇಶ ಮಂತ್ರಿ ಇಲ್ಲೇ ಅಜ್ಮೇರದಲ್ಲಿದ್ದದ್ದು ನೋಡಿದರೇ ಅದರ ಕಾರಣಗಳು ಹಲವಾರಿರಬಹುದಲ್ಲಾ?
೩. ಇನ್ನು, ಮುಂಬೈನಲ್ಲಿ ಶೋಟ್ ಔಟ್ ಅದದ್ದು ಕೆಲವು ಕಡೆ. ಆದರೆ ಪಂಚತಾರ ಹೋಟೇಲಿನಲ್ಲಿ ನಡೆದ ವಿಷಯಕ್ಕೆ ಬಹಳ ಪ್ರಾಮುಕ್ಯತೆ ಕೊಟ್ಟ ಮೀಡಿಯ, ವೀಟಿ ಸ್ಟೇಷನ್ ನಲ್ಲಿ ಮಡಿದ ಸುಮಾರು ಐವತ್ತು ಜನರನ್ನು ಮರೆತೇಬಿಟ್ಟಿತಲ್ಲ. ಅಲ್ಲಿಗೆ ಟೀವಿ ಕ್ಯಾಮರಾ ಹಿಡಿಯಲೇ ಇಲ್ಲ.
೪.ಟೈಮ್ಸ್ ಒಫ್ ಇಂಡಿಯಾದ ಎಡಿಟರ್, ಸಬೀನ ಸೆಹ್ಗಲ್, ಪಾಪ ತನ್ನ ಜೀವ ಕಳೆದು ಕೊಂಡ ತಾಯಿ. ನನ್ನ ಸಂಪೂರ್ಣ ಪ್ರಾರ್ಥನೆಗಳು ಅವಳ ಅತ್ಮಶಾಂತಿಗೆ, ವಿಷಯ ಅದಲ್ಲ, ಆಕೆ ಸತ್ತದ್ದು ತಾಜ್ ಹೋಟೇಲಿನಲ್ಲೆ ತುಂಬಾ ದುಬಾರಿಯೆನಿಸಿದ ಒಂದು ಕೊಠಡಿಯಲ್ಲಿ, ಅಂತಹ ಕೊಠಡಿಯಲ್ಲಿ ಉಳಿದುಕೋಳ್ಳಬೇಕಾದರೇ ಆಕೆ ಮೀಡಿಯಾದಲ್ಲೇ ಇನ್ನೇಷ್ಟು ಸಂಪಾದನೆ ಮಾಡಿದ್ದಿರಬೇಕು? ಮಿಡಿಯಾದಲ್ಲಿ ಅಷ್ಟೋಂದು ದುಡ್ಡಿದೆಯಾ?
೫. ಮೋದಲೇ ಭಾರತದ ಮಾನ ಹೋಗುತಿತ್ತು. ಜಗತ್ತಿನ ಎಲ್ಲಾ ಚಾನಲ್ ಗಳೂ ಮುಂಬೈಯನ್ನು ಮುಖ್ಯವಿಷಯವನ್ನಾಗಿಸಿ ಸುದ್ದಿ ಬಿತ್ತರಿಸುತ್ತಿತ್ತು. ಪಡ್ಡೇ ಹುಡುಗರೆಲ್ಲಾ ಗನ್ ಹಿಡ್ಕೊಂಡು ಬಂದು ನಮ್ಮ ದೇಶದಲ್ಲಿ ಅಲ್ಲೋಲ ಕಲ್ಲೊಲ ಮಾಡಬಹುದು, ಏನೂ ಭಯ ಇಲ್ಲ ಅನ್ನೋ ಸಂದೇಶ ಹೋಗುತ್ತಾಇತ್ತು. ಇಂಥಹದರ ಮದ್ಯ ನಮ್ಮ ದೇಸೀ ಚಾನಲ್ ರವರ ನಾಟಕೀಯ ವದರಿಕೆ, ವಿಷಯಗಳನ್ನು ಸರಿಯಾಗಿ ಪರಿಶೀಲಿಸದೇ "ಬ್ರೇಕಿಂಗ್ ನಿವ್ಸ್" ಗಳನ್ನು ಮಾಡಿ, ಘಳಿಗೆಗೊಂದು ಸ್ಪಷ್ಟನೆ ಕೊಟ್ಟು. ಯಾರೋ ಮುಖ್ಯಸ್ಥರು ಮಾತಾಡುತ್ತಾರೆ ಆನ್ನುವಾಗ ತಮ್ಮ ಕ್ಯಾಮರಗಳೇ ಮುಂದಿರಬೇಕೆಂಬ ಹಪ ಹಪಿಯಲ್ಲಿ ತಳ್ಳಾಡಿ ಆ ಮುಕ್ಯಸ್ಥರೇ ಜಾಗ ಖಾಲಿ ಮಾಡುವ ಹಾಗೆ ಮಾಡೋಡು. ಎಲ್ಲಾರಿಗೂ ಬುದ್ದಿ ಹೇಳುವ ಇವರಿಗೆ ಜಗತ್ತೇ ನಮ್ಮನ್ನು ನೋಡುವಾಗ ಸಂಯಮ ಬೇಕೆಂಬ ಕಲ್ಪನೇಯೇ ಇಲ್ಲವೇ?
೬. ರಾಜ್ ಠಾಕರೇ ಎಲ್ಲಿ ಹೋಗಿದ್ದ? ಬೇರೆ ಕಡೆಯಿಂದ ಬಂದ ಬೇರೇ ರಾಜ್ಯದ ಕಮಾಂಡೊಗಳು ತಾನೆ ಮುಂಬೈನ ಉಳಿಸಲಿಕ್ಕೆ ಪ್ರಯತ್ನ ಪಟ್ಟಿದ್ದು?
೭. ನೀವು ಗಮನಿಸರ ಬಹುದು, ಆರ್ನೊಬ್ ಗೊಸ್ವಾಮಿ, ಆಲ್ಮೋಷ್ಟ್ ನಿವ್ಸ್ ಅನ್ನು ಮಾರುತ್ತಾ ಕೂತಿದ್ದ. ತನ್ನ ಚಾನಲ್ ಮಾತ್ರ ಜನರಿಗೆ ಆ ಕ್ಷಣದ ಚಿತ್ರ ಕೋಡುತಿದೆ, ಮಿಕ್ಕೆಲ್ಲಾ ಚಾನೆಲ್ ಗಳು ಸ್ಪೆಕುಲೇಷನ್ ನಲ್ಲಿ ತೊಡಗಿವೆ ಎಂದೆಲ್ಲಾ ಅಪಾದಿಸಿದ. ಉಗ್ರರಿಗೆ ಸಹಾಯವಾಗುವ ಯಾವುದೇ ಚಿತ್ರಗಳನ್ನು ಬಿತ್ತರಿಸುವುದಿಲ್ಲಾ ಎಂದು ಬೊಗಳೆ ಬಿಟ್ಟು, ಜಾವಾನರ ಕೈಯಲ್ಲಿದ್ದ ಆಯುಧಗಳನೆಲ್ಲಾ ಸ್ಪಷ್ಟವಾಗಿ ಬಿತ್ತರಿಸಿದ.
೮. ತಾಜ್ ಹೋಟೇಲಿನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮತ್ತೊಂದು ವಿಷಯ ಕಲಿಯುವುದಿತ್ತು ಮೀಡಿಯದವರಿಗೆ.
ಅವರು ಗಮನಿಸಿದರೋ ಇಲ್ಲವೊ, ಅಂತು ಉಗ್ರರಿಗೆ ಮೀಡಿಯದವರು ಎಲ್ಲರೂ ಯಾವ ಜಾಗದಲ್ಲಿ ಒಟ್ಟಾಗಿದ್ದಾರೆ ಅಂತ ಪೂರ್ಣ ಅರಿವಿತ್ತು. ಅವರು ಬೆಂಕಿ ಹಚ್ಚಿದ್ದು ಮೀಡಿಯಾದವರಿದ್ದ ಕಡೆಯ ಭಾಗದಲ್ಲೇ. ಬೆಂಕಿ ನಂದಿಸಿದಾಗಲೆಲ್ಲಾ, ಕ್ಯಾಮರಾಕ್ಕೆ ಏನಾದರೂ ಇರಲಿ ಅಂತ ಪುನಃ ಅದೇಭಾಗದಲ್ಲಿ ಹಚ್ಚುತಿದ್ದರು. ಕೊನೆಯದಿನದವರೆವಿಗೂ ಅವರು ದಾಂದಲೇ ಮಾಡುತಿದ್ದದ್ದು, ಒಂದು ಕೋನೆ ಯಲ್ಲಿ ಒಟ್ಟಾಗಿದ್ದ ಮೀಡಿಯದವರ ಕ್ಯಾಮರಕ್ಕಾಗಿ ಮತ್ತು ಅದರಿಂದ ದೊರೆಯುತ್ತಿದ್ದ ಪಬ್ಲಿಸಿಟಿಗಾಗೆ. ಕೊನೆಯ ಉಗ್ರರಂತೂ, ಟೆಲಿವಿಷನ್ ಕ್ಯಾಮರಾಗಳಿದ್ದ ಭಾಗದ ಕಿಟಕಿಯಲ್ಲಿ ಅಡಗಿ ಅಲ್ಲಿಂದ ಗ್ರೆನೇಡು ಅದು ಇದು ಹಾಕುತ್ತಿದ್ದರು. ಇವರಿಲ್ಲ ದಿದ್ದರೇ ಇನ್ನು ಬೇಗ ಮುಗಿಯುತಿತ್ತೇನೋ. ಇದನ್ನು ಮೀಡಿಯಾದವರಿಗೆ ಯಾರೂ ಹೇಳಲಿಲ್ಲ.
೯.ತಾಜ್ ಹೋಟೇಲಿನ ಗೆಷ್ಟು ಗಳನ್ನು ಬೆತ್ತದ ಏಣಿ, ಕರ್ಟನ್ನಿಂದೆಲ್ಲಾ ಕೆಳಗೆ ಇಳಿಸುತ್ತಿದ್ದ ಅಗ್ನಿಶಾಮಕ ದಳದವರ ಹತ್ತಿರ ಮೇಲಿನಿಂದ ಜಿಗಿದವರನ್ನ ಹಿಡಿಯುವಂತಹ, ನಾಲ್ಕಾರು ಜನ ಜಗ್ಗಿ ಹಿಡಿಯುವಂತಹ "ಟ್ರಾಂಪಾಲಿನ್"ತರದ ಸಾದನ ಇರಲಿಲ್ಲವ? ಅಂತಹ ದೊಡ್ಡ ಎತ್ತರದ ಕಟ್ಟಡ ವಲ್ಲ ತಾಜ್, ಏಣಿಯಾಲ್ಲಿ ನಿಧಾನ ವಾಗಿ ಇಳಿಯುವುದಕಿಂತ ಈ ಸಾಧನ ತ್ವರಿತವಾಗುತಿತ್ತು. ತಾಜ್ ನ ಜನರಲ್ ಮ್ಯಾನೇಜರ್ ನ ಪರಿವಾರ ಅಗ್ನಿಶಾಮಕದವರಿಗೆ ಮೊರೆ ಇಟ್ಟು ಇಟ್ಟೂ ಅವರು ಏಣಿತರದೆ, ಅಲ್ಲೇ ಬೆಂಕಿಯಲ್ಲಿ ನಂದಿ ಹೋದರಂತೆ..ಇದನ್ನು ತಡೆಯಬಹುದಿತ್ತೇನೂ ಅಂತ ನನ್ನ ಪೇಚಾಟ ಅಷ್ಟೇ.
10.ಬರ್ಖಾ ದತ್ - ಬಹಳ ದೊಡ್ಡ ನಟಿ, ಕೆಟ್ಟ ವರದಿ ಗಾರ್ತಿ. ಕೊನೆಯ ದಿನ ಅವಳ ಅಲುಗಾಡದ ಮೇಕಪ್ಪು, ಚಂದ ಚಂದದ ಬಟ್ಟೇ...ನೋಡಲಿಕ್ಕೆ ಚಂದ. ಇವಳನ್ನು ಯಾವಾಗ ಯಾವುದಾದರೂ ರಾಜತಾಂತ್ರಿಕ ಕೆಲಸ ಕೊಟ್ಟು ಹೊರದೇಶಕ್ಕೆ ಯಾವಾಗ ಕಳಿಹಿಸುತ್ತಾರೆ?.. ಅವಳಿಂದ ನಾನು NDTV ನೋಡೋದೇ ಬಿಟ್ಟೆ.
ಮತ್ತೆ ಕೆಲವು, ಮನಸ್ಸಿಗೆ ಬಂದಿದ್ದು....
ಇನ್ನೆರಡು ದಿನ ಆದರೆ
ಲಾಲು ಪ್ರಸಾದ್ ಯಾದವ - " ಪಾಪ! ಚಿಕ್ಕ ಹುಡುಗರು ಅವರು. ತಿಳಿಯದೇ ಬಂದವರು. ಅವರನ್ನು ಹಿಡಿಯಲ್ಲಿಕ್ಕೆ ಇಂತಹ ಹಿಂಸೆ ಮಾಡಬೇಕಿತ್ತ, ಸೈನ್ಯ ಕರೆಸ ಬೇಕಿತ್ತಾ? ಇದು ಮೈನಾರಿಟಿಗೇ ಮಾಡಿದ ಅನ್ಯಾಯ.
ಅಮರ್ ಸಿಂಗ್ - "ಸೆರೆ ಸಿಕ್ಕ ಹುಡುಗ ನಿರಪರಾದಿ ಎಂದು ಸಾಬೀತು ಪಡಿಸಲು ಎಲ್ಲಾ ತರದ ಕಾನೂನು ನೆರವು ನೀಡಿ, ಅವನಿಗೆ ಪರಿಹಾರ ಮತ್ತು ಸನ್ಮಾನ ಕಾರ್ಯಕ್ರಮ ಇದೆ"
ದೇವೇಗೌಡರು - "ಹಿಂದೂ ಕಂಮಾಡೊ ಗಳು ನಡೆಸಿದ ಕೋಮು ವಿರೋದಿ ಮನೋಭಾವನೆಯ, ಚಿಕ್ಕ ಮಕ್ಕಳ ಮೇಲಿನ ಧಾಳಿ ಇದು. ನಾನು ಖಂಡಿಸುತ್ತೇನೆ. ಇದರ ಬಗ್ಗೆ ಪ್ರದಾನಿಗೆ ಪತ್ರ ಬರೆಯುತ್ತೇನೆ"
ಪ್ರಾಸದ್ ಬಿದ್ದಪ್ಪ [ಪ್ಯಾಷನ್ ಗುರು] - ಒಹ್! ಏನ್ ಫ್ಯಾಷನಬಲ್ ಆಗಿದ್ದಾರೆ ಹುಡುಗರೂ...ಆಯ್ಯೂ ಅವರು ನಡೆಯುತ್ತಿದ್ದರೆ ರಾಂಪ್ ಮೇಲೆ ನಡೆದ ಹಾಗಿತ್ತು.
ಮಹೇಶ್ ಬಟ್ - ನನ್ನ ಹೊಸ ಚಿತ್ರಕ್ಕೆ ಸೆರೆ ಸಿಕ್ಕ ಹುಡುಗನೇ ಹೀರೊ.
ಇಂತಹದ್ದನ್ನೆಲ್ಲಾ ಕೇಳಬೇಕಾಗಬಹುದು. ಏನು ದೇಶವೂ, ಏನು ರಾಜಕಾರಿಣಿಗಳೂ...
ಹೋಗುವ ಮುನ್ನ ಈ ಲಿಂಕನ್ನ ಒಮ್ಮೆ ನೋಡಿ ಹೋಗಿ. ರಕ್ತ ಕುದ್ದರೆ ತಣ್ಣೀರು ಸ್ನಾನ ಮಾಡಿ. ಸದ್ಯ ಬೇರೆ ಏನು ಮಾಡಲಿಕ್ಕಗುವುದಿಲ್ಲಾ.....ಎಲೆಕ್ಷನ್ ಬರುವತನಕ...ಆಮೇಲೆ ಜವಾಬ್ದಾರಿಯಿಂದ ಓಟ್ ಮಾಡಬಹುದು.
http://boston.com/bigpicture/2008/11/mumbai_under_attack.html
2 comments:
ನಿಮ್ಮಂತೆ ನಾನೂ ಬರ್ಖಾ ದತ್ ಬರುವಾಗ NDTV ಚಾನೆಲ್ ಚೇಂಜ್ ಮಾಡ್ತೇನೆ. ಒಂದು ನಿಮಿಷ ನೋಡಿ.
ಮಹೇಂದ್ರ,
ಇದಂತೂ ಚೆನ್ನಾಗಿದೆ. ಎಲ್ಲಾ ಪಾಯಿಂಟ್-ಗಳೂ ವ್ಯಾಲಿಡ್ಡು. ಕೊನೆಯಲ್ಲಿರುವ ಕೆಲವು ದುಷ್ಟರ ಅಭಿಪ್ರಾಯಗಳೂ ಸಮಯೋಚಿತ. ಎನ್ ಡಿ ಟಿ ವಿ ವರದಿಗಾರ್ತಿಯ ಬಗ್ಗೆ ನನ್ನ ಸಹಮತಿಯಿದೆ. ಆಕೆ ಸುದ್ದಿ ಕೊಡುತ್ತಾಳೋ, ಡೈಲಾಗ್ ಹೊಡೆಯುತ್ತಾಳೋ ಅರ್ಥವೇ ಆಗುವುದಿಲ್ಲ.
Post a Comment