"She is worth dying for"
ಅವಳು ಬುಧಿವಂತೆ,ಆಡಂಬರವಿಲ್ಲದ ಸರಳ ಸುಂದರಿ,ಸ್ವತಂತ್ರೆ,ಎಂತಹ ಗಂಡಸರನ್ನೂ ತನ್ನ ಹುಬ್ಬಿನ ತುದಿಯ ಪ್ರೆಶ್ನೆಯಿಂದ ತಬ್ಬಿಬ್ಬಾಗಿಸುವ ಚಾಣಾಕ್ಷೆ, ಒಳಗೇ ಒಬ್ಬ ತಂದೆಗೆ ಹೆದರುವ ಸಣ್ಣ ಹುಡುಗಿಯನ್ನು ಮುಚ್ಚಿಟ್ಟಿಕೊಂಡಿರುವ ಇವತ್ತಿನ, ದುಡಿಯುವ ಪ್ರೋಫೆಶನಲ್ ಹುಡುಗಿ.
ಒಬ್ಬ ಗಂಡಸಿಗೆ ನೋಡಲು ಸುಂದರವಾಗಿರುವ ಹುಡುಗಿ ಆಕರ್ಷಿಸುವುದು ಬಹಳ ಕ್ಷಣಿಕ ಮಾತ್ರ.ಆದರೆ, ತನ್ನ ಬುದ್ದಿಮತ್ತೆಗೆ ಸವಾಲಾಗುವ, ಎಂದಿಗೂ ಒಂದು ಎನಿಗ್ಮ ಆಗಿ ಉಳಿಯುವ ಹುಡುಗಿ ಇನ್ನಿಲ್ಲದಂತೆ ಕಾಡುತ್ತಾಳೆ. ಆಕೆಯ ಮೇಲೆ ಅವನಿಗೆ ಕಾಮವಿರುವುದಿಲ್ಲ, ಅದು ಮೋಹವೂ ಅಲ್ಲ, ವಿವರಿಸಲಾಗದ ಒಂದು ಸ್ಪೂರ್ತಿಅದು. ಚಾಲೆಂಜೂ ಹೌದು.ಎಲ್ಲರಿಗೂ ಬೇಕಿರುವುದೇ ಅದು. "ಸ್ಪೂರ್ತಿ". ಅದಿಲ್ಲದಿದ್ದರೆ ನಮ್ಮ ಜೀವನ, ಪ್ರತಿ ತಿಂಗಳಿನ ಬಿಲ್ಲುಗಳನ್ನು ಭರಿಸುವ ಒಂದು ಲೆಕ್ಕಾಚಾರದ ಸವಾಲಾಗಿ ಮಾತ್ರ ಉಳಿಯುತ್ತದೆ.
ಅದಕ್ಕೆ ಇರಬೇಕು, ಕ್ರಿಯೇಟಿವಿಟಿಯ ಒಂದು ಹಂತ ತಲುಪಿದ ಎಲ್ಲಾ ಕ್ರಿಯಾಶಾಲಿಗಳು ಒಂದು ಸ್ಪೂರ್ತಿ ಗಾಗಿ ತೆರೆದ ಕಣ್ಣಿನಿಂದ ಕಾಯುತ್ತಿರುತ್ತಾರೆ. ಮಧ್ಯರಾತ್ರಿಯ ಶಹರದ ಸ್ಥಬ್ಧ ಮೌನದ ರಸ್ತೆಯಲ್ಲಿ, ಕಾರಿನಲ್ಲಿ ಉಲಿಯುತ್ತಿರುವ ಯಾವುದೋ ಒಂದು ಹಳೇ ಹಿಂದಿ ಹಾಡಿನ ಮೋಡಿಗೆ ಸಿಲುಕಿ, ಹೇಳಲಾಗದ ಭಾವನೆಗಳನ್ನು ಅಕ್ಕಪಕ್ಕದ ಸೀಟಿನಲ್ಲಿ ಕುಳಿತು ತಂಗಾಳಿಗೆ ಮುಖವೊಡ್ಡಿ ಅನುಭವಿಸುವ ಅನುಭವ ಆತನ ಅಥವ ಆಕೆಯ ನಾಳೆಯ ಕೆಲಸದ ಬಹುದೋಡ್ಡ ಇನ್ಸ್ಪಿರೇಷನ್ ಆಗಬಹುದು...ಅವನಿಂದ ಒಂದು ಚಿತ್ರವೋ,ಕವಿತೆಯೋ ಬರೆಸಬಹುದು...ಆಕೆ ಪುಟ್ಟಮಗುವಿನ ಕೆನ್ನೆ ಹಿಂಡಿ, ಹಿಡಿತುಂಬಾ ಚಾಕಲೇಟು ಕೊಡಬಹುದು. ಇದು..ಜೀವನದ ಸತ್ಯ.
ಮೊನ್ನೆ ಒಂದು ಚಿತ್ರ ನೋಡಿದೆ. "ವಿನೈತಾಂಡಿ ವರುವಾನ್" [ನನಗಾಗಿ ಆ ಆಕಾಶವ ದಾಟಿ ಬರುವೆಯಾ..] ಗೌತಮ್ ವಾಸುದೇವನ್ ಮೆನನ್ ನಿರ್ದೇಶನ ಚಿತ್ರ.ಅದ್ಭುತವಾಗಿತ್ತು. ಸುಂದರವಾದ ಪ್ರೇಮಕತೆ. ಚಿತ್ರದ ನಾಯಕಿ, ತ್ರಿಷಾ ಬುಧಿವಂತೆ,ಆಡಂಬರವಿಲ್ಲದ ಸರಳ ಸುಂದರಿ,ಸ್ವತಂತ್ರೆ...ಅವಳ ಹಿಂದೆ ಫಿದಾ ಆದ ಒಬ್ಬ ಹುಡುಗ.
ಬಹಳ ದಿನದ ನಂತರ ಒಂದು ಉತ್ತಮ ಚಿತ್ರ. ಕುಷಿಯಾಯಿತು...ತುಟಿಯಂಚಿನಲ್ಲಿ ಮುಗುಳ್ನಗೆ ಉಳಿಸಿಹೋಯಿತು, ನನ್ನ ಕಲ್ಪನೆಯ ಹುಡುಗಿಯ ನೆನಪಿಗೆ ತಂದು..
No comments:
Post a Comment