Friday, June 18, 2010
ನಾನು ತೆಗೆದ ಚಿತ್ರ ಒಂದು ಸಣ್ಣ ವಿವಾದ[?]ದ ಮದ್ಯ
ಪ್ರೇಮ್ ನನ್ನ ಅತ್ಮೀಯ ಮಿತ್ರ. ಶುಕ್ರವಾರ ಹುಟ್ಟಿ ಶುಕ್ರವಾರವೇ ಆಯಸ್ಸು ನಿಗದಿಯಾಗುವ ಚಿತ್ರರಂಗದಲ್ಲಿ, ತನ್ನ ಸ್ಥಾನಕ್ಕಾಗಿ ಹೋರಾಡುತ್ತಿರುವ ನಟ. ಆತನ ಹೊಸ ಚಿತ್ರಕ್ಕೆ ನನ್ನಿಂದಲೇ ಫೋಟೋ ಶೂಟ್ ಆಗಬೇಕೆಂದು ಬಯಸಿ, ಚಿತ್ರಗಳನ್ನು ತೆಗೆಸಿದ. ಎಲ್ಲವೂ ಹೊಸದಾಗಿರಬೇಕೆಂಬ ಸಹಜ ಬಯಕೆಯಲ್ಲಿ, ತಾನೇ ಮುಹೋರ್ತದ ಆಮಂತ್ರಣಪತ್ರಿಕೆ ಅದು ಇದು ಎಂದು ಎಲ್ಲವನ್ನೂ ಡಿಸೈನ್ ಮಾಡಿಸುತ್ತಾ ಇದ್ದ. ಎಲ್ಲವೂ ಸರಿ ಇತ್ತು.
ಮೂನ್ನೆ ಬೆಳಗ್ಗೆ ನೋಡಿದರೆ ಚಿತ್ರತಂಡ ದಲ್ಲಿ ಜಗಳ. ಪ್ರೇಮ ಬಹಳ ಇಷ್ಟ ಪಟ್ಟು, ಡಿಸೈನ್ ನಲ್ಲಿ ಬಳಸಿದ್ದ ಈ ಚಿತ್ರವನ್ನು ನಿರ್ದೇಶಕರು ಕಾರಣ ಹೇಳದೇ ಬದಲಾಯಿಸಿದ್ದರಂತೆ. ಪ್ರೇಮ್ ಗೂ ಕೋಪ ಬಂತು. ಮಾತಿಗೆ ಮಾತಾಯಿತು. ಚಿತ್ರ ಬಿಟ್ಟ.
ಪ್ರಾಚಾರದ ಹಪ ಹಪಿಯಲ್ಲಿದ್ದ ನಿರ್ದೇಶಕರು, ಒಳಗೇ ಮುಗಿಸಿಕೊಳ್ಳಬಹುದಾದ ವಿಷಯವನ್ನು ಮಾದ್ಯಮಕ್ಕೇ ಹೇಳಿ ದೊಡ್ಡ ವಿಷಯ ಮಾಡಿದರು.
ಇದೆಲ್ಲದರ ಮದ್ಯ ನನ್ನ ಚಿತ್ರ ಅಲ್ಲಲ್ಲಿ ಪ್ರಕಟವಾಯಿತು.
ಚಿತ್ರ ಒಳ್ಳೆಯ ಸುದ್ದಿ ಮಾಡಿದ್ದರೆ ನನಗೂ ಕುಷಿಯಾಗುತಿತ್ತು.
ಸದ್ಯದ ಕುಷಿಯ ವಿಚಾರವೆಂದರೆ, ಮೊನ್ನೆ ಪುನೀತ್ ರಾಜ್ ಕುಮಾರ್ ರೊಂದಿಗೆ ಶೂಟ್ ನಡೆಯಿತು. ಸೌತ್ ಸ್ಕೋಪ್ ಎನ್ನುವ ಒಂದು ಮ್ಯಾಗಝೈನ್ ನ ಕವರ್ ಪೇಜಿಗೋಸ್ಕರ ತೆಗೆದ ಚಿತ್ರ, ಕೆಲಸ ಚೆನ್ನಾಗಾಯಿತು.
Subscribe to:
Post Comments (Atom)
No comments:
Post a Comment