Thursday, January 31, 2008

ಗಾಳಿಪಟ ಮತ್ತು ಅದರ ಬಗ್ಗೆ ಬಂದ ವಿಮರ್ಶೆಗಳ ಬಗ್ಗೆ ನನ್ನ ಅಭಿಪ್ರಾಯ.

ಗಾಳಿಪಟ - ಜನ ಮಳೆ ಗುಂಗಲ್ಲೆ ಇದ್ದರೆ ಅದು ಭಟ್ಟರ ತೊಂದರೆ ಅಲ್ಲ, ಗಾಳಿಪಟ ಮಳೆಯಲ್ಲಿ ಹಾರಲ್ಲ.
"ಕತೆನೇ ಇಲ್ಲಾ" ಅನ್ನೊವ್ರುಗೆ ಅಷ್ಟೊಂದು ಮಧುರ ಸಂಬಂಧಗಳ ಕಥಾಚಿತ್ರ ಅದು ಹೇಗೆ ಕಾಣಲಿಲ್ಲ ಅನ್ನೊದೇ ಸೂಜಿಗ.
ಒಂದು ಚಿತ್ರ ಹೀಗೇ ಇರಬೇಕು, ಅಥವ ಇನ್ನೊಂದು ಚಿತ್ರದ ಹಾಗಿರಬೇಕು, ಇದೆಲ್ಲಾ ಯಾವ ತರದ ಮಾನದಂಡ? ಕಲಾವಿದನ ಕೃತಿ ಹೀಗೆ ಇರಬೇಕು ಅನ್ನೊದಾದರೆ, ನಾವೆ ಅರ್ಡರ್ ಕೊಟ್ಟು ಮಾಡಿಸಬಹುದಲ್ಲವ? ಒಂದು ಕೃತಿ ನಮ್ಮ ನಮ್ಮ ಜೀವನಾನುಭವಕ್ಕೆ ತಕ್ಕ ಹಾಗೆ ನಮಗೆ ಹಿಡಿಸಬಹುದು ಅಥವ ಇಲ್ಲ, ಹೀಗಿರುವಾಗ ಒಬ್ಬ ಚಿತ್ರ ನೋಡಿ ಮಿಕ್ಕ ಮುಕ್ಕೊಟಿ ಜನಕ್ಕೆ ಫರ್ಮಾನು ಹೊರಡಿಸೊದು ಸ್ವಲ್ಪ ಕಮ್ಯುನಿಸಂ ಅನ್ನಿಸಲ್ವ?
ಅವರವರ ಭಾವಕ್ಕೆ ಅವರವರು ಚಿತ್ರ ನೊಡಲಿಕ್ಕೆ ಬಿಡಿ, ಚಿತ್ರದ ತಾಂತ್ರಿಕತೆ ಬಗ್ಗೆ ಮಾತಾಡಿ, ವಿವಾದಾತ್ಮಕ ವಿಷಯ ಇದ್ದರೆ ಪ್ರತಿಭಟಿಸಿ.
ನಾನು ಗಾಳಿಪಟ ನೋಡಿದೆ, ನನಗೆ ಹಿಡಿಸಿತು, ನಿಮ್ಮ ಬಗ್ಗೆ ಗೊತ್ತಿಲ್ಲ. ಬಹಳ ಕಷ್ಟ ಪಟ್ಟು ಆಸಕ್ತಿಯಿಂದ ಒಂದು ಚಿತ್ರಬಿಡಿಸಿದ್ದಾರೆ ಮಿಕ್ಕಿದ್ದೆಲ್ಲಾ ಬಿಟ್ಟು
ಕನ್ನಡಾಭಿಮಾನ ಇದ್ದರೆ ಒಮ್ಮೆ ನೋಡಿ. ನಿಮ್ಮ ಅತೀ ಮಾತಾಡುವ ಗೆಳಯನ ನೆನಪಾದರೆ, ಯಾವುದೊ ಮದುವೆಯಲ್ಲಿ ನೋಡಿದ ಗಂಡುಬೀರಿ ಪುನಃ ಕಂಡ ಹಾಗಾದರೆ, ಭಟ್ಟರಿಗೆ ಒಂದು ಥ್ಯಾಂಕ್ಸ್ ಹೇಳಿ ಹೋರಬನ್ನಿ. ಒಂದು ಚಿತ್ರ ನೋಡದಕ್ಕೊ ಇಷ್ಟೋಂದು ವಿವಾದ, ಒತ್ತಡ, ಅಬಿಪ್ರಾಯ ಗಳನ್ನು ಜೊತೆಗೆ ತಗೊಂಡು ಹೋಗು ಅಗತ್ಯ ಇಲ್ಲ ಅನ್ನಿಸುತ್ತೆ.
ಒಂದಂತು ನಿಜ, ಇತ್ತಿಚಿನ ವರ್ಷಗಳಲ್ಲಿ, ನಮ್ಮ ಚಿತ್ರಗಳಲ್ಲಿ, ಕನ್ನಡತನ ಇರಲ್ಲಿಲ್ಲ. ತಮಿಳೊ ತೆಲುಗೊ ಚಿತ್ರಗಳ ಪ್ರಭಾವ, ತಾಂತ್ರಿಕವಾಗಿ ಮತ್ತು ಕಥಾವಿಭಾಗಗಳಲ್ಲಿ ಎಷ್ಟಿತ್ತು ಅಂದರೆ ಕನ್ನಡತನದ ಅನುಭವವೇ ಇರುತಿರಲ್ಲ. ಗಾಳಿಪಟದಲ್ಲಿ ಅದಿದೆ. ಇದು ನಮ್ಮ ಹಿತ್ತಲಲ್ಲೇ ಸೂತ್ರ ಕಟ್ಟಿಸಿಕೊಂಡು ಹಾರಡುತಿರೊ ಒಂದು ಪಟ.
ಮಹೇಂದ್ರ

No comments:

Related Posts with Thumbnails