
"ಅಪ್ಪಾ, ಹಲ್ಲು ಯಾಕೆ ಬೀಳ್ಬೇಕು? ಪುನಃ ಅದೇ ಹಲ್ಲು ಹುಟ್ಟೊಹಂಗಿದ್ರೆ ಬೀಳೊದು ಯಾಕೆ?"
"ಚಾಕ್‍ಲೇಟ್ ತಿಂದ್ರೆ ಹಲ್ಲು ನೊವುತ್ತೆ ಮಗಳೇ" (ನಾನು)
"ಹಲ್ಲು ಬ್ರಷ್ ಮಾಡಿ ಮಲಗ್ತೀನಿ, ಒಂದೇ ಒಂದು ಕೊಡ್ಸಪ್ಪಾ"
"ತುಂಬಾ ಅಲ್ಲಾಡ್ತಾಇದೆ, ಕಿತ್ತಾಕಣ ಬಾರಮ್ಮ"
"ಟೂತ್ ಫೇರಿಗೆ ಹಲ್ ತೊಗೊಂಡ್ ಹೊಗೊ ಕೆಲಸ ಯಾಕೆ?"
"ಹೊಗಪ್ಪಾ ಇನ್ನೂ ಎಷ್ಟುದಿನ ಆಗಬೇಕು ಈ ಹಾಳಾದ್ ಹಲ್ಲು ಬೀಳಕ್ಕೆ"
"ಅಯ್ಯೋ, ಇದೇನು ಚಿನ್ನು ಬಾಯಲ್ಲ ಕೆಂಪು"(ನಾನು)
"ಪಪ್ಪಾ ಬಿತ್ತು, ಹಲ್ಲು ಬಿತ್ತು ಇಲ್ನೊಡು. ಹೇ... ಚಾಕ್ಲೇಟ್ ಕೊಡಿಸ್ತೀಯ ಈಗ?"
ಇನ್ನೂ ಎಷ್ಟೊ ಈ ತರಹದ ಪ್ರೆಶ್ನೆಗಳನಂತರ ನನ್ನ ಮಗಳ ಹಲ್ಲು ಬಿತ್ತು. ಮನೇಲಿ ದೊಡ್ಡ ರಾಮಾಯಣ ಮುಗಿತು.
"ಪಪ್ಪಾ, ನಾಳೆಇಂದ ರಜ, ಹೇ...ಹೇ....ಏಲ್ಲಿಗೆ ಹೊಗೊದಪ್ಪಾ? ಏನ್ ಕೊಡಿಸ್ತೀಯಪ್ಪಾ?"
ಈಗ ಈ ಹೊಸ ಪ್ರೆಶ್ನೆಗಳಿಗೆ ಉತ್ತರ ಹುಡುಕ್ತಾ ಇದ್ದೀನಿ.
No comments:
Post a Comment