ಟ್ಯಾಕ್ಸಿ ಬಂದು ನಿಂತಿದೆ..ಸಂಜೆ ಕಳೆದು ಬಹಳ ಹೊತ್ತಾಗಿ..ಪೂರ್ತಿ ಶಹರ..ನಿದ್ದೆಗೆ ಜಾರೋ ಹೊತ್ತಿನಲ್ಲಿ. ಮದ್ಯರಾತ್ರ್ತಿಯ ಪ್ಲೈಟ್, ಏರ್ಪೋಟಿನ ದೂರದ ದಾರಿ ಬಾಕಿ.
ಮನೆಯವರೆಡೆಗೆ ತಿರುಗಿ "ಬಾಯ್" ಹೇಳಿ, ಮೀಟರು..ಸೀಡಿ ಪ್ಲೇಯರೂ...ಸ್ಪೀಡೋ ಮೀಟರ್ ಡಯಲ್..ಮುಂತಾದವುಗಳಿಂದ,ಒಂದು ಸಣ್ಣ ದೀಪಾವಳಿಯ ಸಂಜೆಯಂತೆ, ಚಿಣಿಮಿಣಿ ಲೈಟು ಹೊತ್ತಿ ಉರಿಯುತ್ತಿರುವ ಟ್ಯಾಕ್ಸಿಯ ಒಳಾಂಗಣ, ಬೆಚ್ಚಗಿನ ಅನುಭೂತಿ ನೀಡುತ್ತದೆ.
ಹೊರಟ ಟ್ಯಾಕ್ಸಿ ನಿಧಾನ ವಾಗಿ ವೇಗ ಪಡೆದು...ಬಿಟ್ಟ ಬಾಣವಾಗುತ್ತಿದೆ. ಎದುರಿನಿಂದ ಬರುವ ಕಾರುಗಳ ಬೆಳಕು ಸಣ್ಣದಾಗಿ ಮೂಡಿ ಬೆಳಕಿನ ಗೆರೆಗಳಂತೆ ನಮ್ಮ ಬದಿಯಲ್ಲಿ ಹಾಯ್ದು..ಬೆನ್ನಹಿಂದೆಲ್ಲೋ ಕರಗುತ್ತಿದೆ.
ದೊಡ್ಡ ರಸ್ತೆಗಳ ರಥಬೀದಿ ಏರ್ಪೋಟ್ ರೋಡ್...ಹೆಚ್ಚು ಜನವಿಲ್ಲ ಬರೀ ಕಾರು...ಇನ್ನೂ ಮುಕ್ಕಾಲು ಘಂಟೆಯ ಹಾದಿ, ಏನು ಮಾಡುವುದು....?
ಫೋನ್ ತೆಗೆದು...ನಂಬರುಗಳ ಊದ್ದ ಪಟ್ಟಿಯಲ್ಲಿ....ಈ ಸರಿ ಹೊತ್ತಿನಲ್ಲಿ ಹೇಳದೇ ಕೇಳದೇ ಪೋನ್ ಮಾಡಿ ಮಾತಾಡಿಸಬಹುದಾದ ನನ್ನ ಗೆಳೆಯ/ಗೆಳತಿ ಯಾರಿದ್ದಾರೆ....???? ಎಂದು ಹುಡುಕುವಾಗ ಅನ್ನಿಸಿದ್ದು..
ಯಾರೂ ಇಲ್ಲ.
ಆಗತಾನೆ ಕೆಲಸ ಮುಗಿಸಿ ಬಂದು ಮನೆಯಲ್ಲಿ ಮಲಗಿರುವವರೇ ಹೆಚ್ಚು..ಇನ್ನು..ಅವರ ಅವರ ಒಡನಾಡಿಯೋಡನೆ ಮಿಕ್ಕವರಿರಬೇಕು...ಯಾಕೆ ತೊಂದರೆ ಕೊಡುವುದು..
ಮೊದಲನಿನ ಹಾಗೆ...ಎಷ್ಟು ಹೊತ್ತಾದರೂ ಸರಿ..ಆತ ಏನು ಅಂದು ಕೊಳ್ಳುತಾನೋ ಎಂದು ಯೋಚಿಸುವ ಅಗತ್ಯ ಇಲ್ಲದೆ ಕರೆ ಮಾಡಿ ಹರಟೆ ಹೋಡೆಯುವ ಅಂಥಹ ಗೆಳೆಯ..ಈಗ ನನ್ನ ಲಿಷ್ಟ್ ನಲ್ಲಿ ಇಲ್ಲ...
ನಿಮ್ಮಲ್ಲಿ ಇದ್ದಾನ?
4 comments:
So true...
ಬದುಕಿನ ಜಂಜಾಟದಲ್ಲಿ ಮನುಷ್ಯನಿಗೆ ಮನುಷ್ಯನ ಜೊತೆ ವ್ಯವಹರಿಸಲು ಸಮಯವೇ ಇಲ್ಲವಾಗಿದೆ. ಇದು ಬದಲಾದರೆ ಒಳ್ಳೆಯದು. ಇಲ್ಲದಿದ್ದರೆ ಮಾನವ ಸಂಬಂಧಗಳು ಹಳಸುವುದು ಸಹಜ.
ಚೆಂದದ ಲೇಖನ
Nange inna idare gurugale :)
nice articles.i like it.
Post a Comment