"ಅಪ್ಪಾ! ಇವತ್ತು ಸ್ಕೂಲ್ ನಲ್ಲಿ ಏನ್ ಫನ್ನಿಯಾಗಿತ್ತು ಗೊತ್ತ?"
ಆಗತಾನೆ ಸ್ಕೂಲ್‍ನಿಂದ ಬಂದ ನನ್ನ ಮೂರನೇ ಕ್ಲಾಸ್ ಮುದ್ದು ಮಗಳು, ತೊಡೆ ಏರುತ್ತಾ, ಏದುಸಿರುಬಿಡುತ್ತಾ ಸಂಭ್ರಮದಲ್ಲಿ ಹೇಳಿದಳು.
"ಏನಾಯಿತೇ! ಏನು ಆಟ ಆಡಿಸಿದ್ರು? ಅಥವ ನೀನು ಏನ್ ತರಲೆ ಮಾಡಿದೆ?"
ಅಂತ ಕೇಳಿದೆ.
"ನಾನೇನು ಮಾಡಿಲ್ಲಾಪ್ಪಾ....ಬಾಯ್ಸು...ಕರ್ಚೀಫ್ನಲ್ಲಿ ಗನ್ ಮಾಡಿಕೊಂಡು, ಎರಡು ಗ್ರೊಪ್ ಮಾಡಿ,
ಒಬ್ರು ಟೆರರಿಷ್ಟು, ಇನ್ನೊಬ್ರು ಕಾಮಾಂಡೊ ಆಟ ಆಡ್ತಾಇದ್ರು, ಟೇಬಲ್ ಕೆಳಗೆ, ಮಿಸ್ಸಿನ ಡೆಸ್ಕ್ ಹತ್ತಿರ ಎಲ್ಲಾ ಅವಿತುಕೋಂಡು ಆಟ ಆಡ್ತಾ ಇದ್ರು. ಜೋರ್ ಗಾಲಾಟೆ ನೋಡಿ ಮಿಸ್ ಬಂದು ಎಲ್ಲಾರ್ಗೂ ಬೈದ್ರು"
ಅಂದಳು.
ಈ ಸರಿಯ ಟೆರರ್ ಅಟ್ಯಾಕ್ ನಿಂದ ದೇಶಕ್ಕೆ ಬೇರೆ ಏನು ನುಕ್ಸಾನ್ ಆಯಿತೋ ಗೊತ್ತಿಲ್ಲಾ...ಮಕ್ಕಳ ಮನಸ್ಸಂತು ಹಾಳಾಯಿತು.
"ಇರಲಿ ಬಿಡ್ರಿ, ಇವತ್ತಲ್ಲಾ ನಾಳೆ ಅವರಿಗೂ ಟೆರರಿಷ್ಟು ಅಂದ್ರೆ ಯಾರು ಅಂತ ಗೊತ್ತಾಗ ಬೇಕು. ಟೆರರಿಝಮ್ ಇವತ್ತು ನಾಳೇಲಿ ಮುಗಿಯಲ್ಲಾ" ಅಂದಳು ನನ್ನ ಶ್ರೀಮತಿ
ಒಂದು ಕಾರಾಳ ಸತ್ಯದ ಅರಿವಾಯಿತು.
No comments:
Post a Comment