ಮನಸ್ಸಿಗೆ ಬೇಜಾರು..ಏನು ಮಾಡೋದು?
ಒಂದು ಸಂಜೆ ಕೂತು ಒಂದೆರಡು ಬಿಯರ್ ಕುಡಿಯೋಣ ಅಂದ್ರೆ..ಅದಕ್ಕೊಳ್ಳೆ ಕಂಪನಿ ಬೇಕು.
ಪುಸ್ತಕ ಓದಣ ಅಂದ್ರೆ...ಛೆ..ಬೇಜಾರಾದ್ರೆ ಪುಸ್ತಕ ಓದ್ತಾರಾ...ನೋಡಣ ಅದನ್ನೂ ಟ್ರೈ ಮಾಡ್ಬೇಕು.
ರಂಗ ಶಂಕರಕ್ಕೆ ಹೋಗಿ ನಾಟಕ ನೋಡಣಾ.....ಉ..ಹುಂ...ಕೆಲವು ನಾಟಕಗಳು ಮೆದುಳಿಗೇ ಕೈ ಹಾಕುತ್ತೆ. ಅರ್ಥ ಆಗದೇ ಇರೋ ನಾಟಕಾನ..ಹೊಗಳಕ್ಕೆ ನನಿಗೆ ಬರಲ್ಲ.
ಹೋಗಲಿ ಅತ್ಲಾಗೆ...ಮಗಳನ್ನ ಕರ್ಕೊಂಡು ಊರಿಗೆ ಹೋಗಿ,ಹೊಳೆಯಲ್ಲಿ ಮುಳುಗಿ..ಕಾಡು ಸುತ್ತಿ ಬರುವ ಅಂದರೆ..ಮಗಳಿಗೆ ಸ್ಕೂಲು..ಊರಲ್ಲಿ ಮಳೆ.
ಬೇರೆಯವರು ಬೇಜಾರಿಗೆ ಫೋಟೋಗ್ರಫಿ ಮಾಡ್ತಾರೆ...ನನಗೆ ಫೋಟೋಗ್ರಫಿ ಮಾಡಿ ಮಾಡಿನೇ ಬೇಜಾರು..ಅದಕ್ಕೇನ್ ಮಾಡೋದು..
ಬೆಂಗಳೂರಿನಲ್ಲಿ ಬೇಜಾರಿಗೆ ಮದ್ದಿಲ್ಲ. ಕೆಲಸ ಕಾರ್ಯದ ಮಾತು ಬಿಟ್ಟು..ಬಿಗುಮಾನ ಇಲ್ಲದೇ ಹರಟೆ ಹೋಡೆಯುವಂತಹ ಗೆಳೆಯರೆಲ್ಲಾ...ಬದಲಾಗಿದ್ದಾರೆ,ಒಂದು ನೂರು ಗ್ರಾಮು ಜಾಸ್ತಿನೇ...ಗಂಭೀರ ಆಗಿದ್ದಾರೆ.
ಹಾಂ..ಸಮುದ್ರದ ದಂಡೆ ಬೇಕು...ಮುನಿಸಿಕೊಂಡಾಗ ರಮಿಸೋ ಪ್ರೇಮಿ ತರಹ...ಎಷ್ಟು ಹೊತ್ತು ಎದುರಿಗೆ ಮಾತಾಡದೇನೇ ಕೂತಿದ್ರೂ, ತನ್ನ ಅಲೆಗಳಲ್ಲಿ ಕಾಲು ಸವರಿ..’ಹೆ..ಹೇಗಿದ್ದೀಯ..?" ಅನ್ನೋ ಸಮುದ್ರದಂತಹ ಸಾಂಗತ್ಯ ಬೇಕು...
2 comments:
ಬೆಂಗಳೂರಲ್ಲೇ ಒಂದು ಬೀಚ್ ಮಾಡ್ಸ್ಬೇಕು... ಇಲ್ಲ ನೀವು ಮಂಗಳೂರಿಗೋ ಅಥವ ಬೇರೆ ಕರಾವಳಿ ಪ್ರದೇಶಕ್ಕೋ ಶಿಫ್ಟ್ ಆಗ್ಬೇಕು :) ಬೇಸರಕ್ಕೆ ಮದ್ದಿಲ್ಲ ಅಥವಾ ನಮಗೆ ಆ ಸಮಯಕ್ಕೆ ಅದು ಮದ್ದು ಅನ್ನಿಸೋದಿಲ್ಲ... ಸುಮ್ಮನೆ ಇದ್ದು ಬಿಡಿ ಸ್ವಲ್ಪ ಹೊತ್ತು, ಏನೂ ಮಾಡದೇ ಕೂರೋದ್ರಲ್ಲೂ ಒಂದು ತರಹದ ಸುಖ ಇದೆ :)
ha ha ha..howdu howdu..
Post a Comment