ಹ ಹ ಹ...ನನ್ನ ಸಂಬಂಧದಲ್ಲಿ ಒಬ್ಬರಿಗೆ ಅವಳಿ ಜವಳಿ ಗಂಡು ಮಕ್ಕಳು. ಯು ಕೆ ಜಿ ಮಕ್ಕಳು. ಬತ್ತದ ಅರಳು ಬಿಸಿ ಬಾಣಲೆ ಮೇಲೆ ತಕ ತಕ ಕುಣಿಯೋ ಹಾಗೆ ಇಬ್ಬರ ಗಲಾಟೆ. ಮೊನ್ನೆ, ಒಬ್ಬ ಶಾಲೆಯಿಂದ ಬಂದವನು ಅಮ್ಮನ ಹತ್ತಿರ ಹೋಗಿ, "ಅಮ್ಮ ನಾನು ಇವತ್ತು ಸ್ಕೂಲ್ ನಲ್ಲಿ ರನ್ನಿಂಗ್ ರೇಸ್ ಓಡಿದೆ, ಪೂರ್ತಿ ಒಂದು ರೌಂಡ್ ಓಡಿದೆ, ನಾನೆ ಫರ್ಷ್ಟು" ಅಂದ. ಅಮ್ಮನ ಆನಂದಕ್ಕೆ ಪಾರಾನೇ ಇಲ್ಲ. "ಹೌದೇನೋ? ಪರವಾಗಿಲ್ಲವೇ" ಅಂತ ಹೆಮ್ಮೆ ಪಟ್ಟುಕೊಂಡಳು.
ಆಗತಾನೆ ಕೈಕಾಲು ತೊಳ್ಕೊಂಡು, ಇನ್ನೊಬ್ಬ ಅಮ್ಮನ ಹತ್ತಿರ ಬಂದ. ಅಮ್ಮ ಕೇಳಿದಳು "ಏನೊ, ಅವುನು ಸ್ಕೊಲ್ ನಲ್ಲಿ ಫರ್ಷ್ಟ್ ಬಂದನಂತೆ, ರನ್ನಿಂಗ್ ನಲ್ಲಿ, ನೀನೇನೆ ಮಾಡ್ದೆ?" ಅಂದಳು.
ಅದಕ್ಕೆ ಇನ್ನೊಬ್ಬನು, "ಏ..ಯಾರೇಳಿದ್ದು ಅವುನು ರನ್ನಿಂಗ ರೇಸ್ ಗೆದ್ದ ಅಂತ, ಅವನು ಕ್ಲಾಸ್ ನಲ್ಲಿ ತರಲೆ ಮಾಡಿದ್ದಕ್ಕೆ, ಮೈದಾನದಲ್ಲಿ ಓಡಿಸಿದ್ರು, ಅವನೊಬ್ಬನೇ ಓಡಿದ್ದು, ಅವನೊಬ್ಬನೇ ಫರ್ಷ್ಟು ಬಂದಿದ್ದು" ಅಂದ.
ಅಮ್ಮ ಕಂಗಾಲು, ಮನೆಯಲ್ಲ ನಗೆ ಗಡಲು. ಹ ಹ ಹ ...
1 comment:
ಹ್ಹಹ್ಹ.ಹ. ಚೆನ್ನಾಗಿತ್ತು. ಅಂದಹಾಗೆ ನೀವು ಮಂಗಳೂರಿನವರು ಅಂತ ತಿಳಿದು ಖುಷಿಯಾಯಿತು. ನೀವು ಬರೆದ ಸಂದರ್ಭದ ತರಹದೇ ಒಂದು ಟಿವಿ ಜಾಹೀರಾತು ಕೂಡ ಬರುತ್ತಿದೆ. ನೀವು ಕೂಡಾ ಜಾಹೀರಾತು ಛಾಯಾಗ್ರಾಹಕ ಆದುದರಿಂದ ಈಗಾಗಲೇ ಗಮನಿಸಿರಬಹುದು. ಎಂ.ಟಿ.ಆರ್.ಗುಲಾಬ್ ಜಾಮೂನಿನ ಜಾಹೀರಾತಿನಲ್ಲಿ, ಹುಡುಗ ಅಮ್ಮನ ಬಳಿ ಶಾಲೆಯಲ್ಲಿ ತಾನು ಓಟದಲ್ಲಿ ಸೆಕೆಂಡ್ ಎಂದಾಗ ಅಮ್ಮ ಪರವಾಗಿಲ್ವೇ ಅಂದುಕೊಳ್ಳುತ್ತಿರುವಾಲೇ ಅಪ್ಪ ಬಂದು ಎಷ್ಟು ಜನ ಸ್ಪರ್ಧೆಯಲ್ಲಿದ್ರು ಅಂತ ಕೇಳ್ತಾನೆ. ಅದಕ್ಕೆ ಹುಡುಗ ಅಂತಾನೆ ’ಇಬ್ರೇ..’
Post a Comment