ಅಸಾದ್ಯ ಶೀತ, ಮೂಗು ನೋಡಿಕೊಳ್ಳೋದೋ, ತಲೇಗೆ ಸಮಾಧಾನ ಮಾಡೋದೋ, ಮೈಕೈಗೆ ಮುಲಾಮು ಹಚ್ಚೋದೊ ಗೊತ್ತಾಗದೆ ಚಿಟ್ಟು ಹಿಡಿಯೋ ಅಂತಹ ಏಳು ದಿನ. ಮನೇಲಿ ಎಲ್ಲಾರಿಗೂ ನಾನು ಒಂದು ಸಹಿಸಲಾಸಾದ್ಯವಾದ ಜಾಡ್ಯ ಆಗಿ, ಯಾವಾಗ ಸರಿ ಆಗ್ತಾನಪ್ಪ ಇವನು ಅನ್ನೋ ಕಾಲ. ಸದ್ಯ ಮುಗೀತು. ಇವತ್ತಿನಿಂದ ಪುನಃ ಕೆಲಸಕ್ಕೆ ಹಾಜರ್ರು.
ದೀಪಾವಳಿ, ಹೆಸರು ಒಂದು ತರಹ ಮುದ್ದಾಗಿದೆ. ಆದರೇ ನಮ್ಮ ಜನ ಪಟಾಕಿ ಹೊಡೆದು ಹೊಡೆದು, ಯಾಕಾದ್ರು ಬರುತ್ತಪ್ಪಾ ಈ ಪಟಾಕಿ ಹಬ್ಬ ಅನ್ನಿಸಿಬಿಡುತ್ತೆ. ಬರುವಸಲ ಯಾವುದಾದ್ರು ಬೇರೆ ಪಂತದವರಿರೊ ಪುಣ್ಯ ಕ್ಷೇತ್ರಕ್ಕೆ ತಿರುಗಾಡಕ್ಕೆ ಹೋಗಿಬಿಡಬೇಕು. ಅಲ್ಲಾದರೂ ಸೈಲೆಂಟಾಗಿ ಇದ್ದು, ಹಬ್ಬ ಮುಗಿಸಿ ಬರಬೇಕು. ಶಬ್ಧ, ಆಗಲ್ಲಾಪ್ಪಾ.
1 comment:
ಬಹಳ ದಿನಗಳ ನಂತರ ನಿಮ್ಮ ಬ್ಲಾಗ್ ನೋಡಿದೆ.
ಈ ನಡುವೆ ನೀವು ಬರೆದ ಬರಹಗಳ ಮೇಲೆಲ್ಲಾ ಒಮ್ಮೆ ಕಣ್ಣಾಡಿಸಿ ನಿರ್ಧಾರ ಮಾಡಿದೆ. ಇವತ್ತು ಪಟ್ಟಾಗಿ ಕುಳಿತು ಎಲ್ಲವನ್ನೂ ಓದಿಯೇ ಮುಗಿಸುತ್ತೇನೆ.
ತಲೆಬರಹ ಗಳೆಲ್ಲ ತುಂಬ ಇಂಟರೆಸ್ಟಿಂಗ್ ಆಗಿವೆ.
Post a Comment