ಕಣ್ಣ ತುದಿಗೆ ನೇತು ಬಿದ್ದ ನೆನ್ನೆ ರಾತ್ರಿಯ ಕನಸು...
ಕಣ್ಣ್ ರೆಪ್ಪೆಯ ತೆಗೆಯಲು ಬಿಡಲೇ ಇಲ್ಲ.
ಕನಸಿನದೇನೂ ತಪ್ಪಿಲ್ಲ, ಸಿಹಿಕನಸ ಕೊನೆಗೊಳಿಸಲು
ಮನಸಿರಲಿಲ್ಲ.
ನಟ್ಟ ನಡುವಿನ ಬೇಸಿಗೆಯ ಮದ್ಯಾನಃ ದಲ್ಲಿ
ತಿಳಿಗೊಳದ ತಣ್ಣನೆಯ ನೀರಿನಂತಹ ಕನಸು..
ಕಿವಿಯಂಚಿಗೆ ಇಳಿದಿದ್ದ ಹನಿ ನೀರು ಮಾತ್ರ ಬೆಚ್ಚಗೇಕಿತ್ತು?
ಗೊತ್ತಿಲ್ಲ.
ಬೆಳಗಾಗಿತ್ತು.
1 comment:
ವ್ಹಾವ್ ಈ ಚಿತ್ರದ ನೀರಿನಂತೆಯೇ ತಾಜಾ ಆಗಿವೆ ಸಾಲುಗಳು
Post a Comment